ಗದಗ ೨೬: ಮಣಕವಾಡದ ಮಹಿಮಾಪುರುಷ ಶ್ರೀ ಗುರುಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ-೧೩೦ ಕಾರ್ಯಕ್ರಮ ದಿ. ೨೮-೦೭-೨೦೨೪ ರಂದು ರವಿವಾರ ಮುಂಜಾನೆ ೧೧-೦೦ ಗಂಟೆಗೆ ನಗರದ ಲಖಾನಿ ಆಸ್ಪತ್ರೆ ಎದುರಿಗಿನ ಶ್ರೀ ಮೃತ್ಯುಂಜಯ ಗುರುಕುಲ ಆಶ್ರಮದ ಸಭಾಭವನದಲ್ಲಿ ಜರುಗಲಿದೆ.
ಹಿರಿಯ ಸಾಹಿತಿಗಳಾದ ಐ. ಕೆ. ಕಮ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸುವರು. ಎನ್.ಸಿ.ಸಿ. ಇಲಾಖೆಯ ಯುವ ಸಾಹಿತಿ ದೀನಬಂಧು ಎಸ್. ಆದಿಯವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಿವೃತ್ತ ಗುರುಮಾತೆಯರಾದ ಶ್ರೀಮತಿ ರತ್ನಾ ಘಾರ್ಗಿ ಭಕ್ತಿ ಸೇವೆ ವಹಿಸಿಕೊಳ್ಳುವರು.
ನಾಗಾವಿಯ ಮೃತ್ಯುಂಜಯ ಹಟ್ಟಿ, ಹಿರೇಹಂದಿಗೋಳದ ಶಿವಶಂಕ್ರಪ್ಪ ಆರಟ್ಟಿ, ಶಿವಣ್ಣ ಒಡೆಯರ, ಎಚ್. ಎನ್. ಕುರಿ, ಸಂಭಾಪೂರದ ರಾಯಪ್ಪಜ್ಜ ನಾಗನೂರ, ರಾಜೇಂದ್ರಸಾ ಕಲಬುರ್ಗಿ, ಡಿ. ಜೆ. ಪಾಟೀಲ, ಅನರ್ಘ್ಯ ಸಂಗೀತ ಪಾಠಶಾಲೆಯ ಸಂಚಾಲಕರಾದ ಶ್ರೀಮತಿ ವನಮಾಲ ಮಾನಶೆಟ್ಟಿ, ಕಾಶೀಮಸಾಬ ಹವಾಲ್ದಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಅದೇ ದಿನ ಮಧ್ಯಾಹ್ನ ೧-೦೦ ಗಂಟೆಗೆ ಶ್ರೀ ಗುರುಮೃತ್ಯುಂಜಯ ಸೇವಾ ಸಮಿತಿ ಸೌಹಾರ್ದಮಹಾಮನೆ ವೇದಿಕೆ ಕಾರ್ಯಕಾರಿಣಿ ಸಭೆ ಜರುಗಲಿದೆ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಗುರು ಮೃತ್ಯುಂಜಯ ಅಪ್ಪನ ಕೃಪೆಗೆ ಪಾತ್ರರಾಗಲು ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಮ್, ಅಕ್ರಮ, ಕುಮಾರಿ ಸ್ನೇಹಾ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.