14.4 C
New York
Friday, May 9, 2025

Buy now

spot_img

ಗದಗ : ಶಿವಶರಣ ಶ್ರೀ ಸಮಗಾರ ಹರಳಯ್ಯನವರು ಸಮಾಜದ ದೊಡ್ಡ ಶಕ್ತಿಯಾಗಿದ್ದಾರೆ : ಸಚಿವರಾದ ಡಾ. ಎಚ್. ಕೆ. ಪಾಟೀಲ 

ಗದಗ ೧೨: ಸಮತಾ ಸೇನಾ ಗದಗ ಜಿಲ್ಲಾ ವತಿಯಿಂದ ಮಹಾ ಶಿವಶರಣ ಶ್ರೀ ಸಮಗಾರ ಹರಳಯ್ಯನವರ ೮೫೭ನೇ ಜಯಂತ್ಯೋತ್ಸವವನ್ನು ಗದಗ ನಗರದ ಟಾಂಗಾಕೂಟ ವೃತ್ತದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಡಾ. ಎಚ್.ಕೆ. ಪಾಟೀಲರು ಉದ್ಘಾಟಿಸಿ ಮಾತನಾಡಿದ ಅವರು ಶಿವಶರಣ ಶ್ರೀ ಸಮಗಾರ ಹರಳಯ್ಯನವರು ೧೨ ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾಜದ ಸುಧಾರಣಾ ಅತ್ಯಂತ ಶ್ರೇಷ್ಠವಾಗಿತ್ತು. ಸಮಗಾರ ಹರಳಯ್ಯನವರ ಸಮಾಜದವರಿಗೆ ಇವರು ದೊಡ್ಡ ಶಕ್ತಿ ಹಾಗೂ ನಿಮ್ಮ ಸಮತಾಸೇನಾ ಸಂಘಟನೆಯ ವತಿಯಿಂದ ಇದೇ ಸ್ಥಳದಲ್ಲಿ ೮೫೮ನೇ ಜಯಂತ್ಯೋತ್ಸವದಲ್ಲಿ ಇದೇ ಸ್ಥಳದಲ್ಲಿ ಹರಳಯ್ಯನವರ ಅವರ ಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರಾದ ಎಚ್. ಕೆ. ಪಾಟೀಲರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮತಾ ಸೇನಾ ರಾಜ್ಯಾಧ್ಯಕ್ಷರಾದ ಗುರು ಉಳ್ಳಿಕಾಶಿಯವರು ಮಾತನಾಡಿ ೧೨ ನೇ ಶತಮಾನದಲ್ಲಿಯೇ ಶ್ರೀ ಬಸವಣ್ಣಣವರ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದ ಅದರಲ್ಲಿಯೂ ಅತ್ಯಂತ ಹಿಂದುಳಿದ ಮತ್ತು ಅಸ್ಪçಶ್ಯ ಸಮಾಜದವರಿಗೆ ಸಮಾನತೆ ನೀಡಿ ಅವರಲ್ಲೂ ಸಹ ಆತ್ಮವಿಶ್ವಾಸವನ್ನು ತುಂಬಿದ ಬಸವಣ್ಣನವರ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಬಸವಣ್ಣನವರ ಸಮನತೆ ಅಡಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರವರು ಸಂವಿಧಾನದ ಮೂಲಕ ನಮಗೆ ಸಮಬಾಳು ಸಮಪಾಲು ದೊರಕಿಸಿಕೊಟ್ಟಿದ್ದಾರೆ. ಅವರನ್ನು ಸಹ ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವ ನಾಯಕರಾದ ಕೃಷ್ಣಗೌಡ ಎಚ್. ಪಾಟೀಲರು ಮಾತನಾಡಿ ಇಂದಿನ ಯುವಕರು ಶರಣರ ಸಂಸ್ಕೃತಿಯನ್ನು ನಾವೆಲ್ಲೂ ಜೀವನದಲ್ಲಿ ಅಳವಡಿಸಿಕೊಂಡರೆ ಈ ಜಾತಿಪದ್ಧತಿಯನ್ನು ಕಿತ್ತೊಗೊಯ್ಯಲು ಸಾಧ್ಯ ಎಂದು ಹೇಳಿದರು ಮತ್ತು ಸಮತಾ ಸೇನಾ ಅಧ್ಯಕ್ಷರಾದ ಕಿರಣ ಗಾಮನಗಟ್ಟಿಯವರ ಕಾರ್ಯಕ್ರಮಗಳಲ್ಲಿ ಹಲವಾರು ಬಾರಿ ಆಗಮಿಸಿದ್ದೇನೆ. ಅವರ ಸಮಾಜಪರ ಕ್ರಿಯಾಶೀಲತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾರಂಭದ ರೂವಾರಿಯಾದ ಸಮತಾ ಸೇನಾ ಜಿಲ್ಲಾ ಅಧ್ಯಕ್ಷರಾದ ಕಿರಣ ಗಾಮನಗಟ್ಟಿಯವರು ಶಿವಶರಣ ಶ್ರೀ ಸಮಗಾರ ಹರಳಯ್ಯನವರ ಜೀವನ ಚರಿತ್ರೆಯನ್ನು ಸಂಕ್ಷೀಪ್ತವಾಗಿ ತಿಳಿಸಿ ಅವರ ತಮ್ಮ ಕಾಯಕದ ಮೂಲಕ ಶರಣ ತತ್ವವನ್ನು ಅಳವಡಿಸಿಕೊಂಡು ಬಸವಣ್ಣನವರಿಗೆ ಪ್ರೀತಿಗೆ ಪಾತ್ರರಾಗಿ ಅವರ ಅನುಭವ ಮಂಟಪದಲ್ಲಿ ಸ್ಥಾನಪಡೆದುಕೊಂಡಿದ್ದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ಕೆಲಸ ಮಾಡಿದರೆ ಯಾವ ಕೆಲಸದಲ್ಲಿಯ ಯಶಸ್ವಿಯಾಗಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಪೀರಸಾಬ ಕೌತಾಳ, ಸಮತಾ ಸೇನಾ ಜಿಲ್ಲಾ ಅಧ್ಯಕ್ಷರಾದ ಕಿರಣ ಗಾಮನಗಟ್ಟಿ, ಲೋಹಿತ ಗಾಮನಗಟ್ಟಿ, ಸಮತಾ ಸೇನಾ ಗೌರವಾಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೊನಕೇರಿ, ಮಂಜುನಾಥ ಕೊರವರ, ಸತೀಶ ಮಂಡಲಗೇರಿ, ವಿಜಯ ಗಾಮನಗಟ್ಟಿ, ಸಮಗಾರ ಹರಳಯ್ಯ ಹಿರಿಯರಾದ ಪ್ರೇಮನಾಥ ಗರಗ, ದಶರಥ ಅಗಸಿಮನಿ, ಮಂಜುನಾಥ ಟಗಟರ, ಪ್ರಕಾಶ ಹೊನಕೇರಿ, ಪರಶುರಾಮ ನರಗುಂದ, ನಾಗರಾಜ ಕುಂದರಗಿ, ರೇವಣಸಿದ್ದಪ್ಪ ಮೆಳ್ಳಣ್ಣವರ, ಶ್ರೀಧರ ಅಗಸಿಮನಿ, ವೀರೇಶ ಮುದೇನಗುಡಿಮಠ, ರಮೇಶ ತೇರದಾಳ, ರಮೇಶ ಬೆಣಗಿ, ಗೋಪಾಲ ಅಗಸಿಮನಿ, ಪರಶುರಾಮ ಲಕ್ಕುಂಡಿ, ಯಲ್ಲಪ್ಪ ಉಳ್ಳಿಕಾಶಿ, ಮಂಜುನಾಥ ತೇರದಾಳ, ರವಿ ಅಗಸಿಮನಿ, ವಿನಾಯಕ ಅಗಸಿಮನಿ, ಗಿಡ್ಡಪ್ಪ ತೇರದಾಳ, ಪ್ರಕಾಶ ಕಮಡೊಳ್ಳಿ, ಈಶ್ವರ ಮುಂಡರಗಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ