ಗದಗ ೧೫: ಜೈ ಭೀಮ ಸಂಘರ್ಷ ಸಮಿತಿ ಅಲ್ಪಸಂಖ್ಯಾತರ ಘಟಕದ ಗದಗ ಜಿಲ್ಲೆ ಗೌರವಾಧ್ಯಕ್ಷರಾಗಿ ಸಮೀರ ಎ. ಜಮಾದಾರ ಅವರನ್ನು ರಾಜಾಧ್ಯಾಕ್ಷರಾದ ಬಸಂತಕುಮಾರ ಅನಂತಪುರ ಇವರ ಆದೇಶದ ಮೇರೆಗೆ ಗದಗ ಜಿಲ್ಲಾಧ್ಯಕ್ಷರು ನೇಮಕ ಆದೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜೈ ಭೀಮ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ ಎಫ್. ತೌಜಲ್, ಜೈ ಭೀಮ್ ಸಂಘರ್ಷ ಸಮಿತಿಯ ರೋಣ ತಾಲೂಕ ಅಧ್ಯಕ್ಷರಾದ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ರಾಷ್ಟಿçÃನ್ ಜೋಸೆಪ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ರಾಜೇಶ ವಿ. ಶೆಟ್ಟರ್, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾಧ್ಯಕ್ಷರಾದ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಎಸ್. ಕೆ. ಕುನ್ನಿಬಾವಿ, ನಜೀರ ಕುನ್ನಿಬಾವಿ, ಜೈ ಭೀಮ್ ಸಂಘರ್ಷ ಸಮಿತಿ ಸಹ-ಕಾರ್ಯದರ್ಶಿ ಶಿವಣ್ಣ ಕಡಿವಾಲ, ಯುವ ಘಟಕ ಅಧ್ಯಕ್ಷ ಪ್ರೇಮಕುಮಾರ ಹುಬ್ಬಳ್ಳಿ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ ಉಪಸ್ಥಿತರಿದ್ದರು.