ಗದಗ ೨೬: ಅಶ್ವಿನಿ ಪ್ರಕಾಶನ ಅಧ್ಯಕ್ಷರು ಹಾಗೂ ಡಾ. ವ್ಹಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ಡಾ. ವ್ಹಿ. ವ್ಹಿ. ಹಿರೇಮಠರಿಗೆ ಈ ಚಾಲುಕ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಎಲ್ಲಿ ಶಕ್ತಿ ಇದೆಯೋ ಅಲ್ಲಿ ಕಾರ್ಯವಾಗುತ್ತದೆ ತನ್ನ ಶಕ್ತಿಗಳನ್ನು ಸನ್ನಿವೇಶಗಳ ಸೂಕ್ತ ಕ್ಷಣವನ್ನರಿತು ಕರ್ತವ್ಯ ಕೈಗೊಂಡಾಗ ಮನುಷ್ಯ ಶ್ರೇಷ್ಠ ವ್ಯಕ್ತಿಯಾಗುತ್ತಾನೆ ಕಾಯಕದಲ್ಲಿ ಸಾಧಕರಾಗುತ್ತಾರೆ.ಇಂತಹ ಯುಕ್ತಿ ಶಕ್ತಿಗಳನ್ನು ಮೇಳೈಸಿಕೊಂಡು ಸದಾ ಕಾಯಕದಲ್ಲಿ ತೊಡಗಿಸಿಕೊಂಡು ಯಶನ್ನು ಹೊಂದುತ್ತಾ ಸಾಗುತ್ತಿರುವ ಶ್ರೀಮತಿ. ಡಾ. ವ್ಹಿ. ವ್ಹಿ. ಹಿರೇಮಠರಿಗೆ ಜುಲೈ ೨೮ರಂದು ಬಾದಾಮಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರು ಶ್ರೀ ಮಾತಾ ಪ್ರಕಾಶನ ಕರ್ನಾಟಕ ಹಗರಿಬೊಮ್ಮನಹಳ್ಳಿ ರಾಷ್ಟ್ರೀಯ ಚಾಲುಕ್ಯ ಸೇವಾರತ್ನ ಪ್ರಶಸ್ತಿಯನ್ನು ಶ್ರೀಮತಿ ಡಾ. ವ್ಹಿ. ವ್ಹಿ. ಹಿರೇಮಠರಿಗೆ ಗೌರವಪೂರ್ವಕವಾಗಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗರಾಜ ತಂಬ್ರಳ್ಳಿ ಅಧ್ಯಕ್ಷರು ತಾಲುಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.