12.6 C
New York
Saturday, May 24, 2025

Buy now

spot_img

ಗದಗ : ಲೋಕಾಯುಕ್ತ ಜನ ಸಂಪರ್ಕ ಸಭೆ

ಗದಗ ಡಿಸೆಂಬರ್ 5: ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರ ನಿರ್ದೇಶನದಂತೆ ಕರ್ನಾಟಕ ಲೋಕಾಯುಕ್ತ, ಗದಗ ಕಛೇರಿಯ ಪೊಲೀಸ್ ಅಧಿಕಾರಿಗಳು ಡಿಸೆಂಬರ್ 12 ರಂದು ಗುರುವಾರದಂದು ಬೆಳಿಗ್ಗೆ 10.30 ಗಂಟೆಯಿAದ ಮಧ್ಯಾಹ್ನ 1.00 ಗಂಟೆಯ ವರೆಗೆ ತಹಶೀಲ್ದಾರ ಕಛೇರಿ ಸಭಾಭವನ ನರಗುಂದದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸದರಿ ದಿನಾಂಕದಂದು ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸಲಾಗುವುದು.

ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು, ಅಹವಾಲುಗಳನ್ನು ಹಾಗೂ ತಮ್ಮ ಸರಕಾರಿ ಕೆಲಸಗಳಿಗೆ ಸಂಬAಧಿಸಿದAತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸಬಹುದು. ಸರಕಾರಿ ಅಧಿಕಾರಿಗಳು ಸರಕಾರದ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಉದ್ದೇಶಪೂರ್ವಕ ತಾರತಮ್ಯ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸಬಹುದಾಗಿದೆ.

ಸರಕಾರದ ಯೋಜನೆಗಳ ಅನುಷ್ಟಾನದಲ್ಲಿ ಅನಗತ್ಯ ವಿಳಂಬ, ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿದ ದೂರುಗಳ ಬಗ್ಗೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡದೆ, ಅಕ್ರಮ ಸಂಭಾವನೆ (ಲಂಚದ ಹಣ)ಯ ಸಲುವಾಗಿ ಅನಗತ್ಯ ವಿಳಂಬ ಮಾಡುತ್ತಿದ್ದರೆ ಲಿಖಿತ ದೂರವನ್ನು ದಾಖಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಗದಗ ಆರಕ್ಷಕ ಉಪ ಅಧೀಕ್ಷಕರಾದ ವಿಜಯ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ  :  ಜಿಲ್ಲೆಗೆ ನೂತನ DYSP ಯಾಗಿ  ಮುರ್ತುಜಾ ಖಾದ್ರಿ ನೇಮಕ ಗದಗ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಹೆಂಡತಿ ! ಗದಗ : SSLC' ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ.! ಗದಗ : ಬಾವಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ ! ಗದಗ : ವಾಕರಸಾ ಸಂಸ್ಥೆಯಿಂದ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಸಾರ್ವಜನಿಕರ ಅಭಿಪ್ರಾಯ ಕಾರ್ಯಕ್ರಮ “ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ