ಗದಗ ಆಗಷ್ಟ 18 : ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಿ ಗ್ರಾಂ ಪಂಚಾಯತ ಸದ್ಯಸರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.
ಲಕ್ಕುಂಡಿ ಗ್ರಾಮದ ಹಾಲಿ ಗ್ರಾಮ ಪಂಚಾಯತ 7 ನೇ ವಾರ್ಡ್ ನ ಸದ್ಯಸರಾದ ಮಂಜುನಾಥ ತಂದೆ ಮರಿಯಪ್ಪ ಗುಡಸಲಮನಿ (47) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಂದು ತಿಳಿದು ಬಂದಿದೆ.
ರವಿವಾರ ಲಕ್ಕುಂಡಿ ಗ್ರಾಮದ ವೀರಾಪಕ್ಷೇಶ್ವರ ದೇವಸ್ಥಾನ ಹತ್ತಿರ ಇರುವ ಮನೆಯ ಹಿಂದೆ ಇರುವ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಗೆ ಗದಗ ಜಿಮ್ಸ್ ಗೆ ರವಾನಿಸಲಾಗಿದೆ.
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.