Wednesday, March 26, 2025
Google search engine
Homeಗದಗಗದಗ : ಮಿಲಾನ್ ಫೌಂಡೇಶನ್ ವತಿಯಿಂದ ಗರ್ಲ್ ಐಕಾನ್ ಮಕ್ಕಳಿಗೆ ಉಚಿತ ಕಲಿಕಾ ಕಿಟ್ ವಿತರಣೆ

ಗದಗ : ಮಿಲಾನ್ ಫೌಂಡೇಶನ್ ವತಿಯಿಂದ ಗರ್ಲ್ ಐಕಾನ್ ಮಕ್ಕಳಿಗೆ ಉಚಿತ ಕಲಿಕಾ ಕಿಟ್ ವಿತರಣೆ

ಗದಗ  : ನಗರದ  ಅಕ್ಕನ ಬಳಗ ಸಭಾ ಭವನದಲ್ಲಿ ಮಿಲಾನ್ ಫೌಂಡೇಶನ್ ಹಾಗೂ ಬಾಗಲಕೋಟೆ ಜಿಲ್ಲೆಯ ಗರ್ಲ್ ಐಕಾನ್ ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ಹಾಗೂ ಶಿಕ್ಷಣ ಪೂರಕವಾದ ಕಲಿಕಾ ಕಿಟ್ ಉಚಿತವಾಗಿ ವಿತರಿಸಲಾಯಿತು.

ಸಂಯೋಜಕಿ ರೂಪಾ ಮರಿಗೌಡ್ರ ಮಾತನಾಡಿ, ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಹೇಳಿ ಕೊಡುವ ಮೂಲಕ ಬಾಲಕಿಯರಿಗೆ ಪ್ರೋತ್ಸಾಹಿಸಿದರು. ಮಿಲಾನ್ ಪೌಂಡೇಶನ್ ೨೦೦೭ ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಾಗಿದ್ದು, ಕಿಶೋರಿಯರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹಿಸಲಿದೆ. ಮಹಿಳೆಯರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವರ ಕನಸುಗಳನ್ನು ನನಸಾಗಿಸುವಲ್ಲಿ ಈ ಸಂಸ್ಥೆಯು ಸಹಾಯಕವಾಗಿದೆ ಎಂದರು.

ಸುರಕ್ಷಿತ, ಆರೋಗ್ಯವಂತ ಮತ್ತು ವಿದ್ಯಾವಂತ ಸಮಾಜದವನ್ನು ಸೃಷ್ಟಿಮಾಡುವಲ್ಲಿ ಮಿಲಾನ್ ಕಿಶೋರಿಯರಿಗೆ ಮಹತ್ವ ಪೂರ್ಣವಾಗಿ ಸಹಾಯವನ್ನು ಒದಗಿಸುತ್ತಿದೆ. ಮಿಲಾನ್ ಫೌಂಡೇಶನ್ ಕಳೆದ ೧೭ ವರ್ಷಗಳಿಂದ ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿ, ಪ್ರಸ್ತುತ ಈ ಸಂಸ್ಥೆಯ ಕಾರ್ಯಕ್ಷೇತ್ರವು ಮೂರು ರಾಜ್ಯಗಳಲ್ಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಬೇರೆ ಬೇರೆ ಸ್ಥಳಗಳ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.

ಸಂಯೋಜಕಿ ಪೂಜಾ ಗಡಗಿ ಮಾತನಾಡಿ, ೧೪ ವರ್ಷದಿಂದ ೧೮ ವರ್ಷದ ಒಳಗಿನ ಬಾಲಕಿಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಶಿಕ್ಷಣಕ್ಕೆ ಉಪಯೋಗವಾಗುವಂತಹ ಕಿಟ್ ನೀಡಲಾಗುತ್ತದೆ. ಈಗೀನ ಜಮಾಣದಲ್ಲಿ ಮಹಿಳೆಯರು ಹೇಗಿರಬೇಕು? ಅವರ ಪಾತ್ರ ಏನು? ಆರೋಗ್ಯದಲ್ಲಿ ಹೇಗಿರಬೇಕು? ಅವರ ಸುರಕ್ಷತೆ ಏನು ಎಂಬುದನ್ನು ತೋರಿಸಿಕೊಡಲು ಈ ಕಾರ್ಯಗಾರ ನಡೆಯಿತು ಎಂದರು. ಮಹಿಳೆ ಕೇವಲ ಭೋಗದ ವಸ್ತುವಲ್ಲ. ಅವಳು ಅಡುಗೆ ಮನೆಗೆ ಸೀಮಿತಳಲ್ಲ. ಹೆಣ್ಣು ಜಗದ ಕಣ್ಣು ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಗ್ರಾಮೀಣ ಅದರಲ್ಲೂ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲೆಂದು ಆಯಾ ಕೋರ್ಸ್ ಗಳಿಗೆ ಅನುಗುಣವಾಗಿ ಸ್ಕಾಲರ್ಶಿಪ್, ಮೊಬೈಲ್, ಬುಕ್ಸ್, ಬ್ಯಾಗ್, ಡ್ರೆಸ್ ಕಿಟ್ ಗಳನ್ನು ಸಹ ನೀಡಲಾಗ್ತಿದೆ. ಗರ್ಲ್ ಐಕಾನ್ ಮಹಿಳೆಯರು ಅಭಿವೃದ್ಧಿ ಹೊಂದಲು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪಲು ಜೊತೆಗೆ ಸುರಕ್ಷಿತ ಮತ್ತು ಸಮಾನ ವೇದಿಕೆ ಕಲ್ಪಿಸಿ ಕೊಡುವಲ್ಲಿ ಪ್ರಯತ್ನ ನಡೆಸಿದೆ ಎಂದರು.

ಗದಗ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಬಂದ ೯೦ ಕ್ಕೂ ಅಧಿಕ ಹೆಣ್ಣು ಮಕ್ಕಳಿಗೆ ಮೊಬೈಲ್, ಬುಕ್ಸ್, ಬ್ಯಾಕ್, ಪೆನ್, ಟಿ ಶರ್ಟ್, ಐಡಿ ಕಾರ್ಡ್ ಗಳನ್ನು ಉಚಿತವಾಗಿ ನೀಡಲಾಯಿತು. ಸರಿತಾ, ರಕ್ಷಿತಾ, ಸಾವಕ್ಕ, ಕೊಂತೆಮ್ಮ, ಪವಿತ್ರಾ, ಸ್ನೇಹಾ, ಸಿಂಧು, ಸೌಮ್ಯ, ದೀಪಾ, ಶಿವಲೀಲಾ, ಅಮೂಲ್ಯ, ಪವಿತ್ರಾ, ತೇಜಸ್ವಿ, ಸಕ್ಕೂಬಾಯಿ ಸೇರಿದಂತೆ ಅನೇಕ ಸಿಬ್ಬಂದಿಗಳು, ಗರ್ಲ್ ಐಕಾನ್ಸ್ ಹಾಗೂ ಪಾಲಕರು ಉಪಸ್ಥಿತರಿದ್ದರು. ಲಕ್ಷ್ಮೀ ಪವಾರ್ ನಿರೂಪೀಸಿದರು. ಸರಿತಾ ಸ್ವಾಗತಿಸಿದರು. ಹುಲಿಗೆಮ್ಮ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ