ಗದಗ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ೨೨ ನೇ ವಾರ್ಡಿನ ತಾಜ್ ನಗರದ ರಸ್ತೆಯೋ ಅಥವಾ ಯಮಲೋಕಕ್ಕೆ ಕರೆದೋಯುವ ದಾರಿಯೋ ? ಎಂದು ಸಾರ್ವಜನಿಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ರಸ್ತೆಯನ್ನು ಕಂಡು ಕಾಣದಂತೆ ಇದೇ ರಸ್ತೆಯಲ್ಲಿ ಸಂಚರಿಸುವುದು ಸಾರ್ವಜನಿಕರು ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಅರಿವೇ ಇಲ್ಲದ ಹಾಗೆ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕೇವಲ ಕಾರಿನಲ್ಲಿ ಸಂಚರಿಸುವುದು ಅಲ್ಲ ನಗರದ ೨೨ನೇ ವಾರ್ಡಿನ ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕು ರಸ್ತೆಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದರು ನಗರಸಭೆಯ ಚುನಾಯಿತ ಪ್ರತಿನಿಧಿಗಳು ಚುನಾವಣೆಗೆ ಬಂದಾಗ ಮಾತ್ರ ಬಂದು ಹೋಗುತ್ತಾರೆ ಮತ್ತೆ ಈ ವಾರ್ಡಿನ ಸಮಸ್ಯೆಯ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹಿರಿಯ ನಾಗರಿಕರಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮಹಿಳೆಯರಿಗೆ ಅದರಲ್ಲಿಯೂ ಗರ್ಭಿಣಿ ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅನಾಹುತಗಳಿಗೆ ಆಹ್ವಾನಿಸುತ್ತಿರುವ ಹಾಗೆ ಆಗಿದೆ.
ನಮ್ಮ ವಾರ್ಡಿನ ಅಭಿವೃದ್ಧಿ ನಮ್ಮ ಕಡೆಯಿಂದ ವಸೂಲಿ ಮಾಡಿದ ಕರ ಹಾಗೂ ಟ್ಯಾಕ್ಸ್ ಕಟ್ಟಿದ ದುಡ್ಡಿನಲ್ಲಿ ರಸ್ತೆ,ಬೀದಿ,ಬೀದಿ ದೀಪ,ಗಟಾರು ಮಾಡಿ ಕೊಡಿ ಇಲ್ಲವೇ ನಮ್ಮ ದುಡ್ಡು ಎಲ್ಲಿ ಏನಾಯಿತು? ಎಂದು ಲೆಕ್ಕ ಕೊಡಿ ಇಲ್ಲವೇ ಮುಂದೆ ನಾವುಗಳು ಒಂದು ದಿನ ಬಿದಿಗಿಳಿದು ಪ್ರತಿಭಟನೆ ಮಾಡಬೇಕಾದೀತು ತಿಳಿಯಿರಿ. ಈ ಮೂಲಕ ಪತ್ರಿಕಾ ಪ್ರಕಟಣೆ ಸಂಬಂದಿಸಿದ ಅಧಿಕಾರಿಗಳಿಗೆ ಇಲ್ಲಿಯ ನಿವಾಸಿಗಳು ಸೇರಿ ಚರ್ಚಿಸಿ ಈ ತೀರ್ಮಾನ ತೆಗೆದು ಕೊಳ್ಳಲಾಗಿ ಮುಂದೊಂದು ದಿನ ನಗರಸಭೆಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷರಾದ ಜುನೈದ್ ಉಮಚಗಿ ಎಚ್ಚರಿಕೆ ನೀಡಿದ್ದಾರೆ.