ಪ್ರೋ , ಕಬಡ್ಡಿ ಲೀಗ್-2024ರ ಫೈನಲ್ ಪಂದ್ಯದಲ್ಲಿ ಮೂರು ಭಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಪ್ರೋ ಕಬಡ್ಡಿ ಇತಿಹಾಸದಲ್ಲಿ ತನ್ನ ಮೊದಲ ಟ್ರೋಫಿ ಗೆಲ್ಲುವಲ್ಲಿ ಹರಿಯಾಣ ಸ್ಟೀಲರ್ಸ್ ಯಶಸ್ವಿಯಾಗಿದೆ. ಆ ಮೂಲಕ ಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಪಾಟ್ನಾವನ್ನು ಮಣಿಸಿ 32-23 ರ ಅಂಕಗಳ ಅಂತರದಲ್ಲಿ ಗೆದ್ದ ಹರಿಯಾಣ
ಡಿಸೆಂಬರ್ 29ರಂದು ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಪಿಕೆಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಪಾಟ್ನಾ ಎದುರಾಳಿ ತಂಡಕ್ಕೆ ರೈಡಿಂಗ್‌ಗೆ ಅವಕಾಶ ನೀಡಿತು. ಮೂರು ಬಾರಿಯ ಚಾಂಪಿಯನ್ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸುವಲ್ಲಿ ಮೊಹಮ್ಮದ್ ರೆಜಾ ಶಾರ್ದ್ಲೂ ನೇತೃತ್ವದ ಹರ್ಯಾಣ ಸ್ಟೀಲರ್ಸ್ ಯಶಸ್ವಿಯಾಯಿತು. ರೈಡಿಂಗ್ ಹಾಗೂ ಡಿಫೆನ್ಸ್ ಎರಡರಲ್ಲೂ ಸಾಂಘಟಿತ ಪ್ರದರ್ಶನ ತೋರಿದ ಸ್ಟೀಲರ್ಸ್ ಮೂರು ಭಾರಿಯ ಚಾಂಪಿಯನ್ ಪಾಟ್ನಾವನ್ನು 32-23 ರ ಅಂಕಗಳ ಅಂತರದಲ್ಲಿ ಸೋಲಿಸಿತು.