ಗದಗ : ksrtc ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದ ಬಳಿ ನಡೆದಿದೆ.
ಜಗದೀಶ ಚಲವಾದಿ (24) ಮೃತ ದುರ್ದೈವಿ ಎನ್ನಲಾಗಿದೆ.ಕರಮುಡಿ ಗ್ರಾಮದ ಯುವಕ ಎಂದು ತಿಳಿದು ಬಂದಿದೆ.
ಬೈಕ್ ಸವಾರ ಹೊಳೆಅಲೂರಿನಿಂದ ಕರಮುಡಿ ಗ್ರಾಮಕ್ಕೆ ತೆರಳ್ತಿದ್ದಾಗ ಈ ಅಪಘಾತ ನಡೆದಿದೆ.
ರೋಣ ಡಿಪೋ ಗೆ ಸೇರಿದ ksrtc ಬಸ್ ಇದಾಗಿದ್ದು, ಸ್ಥಳಕ್ಕೆ ರೋಣ ಪೊಲೀಸು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.