ಗದಗ : ಸೆಪ್ಟೆಂಬರ್ 2 ರಂದು ಅಡವಿಸೋಮಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ಗೋಣಿ ಬಸವೇಶ್ವರನಿಗೆ ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಶ್ರಾವಣ ಕಡೆ ಸೋಮವಾರ ಜಾತ್ರಾ ಮಹೋತ್ಸವ ನಡೆಯಲಿದೆ.
ಭೂಲೋಕದ ಪ್ರಜೆಗಳ ಕಷ್ಟ ಪರಿಹರಿಸುವ ಮಹಾ ಪುರುಷ ಇವನಾಗುವನು. ಇವನು ಗೋಣಿ ಚೀಲದಲ್ಲಿ ಸಿಕ್ಕಿದ್ದರಿಂದ ಗೋಣಿ ಬಸವನೆಂದು ನಾಮಕರಣ ಮಾಡಿದರು.
ಗೋಣಿ ಬಸವ ಜನನ : ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯಲ್ಲಿ ಜನಿಸಿ ಭಕ್ತಿ ಮಾರ್ಗದಿಂದ ಜನರಿಗೆ ಧರ್ಮ ಬೋಧನೆ ದೇವರಲ್ಲಿ ನಂಬಿಕೆಯುಳ್ಳವರಾಗಿ ಬಾಳುವಂತೆ ಪ್ರೇರೆಪಿಸಿ ಅವರಿಗೆಲ್ಲ ಧನ, ಧಾನ್ಯ, ಸಮೃದ್ಧಿಯಾಗಿ ದೊರಕುವಂತೆ ಮಾಡಿ ಬಾಳಲು ಗೋಣಿ ಬಸವಣ್ಣನಿಗೆ ಶಿವಪಾರ್ವತಿ ಆಶೀರ್ವದಿಸಿದರು ಎಂಬ ಪ್ರತೀತಿ ಇದೆ.
ಗೋಣಿ ಬಸವಣ್ಣ ನಾಡಿನ ತುಂಬಾ ಸಂಚರಿಸಿ ಪವಾಡ ತೋರಿಸಿ 777 ಮಠ ಸ್ಥಾಪಿಸಿದನು. ಅಲ್ಲದೇ ಪಂಚಗಣಾಧೀಶ್ವರರ ಮಠಗಳು ಪ್ರಸಿದ್ಧವಾಗಿವೆ.
ಬೆಟ್ಟದ ಮಲ್ಲೇಶ್ವರ, ಬಾಗಲಿ ಕಲ್ಮೇಶ್ವರ, ಕೊಟ್ಟೂರು ಕೊಟ್ಟೂರೇಶ್ವರ, ಕೋಲು ಶಾಂತೇಶ್ವರ, ಹಾಗೂ ಮದ್ದಾನೇಶ್ವರ ಮಠಗಳು ಗೋಚರಿಸಿ ಇಂದಿಗೂ ಜಾತ್ರೆ ಉತ್ಸವಗಳು ನಡೆಯುತ್ತವೆ. ಕೂಲಹಳ್ಳಿ ಗೋಣಿ ಬಸವಣ್ಣನ ಮೂಲ ಮಠವಾದರೆ ಗದಗ ಜಿಲ್ಲೆಯ ಗುಮ್ಮಗೋಳ, ವೆಂಕಟಾಪುರ, ಕುರ್ತುಕೋಟಿ ಅಲ್ಲದೇ ಇನ್ನೂ ಮುಂತಾದ ಗ್ರಾಮಗಳಲ್ಲಿ ಶಾಖಾಮಠ, ದೇವಸ್ಥಾನಗಳು ಇರುವುದು ಸಾಕ್ಷಿಯಾಗಿವೆ.
ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗುವ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸದ ಮುನ್ನ ಗ್ರಾಮದಿಂದ ಕೂಲಹಳ್ಳಿಗೆ ತೆರಳಿ ದೀಪ ಹಚ್ಚಿ ಬಂದ ನಂತರ ರಥೋತ್ಸವದ ಕಾರ್ಯಕ್ರಮಗಳು ಆರಂಭವಾಗುವುದು
ದಿನಾಂಕ :02-09-2024 ಸೋಮವಾರ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ,3 ಗಂಟೆಗೆ ಬಯಲು ಜಂಗಿ ಕುಸ್ತಿ ,ಸಂಜೆ 5 ಗಂಟೆಗೆ ಮಹಾರಥೋತ್ಸವ, ರಾತ್ರಿ 9 ಗಂಟೆಗೆ ಕಲಿಯುಗದ ರಾಯಣ್ಣ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಾಳೆ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ 3 ಗಂಟೆಗೆ ಜಂಗಿ ಕುಸ್ತಿ, ಸಂಜೆ 5 ಗಂಟೆಗೆ ಕಡುಬಿನ ಕಾಳಗ ಜರುಗುತ್ತದೆ.
ಗೋಣಿ ಬಸವೇಶ್ವರ ದೇವಸ್ಥಾನದ ಕಟ್ಟಡ ಸಹಾಯಾರ್ಥ ನೀಡುವವರು ಕಮೀಟಿ ಯವರನ್ನು ಸಂಪರ್ಕಿಸಿ ಸಹಾಯಾರ್ಥ ನೀಡಬೇಕೆಂದು ವಿನಂತಿ