ಗದಗ ಡಿಸೆಂಬರ್ 5: 2024-25 ನೇ ಸಾಲಿನ ಹಿಂದುಳಿದ ವರ್ಗಗಳ ಸಲ್ಲಿಸುವ ಅವಧಿ ವಿಸ್ತರಣೆ
ವಿದ್ಯಾರ್ಥಿಗಳು, ಅರ್ಹ ಪಿಯುಸಿ ಸಮಾನಾಂತರ, ಸಾಮಾನ್ಯ , ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಿಗೆ ಶುಲ್ಕ , ಮರುಪಾವತಿ ಮತ್ತು ಪ್ರವರ್ಗ-1 ರ ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ಡಿಸೆಂಬರ 20 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ದೂರವಾಣಿಸಂಖ್ಯೆ 08372-237414 ಸಂಪರ್ಕಿಸಬಹುದಾಗಿದೆ.
ಅರ್ಜಿ ಆಹ್ವಾನ
ಗದಗ ಡಿಸೆಂಬರ್ 5: ನರೇಗಲ್ ಪಟ್ಟಣ ಹಾಗೂ ಗ್ರಾಮದ ನಿವೇಶನ ರಹಿತ ಫಲಾನುಭವಿಗಳಿಗೆ ತಿಳಿಯಪಡಿಸುವುದೇನೆಂದರೆ ನರೇಗಲ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದ್ಯಾಂಪುರ ಮತ್ತು ತೋಟಗಂಟಿ ಗ್ರಾಮದಲ್ಲಿ ಲಭ್ಯವಿರುವ ಆಶ್ರಯ ನಿವೇಶನಗಳಿಗೆ ಅರ್ಹ ನಿವೇಶನ ರಹಿತ ಫಲಾನುಭವಿಗಳು ಕೆಳಕಂಡ ದಾಖಲಾತಿಗಳೊಂದಿಗೆ ಡಿಸೆಂಬರ್ 20 ರೊಳಗಾಗಿ ನರೇಗಲ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಅರ್ಜಿ ಯನ್ನು ಸಲ್ಲಿಸಬಹುದಾಗಿದೆ.
ಸಲ್ಲಿಸಬೇಕಾದ ದಾಖಲಾತಿ: ಅರ್ಜಿ ನಮೂನೆ, ಫಲಾನುಭವಿ ಆಧಾರ ಕಾರ್ಡ ಝೆರಾಕ್ಸ್ , ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್, ಕುಟುಂಬ ಸದಸ್ಯರ ಆಧಾರ ಕಾರ್ಡ ಝೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ ಸೈಜ ಭಾವಚಿತ್ರ .
ಹೆಚ್ಚಿನ ಮಾಹಿತಿಗಾಗಿ ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯ ದೂರವಾಣಿ ಸಂಖ್ಯೆ 08381-268228 ಸಂಪರ್ಕಿಸಬಹುದಾಗಿದೆ.