Wednesday, November 6, 2024
Google search engine
Homeಉದ್ಯೋಗಗದಗ : ಶ್ರೇಷ್ಠ ಶರಣರ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು : ಸಚಿವ ಎಚ್.ಕೆ.ಪಾಟೀಲ್

ಗದಗ : ಶ್ರೇಷ್ಠ ಶರಣರ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು : ಸಚಿವ ಎಚ್.ಕೆ.ಪಾಟೀಲ್

ಜಿಲ್ಲಾಡಳಿತದಲ್ಲಿ ಶ್ರೀ ನುಲಿಯ ಚಂದಯ್ಯನವರ ಜಯಂತಿ

ಗದಗ ಆಗಷ್ಟ 19: ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀ ನುಲಿಯ ಚಂದಯ್ಯನವರ ಜಯಂತಿ ಅಂಗವಾಗಿ ಶ್ರೀ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಅವರು ಮಾತನಾಡಿದರು

ಅನುಭವ ಮಂಟಪದ ಶರಣರಲ್ಲಿಯೇ ದೇವರ ಜೊತೆ ವಾದಕ್ಕಿಳಿದವರಲ್ಲಿ ನುಲಿಯ ಚಂದಯ್ಯನವರು ಒಬ್ಬರು, ಇದರಿಂದ ಅವರ ಗಟ್ಟಿ ಮತ್ತು ದೃಡ ವಿಶ್ವಾಸವುಳ್ಳ ಸ್ವಭಾವ ತಿಳಿದುಬರುತ್ತದೆ. ಅವರಿಗೆ ಶಿವಮೊಗ್ಗದ ಹತ್ತಿರದ ಸಾರ್ವಜನಿಕರು ಕೆರೆಯ ಉಪಯೋಗಕ್ಕೆ ನಿರಾಕರಿಸಿದಾಗ, ಸಮಾಜಕ್ಕೆ ಎದರು ನಿಂತು ಪ್ರತ್ಯೇಕವಾದ ಬಾವಿ ಸೃಷ್ಟಿಸಿದ ಮಹಾನ್ ವ್ಯಕ್ತಿ ನುಲಿಯ ಚಂದಯ್ಯನವರು ಎಂದರು.

ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ಶ್ರೇಷ್ಠ ಶರಣರಿಗೆ ಪುರಾತನ ಕಾಲದಿಂದಲೂ ಅನ್ಯಾಯ ಆಗಿದೆ, ಮೇಲ್ವರ್ಗದವರ ಸಾಹಿತ್ಯ ಮಾತ್ರ ಪ್ರಚಲಿತವಾಗಿದ್ದು , ಹಿಂದುಳಿದ ವರ್ಗಗಳಿಗೆ ಸೇರಿದ ಶರಣರ ಸಾಹಿತ್ಯ ಇಂದಿಗೂ ಲಭ್ಯವಿಲ್ಲ ಮತ್ತು ಹಿಂದುಳಿದ ಸಾಹಿತ್ಯವನ್ನು ಪ್ರೇರೆಪಿಸಲಿಲ್ಲ ಎಂದು ಹೇಳಿದರು.

ಹಾಗಾಗಿ ಶ್ರೇಷ್ಠ ಶರಣರ, ಮಹಾನ್ ಯೋಗಿಗಳ ಜಯಂತಿ ಆಚರಿಸುವುದಕ್ಕೆ ಸರ್ಕಾರ ಪ್ರಾರಂಭಿಸಿತು, ಈ ಮೂಲಕ ಶ್ರೇಷ್ಠ ಶಿವಶರಣರ ನಿಲುವು ಸಾಹಿತ್ಯ ಕಾಯಕಗಳನ್ನು ಅರ್ಥೆÊಸುವ ಕಾರ್ಯ ಆಗಲಿ ಎಂದು ನುಡಿದರು.

ಕೇವಲ ಸಮಾನವಾಗಿ ಹಣ ವಿತರಿಸಿದರೆ ಸಾಮಾಜಿಕ ನ್ಯಾಯ ಬರಲಾರದು, ಸಮಾಜವು ಸಾಂಸ್ಕöÈತಿಕ, ಸಾಹಿತ್ಯಕ, ಆಧ್ಯಾತ್ಮಿಕವಾಗಿ ಮುಂದಾದಾಗ ಮಾತ್ರ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರು ನುಲಿಯ ಚಂದಯ್ಯನವರ ಸಂದೇಶಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಮುಂದಿನ ವರ್ಷದ ಜಯಂತಿ ಆಚರಣೆ ಸಂದರ್ಭದಲ್ಲಿ ನುಲಿಯ ಚಂದಯ್ಯನವರ ವಚನಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಾನಂದ ಭಜಂತ್ರಿ ಮಾತನಾಡಿ, ನುಲಿಯ ಚಂದಯ್ಯನವರು, ಬಸವಣ್ಣನವರ ಸಮಕಾಲೀನವರು, ಗುರು ಭಕ್ತಿ, ಲಿಂಗ ಜಂಗಮ ಕಾಯಕ ಸಿದ್ದಾಂತವನ್ನು ಬಲವಾಗಿ ನಂಬಿದವರು, ಸಮಾಜಕ್ಕೆ ಬೆಳಕು ನೀಡುವಲ್ಲಿ ಶ್ರಮಿಸಿದವರು ಎಂದರು.

ಕಲ್ಯಾಣದ ಕ್ರಾಂತಿ ನಂತರ ಚನ್ನ ಬಸವಣ್ಣನವರ ಅಕ್ಕ ಶಿವಮೊಗ್ಗ ಜಿಲ್ಲೆಯ ಎತ್ತಿನ ಹೊಳೆಯಲ್ಲಿ ಅಕ್ಕ ನಾಗಮ್ಮನವರು ಲಿಂಗಕ್ಯ ಆದರು. ಧರ್ಮ ಕಾಯಕ ನಿಷ್ಟೆ ಸದಾ ಸಿದ್ಧರಾಗಿದ್ದ ಅವರು ಅರಮನೆ ವಾತಾವರಣ ಧಿಕ್ಕರಿಸಿ ಧರ್ಮ ಕಾಯಕ ದಾಸೋಹದಂತಹ ಮೌಲ್ಯಗಳನ್ನು ಪ್ರಚಾರ ಮಾಡುತ್ತಾರೆ. ನುಲಿಯ ಚಂದಯ್ಯನವರು ಸರಳ ಮತ್ತು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದು, ಕಾಯಕ ಅಂದರೆ ನುಲಿ ಚಂದಯ್ಯ ನವರು ಎನ್ನುವಂತೆ ಹೆಸರುವಾಸಿ ಆಗಿದ್ದರು.

ನುಲಿ ಅಂದರೆ ಹಗ್ಗ ಎಂದರ್ಥ. ಹಗ್ಗದಿಂದ ಉರುಳನ್ನು ಹಾಕಿಕೊಳ್ಳಬಹುದು, ಹಾಗೇ ಆ ನಿಷ್ಠೆಯ ಕಾಯಕ ಕಾರ್ಯದಿಂದ ಕೈಲಾಸಕ್ಕೂ ಹೋಗಬಹುದು. ನುಲಿ ಚಂದಯ್ಯನವರು ಸತ್ಯ, ಕಾಯಕದಿಂದ , ಮುಕ್ತಿ ಪಡೆದು ಪ್ರತಿಯೊಬ್ಬರೂ ದುಡಿದು ತಿನ್ನಬೇಕು ಮತ್ತು ದುಡಿದಿದ್ದರಲ್ಲಿ ದಾಸೋಹ ಮಾಡುವ ಸಮಾಜ ನಿರ್ಮಾಣವಾಗಿಬೇಕು ಎಂದು ಅವರು ಸಾರಿ ಹೇಲಿದ್ದಾರೆ ಎಂದು ನುಲಿ ಚಂದಯ್ಯನವರ ಜೀವನ ಕುರಿತು ಸವಿವರವಾಗಿ ಶಿವಾನಂದ ಭಜಂತ್ರಿ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಜಿ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ,ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ.ಸAಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸೇರಿದಂತೆ ಸಮಾಜದ ಗಣ್ಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಮೂವರು ಮಕ್ಕಳೊಂದಿಗೆ ತುಂಗಾಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ! ಪ್ರಕರಣ : ಒಂದು ಮಗುವಿನ ಶವ ಪತ್ತೆ ! ಗದಗ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ ಗದಗ : ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಗದಗ : ಬೈಕ್‌ ಸ್ಕಿಡ್ : ಬೈಕ್‌ ಸವಾರ ಸ್ಥಳದಲ್ಲೇ ಸಾವು ! ಗದಗ :  ಭೀಕರ ರಸ್ತೆ ಅಪಘಾತ : ಲಾರಿ-ಕಾರಿನ ನಡುವೆ ಅಪಘಾತ ದಂಪತಿ ಸ್ಥಳದಲ್ಲೇ ಸಾವು ! ಗದಗ : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ ! ಗದಗ : ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ /ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ : ವೇಳಾ ಪ... ತಾಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕ್ರಿಯೆ ಗದಗ : ಗಜೇಂದ್ರಗಡ ತಹಶೀಲ್ದಾರಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ : ಜಿಲ್ಲಾಧಿಕಾರಿಗಳಿಗೆ ಮನವಿ ಗದಗ : ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ