Sunday, September 8, 2024
Google search engine
Homeಆರೋಗ್ಯಮುಂಡರಗಿ: ಕೈ ಹಿಡಿದ ಡ್ರ್ಯಾಗನ್ ಫ್ರೂಟ್ ನರೇಗಾ ಸಹಾಯದಿಂದ ಲಕ್ಷ ಲೆಕ್ಕದ ಫಸಲು ಬೆಳೆದ...

ಮುಂಡರಗಿ: ಕೈ ಹಿಡಿದ ಡ್ರ್ಯಾಗನ್ ಫ್ರೂಟ್ ನರೇಗಾ ಸಹಾಯದಿಂದ ಲಕ್ಷ ಲೆಕ್ಕದ ಫಸಲು ಬೆಳೆದ ರೈತ

ಗದಗ  ಜುಲೈ 20 : ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರೆಪ್ಪ ಚೋಳಮ್ಮನವರ ತಮ್ಮ ಒಂದು ಎಕರೆ ಜಮೀನಿನಲ್ಲಿ 2021-22ನೇ ಸಾಲಿನಲ್ಲಿ ಡ್ರ್ಯಾಗನ್ ಫ್ರೂಟ್ ಸಸಿ ನಾಟಿ ಮಾಡಿದ್ದರು. ಆಗ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮುಂದಾದಾಗ ಕೈ ಹಿಡಿದಿದ್ದು ನರೇಗಾ ಯೋಜನೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ದೊರೆತ ಸಹಾಯಧನದಿಂದ ಒಂದು ಎಕರೆಯಲ್ಲಿ 35ರೂಪಾಯಿಗೆ ಒಂದರಂತೆ 1700 ಸಸಿಗಳನ್ನು ತಂದು ನೆಟ್ಟಿದ್ದರು.

ನೆಟ್ಟ ವರ್ಷ ಹೊರತು ಪಡಿಸಿದರೆ ನಂತರದ ಮೂರು ವರ್ಷಗಳಲ್ಲಿ ಕ್ರಮವಾಗಿ 1.50 ಲಕ್ಷ, 2.50 ಲಕ್ಷ ಕೈ ಸೇರಿದೆ. ಈ ವರ್ಷ ಈಗಾಗಲೇ 2.50 ಲಕ್ಷ ಆದಾಯ ಕೈ ಸೇರಿದ್ದು ಇನ್ನು ಎರಡು ಲಕ್ಷ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿ ರೈತ ಮೈಲಾರೆಪ್ಪ ಇದ್ದಾರೆ. ಮೈಲಾರೆಪ್ಪನವರ ಮಕ್ಕಳಾದ ಮರುಳಸಿದ್ದಪ್ಪ, ಭರತ, ನಿಂಗರಾಜ ಅವರು ಸಹ ಜಮೀನಿನ ಉಸ್ತುವಾರಿಯಲ್ಲಿದ್ದು ಪ್ರತಿ ವರ್ಷದ ಮಳೆಗಾಲದ ಸಮಯದಲ್ಲಿ ಲಕ್ಷಗಳ ಲೆಕ್ಕದಲ್ಲಿ ಡ್ರ್ಯಾಗನ್ ಫ್ರೂಟ್ ಫಸಲು ಕಟಾವಿಗೆ ಬರುತ್ತಿರುವುದು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಇನ್ನು ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ರೈತ ಮೈಲಾರೆಪ್ಪನವರು ನೆಡುವಾಗ ಈ ಭಾಗಕ್ಕೆ ಅದು ಹೊಸ ಹಣ್ಣು. ಈಗ ಡ್ರ್ಯಾಗನ್ ಫ್ರೂಟ್ ಕಟಾವಿನ ಸಮಯದಲ್ಲಿ ಕೊಂಡುಕೊಳ್ಳಲು ಹಣ್ಣಿನ ವ್ಯಾಪಾರಸ್ಥರು ಮಹಾನಗರಗಳಿಂದ ಹಾರೋಗೇರಿ ಗ್ರಾಮದ ತೋಟಕ್ಕೆ ಬರುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚವು ಕಡಿಮೆಯಾಗಿದ್ದು, ಮನೆಯವರೇ ಕಟಾವಿನ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ನರೇಗಾ ಯೋಜನೆ ಒಳಗ ಡ್ರಾಗನ್ ಫ್ರೂಟ್ ಬೆಳಿಯಾಕ ಇರು ಮಾಹಿತಿ ಸಿಕ್ತು. ವಿಚಾರಿಸಿದಾಗ ತಾಲೂಕು ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಿದ್ರು. ಇದರಿಂದ ಚೊಲೊ ಆಗೇತ್ರಿ. ವರ್ಷ ಆದಾಯ ಲಕ್ಷದಾಗ ಕೈ ಸೇರಾಕತ್ತಿತ್ರಿ.

ಮೈಲಾರೆಪ್ಪ ಚೋಳಮ್ಮನವರ, ರೈತ

ನರೇಗಾ ಯೋಜನೆಯ ಮೂಲಕ ಡ್ರಾಗನ್ ಫ್ರೂಟ್ ಬೆಳೆದು ರೈತ ಮೈಲಾರೆಪ್ಪ ಪ್ರತಿವರ್ಷ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವುದು ರೈತ ಸ್ವಾವಲಂಬನೆ. ಇದು ನರೇಗಾ ಯೋಜನೆಯ ಸಮರ್ಪಕ ಸದ್ಬಳಕೆ.

ವಿಶ್ವನಾಥ ಹೊಸಮನಿ

ಇಓ, ತಾಪಂ, ಮುಂಡರಗಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಅಂತಾರಾಷ್ಟ್ರೀಯ ಕುಸ್ತಿ : ಲಕ್ಕುಂಡಿಯ ಗ್ರಾಂ, ಪಂಚಾಯತ ಸದಸ್ಯ ರಮೇಶ ಚಾಂಪಿಯನ್ ಗದಗ : ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟನೆ ಲಕ್ಕುಂಡಿ : ಪೈಲ್ವಾನರ ಪಟ್ಟು, ಬಯಲು ಜಂಗೀ ಕುಸ್ತಿ ಖದರ್  ಗದಗ : ಭೂಮರಡ್ಡಿ ವೃತ್ತದಲ್ಲಿ ಅಪಘಾತ : ಪೋಲೀಸ್ ಪೇದೆ ಸ್ಥಳದಲ್ಲೇ ಸಾವು !  ಗದಗ : ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ ಗದಗ : ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು :ಎಸ್ ವಿ ಸಂಕನೂರು ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ ಗದಗ : ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಗದಗ : ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ