ಎಲ್ಲರಿಗೂ ಕನ್ನಡ ರಾಜ್ಯೋತ್ಸವದ
ಹಾರ್ಧಿಕ ಶುಭಾಶಯಗಳು.
ಕನ್ನಡ ನಾಡು.
ಶ್ರೀಗಂಧ ಸೂಸುವ ಈ ಕನ್ನಡ ನಾಡು
ಕರುಣೆ ಮಮತೆಯ ದೇವರ ಗುಡಿ
ಸುಸಂಸ್ಕೃತಿಗೆ ಹೆಸರಾದ ತವರೂರು
ಸಾಹಿತ್ಯ ಕ್ಷೇತ್ರಕೆ ಕರುನಾಡಿಗೆ ಸಮನಾರು.
ಅಷ್ಟ ಜ್ಞಾನಪೀಠ ಮುಡಿಗೇರಿಸಿದ ನಾಡು
ಲಿಪಿಗಳ ರಾಣಿ ವಿನೋಬಾರು ಕರೆದ ಬೀಡು
ಸಾವಿರ ಭಾಷೆ ಇದ್ದರೂ ಕರುನಾಡಿಗೆ ಕನ್ನಡ
ಎದೆತಟ್ಟಿ ಹೇಳುವೆವು ಹೃದಯ ಭಾಷೆ ಕನ್ನಡ.
ನುಡಿ ಕನ್ನದ ನಡೆ ಕನ್ನಡ ಅಕ್ಷರದರಿವು ಕನ್ನಡ
ಅಂದು ಉದಯಿಸಿದ ಚೆಲುವ ನಾಡು ಕನ್ನಡ
ಕರುನಾಡಿನ ಜನ್ಮದಿನ ಕನ್ನಡ ರಾಜ್ಯೋತ್ಸವ
ನವೆಂಬರವೊಂದಲ್ಲದೆ ವರ್ಷ ಪೂರ್ತಿ ಉತ್ಸವ.
ಕನ್ನಡ ಕನ್ನಡ ಎಂದು ಗೀಚಿದರದು ಶ್ರೀಗಂಧ
ಕನ್ನಡಿಗರು ಮೆಟ್ಟಿ ನಿಂತ ಭಾಷೆಲಿದೆ ಆನಂದ
ಕರುನಾಡಲಿ ಜನಿಸಿದ ಕನ್ನಡಿಗರೆಲ್ಲ ಧನ್ಯರು
ಆಡೋಕೆ ಕಲಿಯೋಕೆ ಕನ್ನಡವೊಂದೆನ್ನುವರು.
ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ.