ಗದಗ ೧೫: ಗದಗ ಜಿಲ್ಲಾ ಗ್ರಾಹಕರ ವಸ್ತುಗಳ ವಿತರಕ ಸಂಘದಿಂದ ಗದಗ ಐ ಎಮ್ ಏ ರಕ್ತ ಬಂಡಾರದಲ್ಲಿ ರಕ್ತದಾನ ಮಾಡಲಾಯಿತು ೭೮ನೇ ಸ್ವಾತಂತ್ರೋತ್ಸವ ಅಂಗವಾಗಿ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಚೆನ್ನಯ್ಯ ಹೀರೆಮಠರವರು ಹಣವನ್ನು ಕೊಟ್ಟು ಏನನ್ನಾದರೂ ಕೊಂಡುಕೊಳ್ಳಬಹುದು ಆದರೆ ಜೀವ ಉಳಿಸುವ ರಕ್ತಕ್ಕೆ ಸರಿಸಮಾನವಾದ ಮತ್ತೊಂದು ವಸ್ತು ಇಲ್ಲ ಅನಾಹುತಗಳು ಅಪಘಾತಗಳು ನಿರೀಕ್ಷೆ ಮಾಡದೆ ಬರುವ ಘಟನೆಗಳು ಈ ಘಟನೆಯಲ್ಲಿ ಯಾರಾದರೂ ತೊಂದರೆ ಗೊಳಗಾಗಬಹುದು ಅದರಲ್ಲಿ ನಮ್ಮವರು ಸಹಿತ ಇರಬಹುದು ಹೀಗಾಗಿ ಮನುಷ್ಯನಿಗೆ ಮನುಷ್ಯತ್ವ ಇದ್ದಲ್ಲಿ ರಕ್ತದಾನ ಅವಶ್ಯವಾಗಿದೆ ರಕ್ತದಾನ ಮಾಡುವ ವ್ಯಕ್ತಿ ಆರೋಗ್ಯವಾಗಿದ್ದರೆ ಸರಿಯಾದ ಆಹಾರ ಸೇವನೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಳೆದುಕೊಂಡ ರಕ್ತವನ್ನು ದೇಹ ಉತ್ಪಾದಿಸುತ್ತದೆ ದಾನ ಮಾಡಿದ ವ್ಯಕ್ತಿಯು ಸಹಿತ ಆರೋಗ್ಯವಾಗಿರುತ್ತಾನೆ ಎಲ್ಲ ದಾನಗಳಗಿಂತ ರಕ್ತದಾನ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರವಿ ಹುಬ್ಬಳ್ಳಿ ರಾಜಶೇಖರ್ ಬಿ ಎಂ ಸಂತೋಷ್ ಬಾಪುರೆ ವಸಂತ ನಂದರಗಿ. ಸುನಿಲ್ ಆರಿ. ಶಶಿಧರ್ ಕಿತ್ತಲಿ. ಯಲ್ಲರೆಡ್ಡಿ ಇಟಗಿ. ತೋಂಟೇಶ್ ಬೀರಲಿಂಗಯ್ಯನಮಠ. ಜಗದೀಶ್ ಹೆಬಸೂರ್. ಮುಂತಾದವರು ರಕ್ತದಾನ ಮಾಡಿದರು ಇವರಿಗೆ ಶಕ್ತಿವರ್ಧಕ್ಕೆ ಪಾನಿಯ ನೀಡಿ ಶುಭ ಹಾರೈಸಲಾಯಿತು.