Wednesday, March 26, 2025
Google search engine
Homeಉದ್ಯೋಗಗದಗ-ಹರಪ್ಪನಹಳ್ಳಿ ರೈಲ್ವೆ ಮಾರ್ಗ ಹಾಗೂ ವಿವಿಧ ಬೇಡಿಕೆಗಳಿಗೆ : ರಾಜ್ಯಪಾಲರ ಭವನಕ್ಕೆ ಚಲೋ ಪ್ರತಿಭಟನೆ ಚಾಲನೆ 

ಗದಗ-ಹರಪ್ಪನಹಳ್ಳಿ ರೈಲ್ವೆ ಮಾರ್ಗ ಹಾಗೂ ವಿವಿಧ ಬೇಡಿಕೆಗಳಿಗೆ : ರಾಜ್ಯಪಾಲರ ಭವನಕ್ಕೆ ಚಲೋ ಪ್ರತಿಭಟನೆ ಚಾಲನೆ 

ಗದಗ ೧೯: ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆ, ಅದ್ವಿಕ್ ವಿವಿಧ್ದೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿ ದಿನಾಂಕ ೧೯/೦೮/೨೦೨೪ ಗದಗ ಹರಪ್ಪನಹಳ್ಳಿ ರೈಲ್ವೆ ಮಾರ್ಗಕ್ಕೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಪಾಲರ ಭವನಕ್ಕೆ ಚಲೋ ಪ್ರತಿಭಟನೆ ಚಾಲನೆಯನ್ನು ನೀಡಲಾಯಿತು.

ಶ್ರೀ ಬಸವರಾಜ ಯಲ್ಲಪ್ಪ ನವಲಗುಂದ ಸಂಚಾಲಕರು ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆಯವರು ಮಾತನಾಡುತ್ತ ಮುಂಡರಗಿ ಪಟ್ಟಣದ ಸಾರ್ವಜನಿಕರ ಮುಖ್ಯ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಕಳೆದ ೧೪ ಗತಿಸಿ ಹೋಗಿದೆ ಕೇಂದ್ರ ರೇಲ್ವೆ ಮುಂಗಡ ಪತ್ರದಲ್ಲಿ ೨೦೧೪ರಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಪರಿಷ್ಕೃತ ಮಂಜೂರಾಗಾಗಿ ೨೦೧೫ ರಲ್ಲಿ ೯೪ ಕಿ. ಮಿ. ಗದಗದಿಂದ-ಹರಪನಹಳ್ಳಿವರೆಗೂ ಸರ್ವೆ ಮಾಡಿ ೨೦೧೯ ರಲ್ಲಿ ವರದಿ ನೀಡಿದ ದೆಹಲಿ ರೈಲ್ವೆ ಬೋರ್ಡನವರು ಅವೈಜ್ಞಾನಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ನೀಡಿದ್ದಾರೆ. ಗದಗ, ಮುಂಡರಗಿ, ಹೂವಿನ ಹಡಗಲಿ, ಹರಪ್ಪನಹಳ್ಳಿ, ಹರಿಹರ, ಅರಿಶಿಕೇರಿ ಮಾರ್ಗವಾಗಿ ಬೆಂಗಳೂರು ತಲುಪುವ ಮಾರ್ಗವನ್ನು ಕೇವಲ ೯೪ ಕಿ.ಮಿರವರಿಗೆ ರೂ. ೮೧೩.೧೪ ಕೋಟಿ ಭರಣ ಮಾಡಿದರೆ ಲಾಭವಾಗುವದಿಲ್ಲವೆಂದು ನೀಡಿದ ವರದಿಯನ್ನು ಮರಳಿ ಪಡೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕು. ರಾಜ್ಯ ಸರಕಾರದಿಂದ ಮತ್ತು ಸಾರ್ವಜನಿಕರ ವಿವಿಧ ಬೇಡಿಕೆಗಳಾದ ಆಶ್ರಯ ನಿರ್ಗತಿಕರಿಗೆ ಮನೆ, ಕೊಪ್ಪಳ, ಮುಂಡರಗಿ, ಶಿಗ್ಗಾವಿ ರಾಷ್ಟಿçÃಯ ಹೆದ್ದಾರಿ, ಬಗರ್ ಹುಕುಂ ಹಕ್ಕು ಪತ್ರ, ಪಿ.ಟಿ.ಸಿ.ಎಲ್. ಕಾಯ್ದೆ ೧೯೭೮ ಪುನಃರ ಸ್ಥಾಪನೆ, ಕರ್ನಾಟಕ ರಾಜ್ಯ ಆದ್ಯಂತ ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸಬೇಕು. ತಾಮ್ರಗುಂಡಿ ಗ್ರಾಮದ ೨೦೦೭ ರಲ್ಲಿ ಕೆರೆಯ ಒಡ್ಡು ಒಡೆದು ಹಾಳಾದ ರೈತ ಜಮೀನುಗಳಿಗೆ ಪರಹಾರ ಹೀಗೆ ಹಲವಾರು ವಿಷಯಗಳ ಬಗ್ಗೆ ರಾಜ್ಯ ಸರಕಾರ ಮನವಿ ಮಾಡಿದರು ಕ್ರಮ ತೆಗೆದುಕೊಂಡಿಲ್ಲ. ೧೨-೦೧-೨೦೨೪ ರಂದು ವಿಷಯಗಳ ಬಗ್ಗೆ ರಾಜ್ಯ ಸರಕಾರ ಮನವಿ ಮಾಡಿದರು ಕ್ರಮ ತೆಗೆದುಕೊಂಡಿಲ್ಲ. ೧೨/೦೧/೨೦೨೪ ರಂದು ಪ್ರಧಾನ ಮಂತ್ರಿಗಳು ಬರೆದ ಪತ್ರಕ್ಕೆ ಉತ್ತರ ನೀಡದ ಜನ ವಿರೋಧಿ ರಾಜ್ಯ ಸರಕಾರದ ಮೇಲೆ ದೂರು ಸಲ್ಲಿಸಲು ಮುಂಡರಗಿಯಿAದ ರಾಜ್ಯಭವನ ಚಲೋ ಪ್ರತಿಭಟನೆಯನ್ನು ಮುಂಡರಗಿಯಿAದಾ ದಿನಾಂಕ ೧೯/೦೮/೨೦೨೪ ರಂದು ಸೋಮವಾರ ದಿವಸ ಬೆಳಿಗ್ಗೆ ೧೧-೦೦ ಗಂಟೆಗೆ ಮುಂಡರಗಿ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆಗೆ ಚಾಲನ ನೀಡಿ ಮುಂಡರಗಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಯನ್ನು ದಿನಾಂಕ ೨೦/೦೮/೨೦೨೪ ರಂದು ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ನಡೆಸಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಬಸಪ್ಪ ವಡ್ಡರ, ಮೈನುದ್ದೀನ ಗರಡಿಮನಿ, ಸುರೇಶ ಕುಂಬಾರ, ಸುಭಾಸ ಕಂಬಾರ, ಮಂಜುನಾಥ ಹುಬ್ಬಳ್ಳಿ, ಈರಣ್ಣ ಹೊಂಬಾಳಿ, ಶಶಿಕುಮಾರ ಬಾವಿಮನಿ, ಗುಡದಪ್ಪ ತಳಗೇರಿ ಕೊಟ್ರೇಶ ದ್ಯಾಮಣ್ಣವರ, ಹನಮಂತ ಬಚ್ಚೆನಹಳ್ಳಿ, ನಜೀರಸಾಬ ಅರಕೇರಿ, ರಾಜಾಭಕ್ಷಿ ಯಕ್ಲಾಸಪೂರ, ರಿಯಾಜ್ ಹೊಸಪೇಟ, ಜಲಾಲಸಾಬ ಡಂಬಳ, ಮಂಜುನಾಥ ಕಟ್ಟಿಮನಿ, ಅಲ್ಲಾಭಕ್ಷಿ ಹಾತಲಗೇರಿ, ಮರದನಸಾಬ ತಳಗಡೆ, ಕೆಂಚಪ್ಪ ಗಡಾದ, ಜಗದೀಶ ಕೆಂಚಗಾರ, ಬಸವರಾಜ ಕುಂಬಾರ, ದೇವಪ್ಪ ಕುಂಬಾರ, ಚಂದ್ರಶೇಖರ ಮಡಿವಾಳರ, ಈರಣ್ಣ ಬಡಿಗೇರ, ಮೌಲಾಹುಸೇನ ಸಯ್ಯದ, ಮಹಾಂತೇಶ ಹಡಪದ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಂಡರಗಿ ಪೊಲೀಸ ಇನ್ಸಪೆಕ್ಟರ್ ಆದೇಶದ ಮೇರೆಗೆ ಪೊಲೀಸರು ಬಂದೂಬಸ್ತ ಕೈಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ