Sunday, November 10, 2024
Google search engine
Homeಉದ್ಯೋಗಗದಗ : ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರಿಗೆ ಬೀಳ್ಕೊಡುಗೆ ಸಮಾರಂಭ

ಗದಗ : ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರಿಗೆ ಬೀಳ್ಕೊಡುಗೆ ಸಮಾರಂಭ

ಗದಗ  ಜುಲೈ 19 : ಗದಗ ಜಿಲ್ಲೆಗೆ ಪ್ರಥಮ ಬಾರಿ ಜಿಲ್ಲಾಧಿಕಾರಿಯಾಗಿ ಆಗಮಿಸಿದಾಗ ಹಲವಾರು ಸವಾಲುಗಳು ಎದುರಾದರೂ ಅವುಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ  ಸಾರ್ವಜನಿಕರ  ಸಹಕಾರದಿಂದ ಸಮರ್ಥವಾಗಿ ಎದುರಿಸಲಾಯಿತು ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಗೋವಿಂದರೆಡ್ಡಿ ಅವರಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.  
ಗದಗ ಜಿಲ್ಲೆಗೆ ಆಗಮಿಸಿದ ನಂತರ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳನ್ನು ಮತ್ತು  ಉತ್ಸವಗಳನ್ನು ಅತ್ಯಂತ ಯಶಸ್ವಿಯಾಗಿ ತಮ್ಮೆಲ್ಲರ ಸಹಕಾರದಿಂದ ನಿಭಾಯಿಸಿದ ಸಂತಸ ನನಗಿದೆ. ಒಬ್ಬರೇ ಕೆಲಸ ಮಾಡುವುದಕ್ಕಿಂತ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಗದಗ ಜಿಲ್ಲೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗಿಂತ ಉತ್ತಮ ಪ್ರಗತಿಯಲ್ಲಿರುವುದಕ್ಕೆ ನೋಡಿಕೊಳ್ಳುವುದಕ್ಕೆ ಕಾರಣವಾಯಿತು ಎಂದರು.  ಪ್ರಗತಿ ಪರಿಶೀಲನೆ ನಡೆಸುವಾಗ ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ಕೋಪದಿಂದ ಬೈದದ್ದು ಉಂಟು. ಆ ಕೋಪ ಕೇವಲ ಕೆಲಸಕ್ಕೆ ಮಾತ್ರ ಸೀಮಿತ ವೈಯಕ್ತಿಕವಾಗಿ ಯಾವುದೇ ತರಹದ ದ್ವೇಷ ಸಿಟ್ಟು ಇಲ್ಲ ಎಂದರು.  ಜಿಲ್ಲೆಯಲ್ಲಿ ಎರಡು ವರ್ಷ ಕೆಲಸ ಮಾಡಲು ಸಹಕಾರ ನೀಡಿದ ಎಲ್ಲ ನೌಕರರಿಗೂ ಹಾಗೂ ಸಾರ್ವಜನಿಕರಿಗೂ, ರಾಜಕೀಯ ಪ್ರತಿನಿಧಿಗಳಿಗೂ ಧನ್ಯವಾದಗಳು ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್. ಅವರು ಉತ್ತಮ ಆಡಳಿತಗಾರರು ಗದಗ ಜಿಲ್ಲೆಯನ್ನು ಕಂದಾಯ ವಿಷಯ ಸೇರಿದಂತೆ ಹಲವಾರು ವಿಷಯಗಳಲ್ಲಿ ಉತ್ತಮ ಸ್ಥಾನದಲ್ಲಿರುವಂತೆ ನೋಡಿಕೊಂಡಿದ್ದಾರೆ. ಅಪಾರ ಆಡಳಿತದ ಅನುಭವ ಹೊಂದಿದ ಅವರು ಯಾವುದೇ ಹುದ್ದೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಉತ್ತಮ ಪ್ರಗತಿ ಸಾಧಿಸುವ ಛಲ ಹೊಂದಿದವರು , ಜನಸ್ನೇಹಿ ಆಡಳಿತಕ್ಕೆ ವೈಶಾಲಿ ಎಂ.ಎಲ್. ಅವರು ಉತ್ತಮ ಉದಾಹರಣೆ, ಜಿಲ್ಲೆಯ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿರುವುದು ಜಿಲ್ಲೆಗೆ ಸಹಕಾರಿಯಾಗಲಿದೆ ಎಂದರು

ವೈಶಾಲಿ ಎಂ.ಎಲ್. ಅವರಿಗೆ ಉತ್ತಮ ಕಾರ್ಯ ಮಾಡಲು ಸಹಕಾರ ನೀಡಿದಂತೆ ಜಿಲ್ಲೆಯಲ್ಲಿ ಉತ್ತಮ ಪ್ರಗತಿಗಾಗಿ ಅವರಷ್ಟೇ ಸಹಕಾರವನ್ನು ನಮಗೂ ನೀಡುವ ಮೂಲಕ ಪ್ರಗತಿಯಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ಕೋರಿದರು. ನಿರ್ಗಮಿತ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಇನ್ನೂ ಉತ್ತಮ ಹುದ್ದೆಗಳು ದೊರಕಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ  ಮಾತನಾಡಿ ನೌಕರರಿಗೆ ವರ್ಗಾವಣೆ ಎನ್ನುವುದು ಸರ್ಕಾರಿ ಸೇವೆಯಲ್ಲಿ ಸರ್ವೆ ಸಾಮಾನ್ಯ. ನನಗೆ ಹಿರಿಯ ಸಹೋದರಿಯಾಗಿ ವೈಶಾಲಿ ಎಂ.ಎಲ್. ಅವರು ನನ್ನ ಬೆಂಬಲಕ್ಕೆ ನಿಲ್ಲುವ ಮೂಲಕ ಪೊಲೀಸ ಇಲಾಖೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದ್ದರು ಎಂದರು. ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಗೋವಿಂದರೆಡ್ಡಿ ಅವರು ಧಾರವಾಡದಲ್ಲಿ ಅಭ್ಯಸಿಸಿದ ವಿಷಯದಲ್ಲಿಯೇ ನಾನೂ ಮತ್ತು ಅವರು ಚಿನ್ನದ ಪದಕ ಪಡೆದವರಾಗಿದ್ದು ಈ ಹಿಂದೆ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ನೆನೆದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ ಅಲ್ಪಸಮಯದಲ್ಲಿಯೇ ಲೋಕಸಭಾ ಚುನಾವಣೆಯನ್ನು ವೈಶಾಲಿ ಎಂ.ಎಲ್. ಅವರೊಂದಿಗೆ ಮಾಡಿರುವುದು ಸಂತಸ ತಂದಿದೆ. ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಜಿಲ್ಲೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದೆ. ಅವರಿಗೆ ಇನ್ನೂ ಉತ್ತಮ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲಿ ಒಳ್ಳೆಯದಾಗಲಿ ಎಂದರು.  ಅದೇ ರೀತಿ ನೂತನ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರಿಗೂ ಸಹ ಸಹಕಾರ ನೀಡುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ ಎಂದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ, ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಸೇರಿದಂತೆ ವಿವಿಧ ಅಧಿಕಾರಿ ನೌಕರರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ  ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹಾಗೂ ನೂತನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರುಗಳಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಇಲಾಖೆ ಅಧಿಕಾರಿ ನೌಕರರು , ಸಾರ್ವಜನಿಕರು, ಈರ್ವರು ಅಧಿಕಾರಿಗಳಿಗೆ ಸತ್ಕರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಮಾನವೀಯತೆ ಮೆರೆದ ಹೊಳೆಆಲೂರ ಸ್ವಾಭಿಮಾನಿ ಕರವೇ ಕಾರ್ಯಕರ್ತರು  ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿಗೆ ಅವಕಾಶ ಗದಗ : ನವೆಂಬರ್ 15 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಗದಗ : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ರೂ 2,300 ಬೆಲೆ ನಿಗದಿ ಗದಗ : ಜಿಗಳೂರು ಕೆರೆಯ ನೀರನ್ನು ಸಮರ್ಪಕ ಸರಬರಾಜು, ನಿರ್ವಹಣೆಗೆ ಸೂಚನೆ ಗದಗ : ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆ : ಸಕಾಲ ಅರ್ಜಿಗಳ ವಿಲೇವಾರಿ ತೃಪ್ತಿದಾಯಕವಿರಲಿ ಗದಗ : ಗದಗ ಎಸ್ಪಿ ಬಿ.ಎಸ್. ನೇಮಗೌಡ ಹೆಸರಿನಲ್ಲಿ ಫೇಕ್ ಫೇಸ್‌ಬುಕ್‌ ಐಡಿ ಕ್ರಿಯೆಟ್ ಮಾಡಿ ವಂಚನೆಗೆ ಯತ್ನ  ಗದಗ : ಮೂವರು ಮಕ್ಕಳೊಂದಿಗೆ ತುಂಗಾಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ! ಪ್ರಕರಣ : ಒಂದು ಮಗುವಿನ ಶವ ಪತ್ತೆ ! ಗದಗ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ