Thursday, June 13, 2024
Google search engine
Homeಶಿಕ್ಷಣಉದ್ಯೋಗಗದಗ : ಉಚಿತ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

ಗದಗ : ಉಚಿತ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

ಗದಗ ಮೇ 17: ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಮತ್ತು ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿಯನ್ನು ಮೇ 29 ರಂದು ಮತ್ತು ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರತಯಾರಿಕೆ ತರಬೇತಿಯೂ ಜೂನ್ 6 ರಂದು ಆರಂಭವಾಗುತ್ತವೆ. ಮತ್ತು ಅತೀ ಶೀಘ್ರದಲ್ಲಿ ದ್ವಿ ಚಕ್ರ ವಾಹನ ರಿಪೇರಿ, ಸಿ.ಸಿ.ಟಿ.ವಿ ಅಳವಡಿಕೆ ಮತ್ತು ರಿಪೇರಿ,ಕುರಿ ಸಾಕಾಣಿಕೆ, ಮಹಿಳೆಯರ ಹೊಲಿಗೆ ತರಬೇತಿ, ಕಂಪ್ಯೂಟರ್‍ಡಿ.ಟಿ.ಪಿ ಈ ಉಚಿತತರಬೇತಿಗಳನ್ನು ಆರಂಭಿಸಲಾಗುವುದು,

ಆಸಕ್ತ 19ರಿಂದ44 ವಯಸ್ಸಿನೊಳಗಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ,ಯುವತಿಯರು, ಸ್ವ ಸಹಾಯ ಗುಂಪಿನವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗಳು ಊಟ, ವಸತಿಯೊಂದಿಗೆ ಉಚಿತವಾಗಿರುತ್ತದೆ, ಕೇಂದ್ರ ಸರಕಾರದಿಂದ ತರಬೇತಿಯ ಪ್ರಮಾಣ ಪತ್ರ ಸಿಗುತ್ತದೆ, ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿರುತ್ತದೆ.

ತರಬೇತಿ ಪಡೆಯಲು ಬಯಸುವರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು ಬಿ.ಪಿ.ಎಲ್ ರೇಶನ್‍ಕಾರ್ಡ್, ಅಂತ್ಯೋದಯ, ಎ.ಎ.ವಾಯ್, ಪಿ.ಎಚ್.ಎಚ್, ಆದ್ಯತಾಕುಟುಂಬ ರೇಶನ್‍ಕಾರ್ಡ್ ಅಥವಾ ನರೇಗಾ (ಜಾಬ್) ಕಾರ್ಡ್, ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು., ಆಧಾರಕಾರ್ಡ್, ಫೋಟೋ-ರೇಶನ್‍ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಯೊಂದಿಗೆ ಎಸ್.ಬಿ.ಆಯ್‍ಆರ್‍ಸೆಟಿ ಹುಲಕೋಟಿ ಗದಗ ಸಂಸ್ಥೆಯಲಿ ದೊರೆಯುವ ಅರ್ಜಿ ಫಾರಂ ತುಂಬಿ ನಿರ್ದೇಶಕರು ಎಸ್‍ಬಿಐಎಸ್ ಎಫ್‍ಆರ್‍ಸೆಟಿ ಸಂಸ್ಥೆ ಹುಲಕೋಟಿ,ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ ಇವರಿಗೆ ಅರ್ಜಿಸಲ್ಲಿಸಬಹುದಾಗಿದೆ.

ಹೆಚ್ಚಿನಮಾಹಿತಿಗಾಗಿ ದೂರವಾಣಿ ಸಂಖ್ಯೆ-9480880201,8880169996,9632287949,9632635268,9448874412 ಸಂಪರ್ಕಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments