Wednesday, May 29, 2024
Google search engine
Homeಕೃಷಿಕೃಷಿಗದಗ : ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು !

ಗದಗ : ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು !

ಗದಗ : ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. ತಂಗಿಯ ಮಗನೊಂದಿಗೆ ಮಹಿಳೆಯೊಬ್ಬರು ನೀರು ತರಲು‌ ಕೃಷಿ ಹೊಂಡಕ್ಕೆ ಹೋದಾಗ ಘಟನೆ ನಡೆದಿದೆ.

ಗೀತಾ ಹೆಸರೂರು (34), ಮನೋಜ ಕವಲೂರು (5) ಮೃತರು.

ಮೊದಲಿಗೆ ಮನೋಜ್ ಹೊಂಡದಲ್ಲಿ ಕಾಲು‌ ಜಾರಿ ಬಿದ್ದಿದ್ದಾನೆ. ಬಾಲಕನ ರಕ್ಷಣೆಗೆ ಹೋಗಿದ್ದ ಗೀತಾ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಶಾಲೆ ರಜೆ ಹಿನ್ನೆಲೆ ದೊಡ್ಡಮ್ಮನ ಮನೆಗೆ ಮನೋಜ್ ಬಂದಿದ್ದ. ಬಾಲಕನ ಜತೆಗೆ ಕೃಷಿ ಹೊಂಡಕ್ಕೆ ಗೀತಾ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments