Thursday, June 13, 2024
Google search engine
Homeಅಪಘಾತರೋಣ : ತೇರಿನ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರ ಸಾವು !

ರೋಣ : ತೇರಿನ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರ ಸಾವು !

ಗದಗ : ಗದಗ ಜಿಲ್ಲೆಯ ರೋಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ಸಂಭವಿಸಿದೆ. ವೀರಭದ್ರೇಶ್ವರ ಜಾತ್ರಾ ನಿಮಿತ್ಯ ನಡೆದ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಪಟ್ಟಣದ ರಾಜ ಬೀದಿಯಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಏಕಾ ಏಕಿ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಗಳಲ್ಲಿ ಒಬ್ಬನನ್ನ ಮಲ್ಲಪ್ಪ ಲಿಂಗನಗೌಡರ್ (55) ಎಂದು ಗುರುತಿಸಲಾಗಿದ್ದು, ಈತನ ಬೆನ್ನಿನ ಮೇಲೆ ರಥ ಹರಿದಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಆ ವ್ಯಕ್ತಿಯ ಮೇಲೆ ರಥದ ಚಕ್ರ ಹರಿದಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ, ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

ರೋಣ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments