ಬೆಂಗಳೂರ : ಜಿದ್ದಾಜಿದ್ದಿ ಕಣವಾಗಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಪುನರಾಯ್ಕೆಯಾದ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಬಿ.ಪಿ.ಕೃಷ್ಣೇಗೌಡ ಅವರನ್ನು 65 ಮತಗಳ ಅಂತರದಿಂದ ಸೋಲಿಸಿದ್ದಾರೆ
ಶುಕ್ರವಾರ ಬೆಂಗಳೂರಿನ ಕಬ್ಬನ್ಪಾರ್ಕ್ ಆವರಣದ ನೌಕರರ ಸಂಘದಲ್ಲಿ ಅಧ್ಯಕ್ಷ ಮತ್ತು ಖಜಾಂಜಿ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್.ಷಡಾಕ್ಷರಿಗೆ 507 ಮತಗಳು ಬಂದರೆ, ಬಿ.ಪಿ.ಕೃಷ್ಣೇಗೌಡಗೆ 442 ಮತಗಳು ಲಭಿಸಿದ್ದವು.
ಅಂತಿಮವಾಗಿ ಮತದಾರರು ಷಡಾಕ್ಷರಿ ಅವರನ್ನು ಕೈಹಿಡಿದಿದ್ದು, 2ನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.