ಗದಗ ಅಗಸ್ಟ 15 : ಗದುಗಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು 78 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.
ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ಅವರು ವಹಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ ಪಡೆಯ ನೇತೃತ್ವವನ್ನು ಆರ್.ಎಸ್.ಎ ಚನ್ನಪ್ಪ ಕೆರೂರ ವಹಿಸಿದ್ದರು. ನಾಗರಿಕ ಪೊಲೀಸ ಪಡೆಯ ನೇತೃತ್ವವನ್ನು ನಿಸ್ತಂತು ಘಟಕದ ಪಿಎಸ್‌ಐ ಕಾಳಪ್ಪ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್.ವಸ್ತçದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಎಫ್.ಎಸ್.ಒ, ಅಬಕಾರಿ ದಳದ ನೇತೃತ್ವವನ್ನು ಶ್ರೀಮತಿ ಆಶಾ ರಾಣಿ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ ಬಿಸನಳ್ಳಿ, 38 ಕೆಎಆರ್‌ಬಟಾಲಿನ್ ಗದಗನ ನೇತೃತ್ವವನ್ನು ಕುಮಾರ್ ಪ್ರಸನ್ನ, 38 ಕೆ ಎ ಆರ್ ಬಟಾಲಿಯನ್ ಗದಗದ ನೇತೃತ್ವವನ್ನು ಅಭಿಲಾಷಾ, ನಗರದ ಎಸ್.ಎಂ.ಕೃಷ್ಣಾ ನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ನೇತೃತ್ವವನ್ನು ಕುಮಾರಿ ಅಂಜನಾ, ವಿ.ಡಿ.ಎಸ್.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ ನೇತೃತ್ವವನ್ನು ಕುಮಾರಿ ಸಹನಾ, ಎಸ್.ಎಂ.ಕೃಷ್ಣಾ ನಗರದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ನೇತೃತ್ವನವನು ಕುಮಾರಿ ಸ್ನೇಹಾ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನೇತೃತ್ವವನ್ನು ವಿಜಯ ಬಡಿಗೇರ, ಸಿ.ಎಸ್.ಪಾಟೀಲ ಬಾಲಕಿಯರ ಪ್ರೌಢಶಾಲೆಯ ನೇತೃತ್ವವನ್ನು ಕುಮಾರಿ ಗೀತಾ, ಬೆಟಗೇರಿಯ ಸೇಂಟ್ ಜಾನ್ ಪ್ರೌಢಶಾಲೆಯ ನೇತೃತ್ವವನ್ನು ಕುಮಾರ್ ಸೋಮಶೇಖರ, ಬಸವೇಶ್ವರ ಕನ್ನಡ ಮಾಧ್ಯಮ ಬಾಲಕರ ಪ್ರೌಢಶಾಲೆಯ ನೇತೃತ್ವವನ್ನು ಕುಮಾರ ಸಮರ್ಥ, ಹುಲಕೋಟಿಯ ಕೆ.ಎಚ್.ಪಾಟೀಲ ವಿದ್ಯಾಮಂದಿರದ ನೇತೃತ್ವವನ್ನು ಕುಮಾರ ಶಿವರಾಜ ವಹಿಸಿದ್ದರು.
ಪಥ ಸಂಚಲನದಲ್ಲಿ ಪಾಲ್ಗೊಂಡ ಸಾಮಾನ್ಯ ವಿಭಾಗದ ಬೆಟಗೇರಿಯ ಸೇಂಟ್ ಜಾನ್ ಪ್ರೌಢಶಾಲೆಯು ಪ್ರಥಮ ಸ್ಥಾನ, ಭಾರತ ಸೇವಾ ದಳದ ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ದ್ವಿತೀಯ ಹಾಗೂ ಎನ್.ಸಿ.ಸಿ.ಸೀನಿಯರ್ಸ ಗರ್ಲ್ಸ್ ದಳದ 38 ಕೆಎಆರ್ ಬಟಾಲಿಯನ್ ತೃತೀಯ ಸ್ಥಾನ ಪಡೆದವು. ಜಿಲ್ಲಾ ಪೋಲಿಸ ಬ್ಯಾಂಡಿನ ಸಂಗೀತದ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತç ಮೀಸಲು ಪಡೆ, ಜಿಲ್ಲಾ ನಾಗರೀಕ ಪೋಲಿಸ ಪಡೆÀ, ಹೋಮಗಾರ್ಡ, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿ ಶಾಮಕ ದಳ, ಎನ್.ಸಿ.ಸಿ ಸೀನಿರ‍್ಸ ಬಾಯ್ಸ ಹಾಗೂ ಗರ್ಲ್ಸ, ಜನರಲ್ ಹಾಗೂ ಸೇವಾ ದಳಗಳು ಸಚಿವರಿಗೆ ಗೌರವವಂದನೆ ನೀಡಿದವು.
ಸ್ವಾತಂತ್ರೋತ್ಸವ ದಿನಾಚರಣೆಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.
ಸನ್ಮಾನಿತರು:
ಆರಕ್ಷಕರ/ ಗೃಹ ರಕ್ಷಕ ದಳ/ ಎನ್.ಸಿ.ಸಿ.ಸೇವಾ ವಿಭಾಗ.: ಆರಕ್ಷಕರ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಗದಗ ಗ್ರಾಮೀಣ ಪಿ.ಎಸ್.ಐ. ಬಿ.ಎಚ್.ಗುಡ್ಲೂನೂರ, ಸನ್ಮಾನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿರುವುದಕ್ಕೆ ಮಾಜಿ ಸಮಾದೇಷ್ಟರಾದ ವಿಶ್ವನಾಥ ಯಳಮಲಿ, ಎನ್.ಸಿ.ಸಿ.ಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಎ.ಎಸ್.ಎಸ್.ಕಾಮರ್ಸ ಕಾಲೇಜಿನ ಕು. ದರ್ಶನ ನಾಯ್ಡು.
ಮಾಧ್ಯಮ ವಿಭಾಗ : ಪ್ರಜಾವಾಣಿ ಜಿಲ್ಲಾ ವರದಿಗಾರ ಸತೀಶ ಬೆಳ್ಳಕ್ಕಿ, ವಿಸ್ತಾರ ನ್ಯೂಸ್ ಕ್ಯಾಮರಾಮನ್ ಪ್ರಕಾಶ ಗುದ್ದಿನ, ರಿಪಬ್ಲಿಕ್ ಕನ್ನಡ ಜಿಲ್ಲಾ ವರದಿಗಾರ ಮಂಜು ಪತ್ತಾರ, ಉದಯವಾಣಿ ಛಾಯಾ ಗ್ರಾಹಕ ವಿನಾಯಕ ಚೌಡಾಪುರ, ಕನ್ನಡ ಪ್ರಭ ಛಾಯಾಗ್ರಾಹಕ ಶಂಕರ ಗುರಿಕಾರ ಇವರ ಸೇವೆಯನ್ನು ಗುರುತಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಇತರೆ ವಿಭಾಗ : 50 ವರ್ಷಗಳಿಂದ ಜನಪದ ಕ್ಷೇತ್ರದಲ್ಲಿ ಕಲಾಸೇವೆ ಸಲ್ಲಿಸುತ್ತಿದ್ದು, ಆಕಾಶವಾಣಿಯ ಎ ಗ್ರೇಡ್ ಪ್ರಶಸ್ತಿ ಪಡೆದಿದ್ದಕ್ಕಾಗಿ ದ್ಯಾಮಣ್ಣ ಗಡಿಯಪ್ಪ ಬಡಿಗೇರ, 50 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕಲಾ ಸೇವೆ ಸಲ್ಲಿಸುತ್ತಿದ್ದು ಆಕಾಶವಾಣಿಯ ಬಿ ಹೈ ಗ್ರೇಡ್ ಪಡೆದಿದ್ದಕ್ಕ್ಕಾಗಿ ದತ್ತಾತ್ತೇಯ ಎನ್ ಕಲಬುರ್ಗಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ನೀಡಲಾಗುವ ಡಾ.ಡಿ.ಸಿ.ಪಾವಟೆ ರಾಷ್ಟಿçÃಯ ಸೇವಾ ಯೋಜನೆಯ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಪ್ರೊ. ಬಾಹುಬಲಿ ಪಿ ಜೈನ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಕ್ರೀಡಾ ಹಾಗೂ ಇತರೆ ವಿಭಾಗ : ಉಚಿತ ಯೋಗ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಉತ್ತಮ ಸಮಾಜ ಸೇವೆ ಮಾಡಿದ್ದಕ್ಕಾಗಿ ಡಾ.ಮಂಗಳಾ ಚಂದ್ರಕಾAತ ಇಟಗಿ (ಸಜ್ಜನರ), ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಶ್ರೀಮತಿ ಎಸ್.ಎಸ್.ಗೌಡರ, ಕಬಡ್ಡಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಸಹದೇವ ಗಣಾಚಾರಿ, ವಾಲಿಬಾಲ್ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಇಕ್ಬಾಲ್ ಮುಲ್ಲಾ , ವಾಲಿಬಾಲ್ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಗಿ ವೈ.ಕೆ. ಚೌಡಾಪೂರ, 2023-24 ನೇ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಕ್ಕಾಗಿ ಶ್ರೀಮತಿ ಮಂಜುಳಾ ಇಟಗಿ, 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಕು. ಪವಿತ್ರಾ ಹೊಸಳ್ಳಿ, 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಕ್ರಿಯಾ ಶಾ, 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಗಿ ಪುಷ್ಪಾ ಐ ಅಂಗಡಿ, 33 ನೇ ಸಬ್ ಜೂನಿಯರ್ ರಾಷ್ಟಿçÃಯ ಖೋಖೋ ಚಾಂಪಿನ್ ಶಿಪ್ ದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಗಿ ಕು.ನವರಿನ ಶರೀಫ ಸಾನ ನದಾಫ್, ಗೋವಾಟಿಯಲ್ಲಿ ನಡೆದ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಹಾಕಿ ಪಂದ್ಯಾವಳಿಯಲ್ಲಿ ಬಾಗವಹಿಸಿ ದ್ವಿತೀಯ ಸ್ಥಾನ ಪಡೆದ ಕು. ನಿಖೇತ ಚಂದನ ಗಾಗಡೆ, ಅಗ್ನಿ ಶಾಮಕ ಠಾಣೆ ತುರ್ತು ಸೇವೆಗಳ ಇಲಾಖೆಯಲ್ಲಿ ಹಾಗೂ ಕ್ರೀಡೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿ 2024-25 ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದ ಪ್ರಧಾನಿ ಮುತ್ತಣ್ಣ, ಕೋಯಿಂಬತ್ತೂರಿನಲ್ಲಿ ನಡೆದ 2 ನೇ ಸೌಥ್ ಝೋನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ 2024 ರಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮಾರುತಿ ಕರಿಯವರ, ಕೇರಳದಲ್ಲಿ ನಡೆದ 2 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮೆನ ಸೌಥ ಝೋನ್ ಚಾಂಪಿಯನ್ ಶಿಪ್‌ದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ ಆದರ್ಶ ಗೋವಿಂದ ಮುಟಗಾರ ಇವರನ್ನು ಸನ್ಮಾನಿಸಲಾಯಿತು.
ಸೌಲಭ್ಯ ವಿತರಣೆ : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಫಲಾನುಭವಿ ಆಧಾರಿತ ಯೋಜನೆಗಳಾದ ಟಾಕಿಂಗ್ ಲ್ಯಾಪ್ ಟಾಪ್-1, ಬ್ರೆöÊಲ್ ಕಿಟ್ -1 ,ಹೊಲಿಗೆ ಯಂತ್ರ -2, ಯಂತ್ರಚಾಲಿತ ತ್ರಿಚಕ್ರ ವಾಹನ-17 ಮತ್ತು ವಿವಿಧ ಸಲಕರಣೆಗಳ ವಿತರಣೆ ಮಾಡಲಾಯಿತು.
ಉಪಸ್ಥಿತಿ: ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.