Friday, October 18, 2024
Google search engine
Homeಆರೋಗ್ಯಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ...

ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ 

ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆ ವತಿಯಿಂದ ಹುಬ್ಬಳ್ಳಿ ಧಾರವಾಡದ ವಿವಿಧ ಬೇಡಿಕೆಗಳನ್ನು 13-10-2024 ರಂದು ಮಾನ್ಯ ಶ್ರೀ ಸಿದ್ದರಾಮಯ್ಯ , ಮುಖ್ಯ ಮಂತ್ರಿಗಳು ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೇದಿಕೆ ವತಿಯಿಂದ ಮನವಿ ಸಲ್ಲಿಸಿದರು.

ವಿವಿಧ ಬೇಡಿಕೆಗಳು : ಕರ್ನಾಟಕದ ಮುಸ್ಲಿಮರ ಪ್ರಮುಖ ಬೇಡಿಕೆಯಾದ 2 B ಮೀಸಲಾತಿ, ಹಾಗೂ ಧಾರವಾಡ ಸೂಪರ್ ಮಾರ್ಕೆಟ್ ನಲ್ಲಿ ಮೇಲ್ಛಾವಣಿ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಬಗ್ಗೆ ,ಡಾ.ಗಂಗೂಬಾಯಿ ಹಾನಗಲ್ ಗುರುಕುಲವನ್ನು ಹುಬ್ಬಳ್ಳಿಯಲ್ಲಿಯೇ ಮುಂದುವರೆಸುವ , ಧಾರವಾಡ ಹೊಸಯಲ್ಲಾಪುರ ಗ್ರಾಮದ ಶಿವಾನಂದ ನಗರ / ಜನ್ನತ ನಗರ ಕೂಳಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಬಗ್ಗೆ ,

ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ , ಹುಬ್ಬಳ್ಳಿ ಇವರಿಂದ ಧಾರವಾಡ ಜಿಲ್ಲೆ , ಹುಬ್ಬಳ್ಳಿ ತಾಲೂಕು ವೀರರಾಣಿ ಕಿತ್ತೂರ ಚನ್ನಮ್ಮ ನಗರ , 6 7 B ಅಮರಗೋಳ ( ಪಿ.ಬಿ.ರಸ್ತೆ , ನವನಗರ ) ದಲ್ಲಿ ನಿವೇಶನ ಹಂಚಿಕೆ ಕುರಿತು . ಧಾರವಾಡದ ಸ್ಲಂ ಬೋರ್ಡ್ ದಲ್ಲಿ ಖಾಲಿ ಇರುವ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣದ ಕುರಿತು ಹೊಸಯಲ್ಲಾಪೂರ ಎಂ ಸರಹದ್ದು ( ಶಿವಾನಂದ ನಗರ / ಜನ್ನತ ನಗರ ) ಸ.ನಂ .99 ಹಿಸ್ಸಾ ೪೮/೧ , ಪ್ಲಾಟ್‌ ನಂ .೧ ಕ್ಷೇತ್ರ ೬ ಗುಂಟೆ ೦೫.೫ ಅಣೆ ಜಾಗೆಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಅಂದರೆ ಸರಕಾರಿ ಪ್ರಾಥಮಿಕ ಯಾ ಪ್ರೌಢಶಾಲೆ ಅಥವಾ ಸರಕಾರಿ ಆಸ್ಪತ್ರೆ ( ಪಿ.ಎಚ್.ಸಿ. ) ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದ ಕುರಿತು ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದ ಹುಬ್ಬಳ್ಳಿ , ಧಾರವಾಡ ಜಿಲ್ಲೆಗೆ ಹಚ್ ಹೌಸ್ ( ಭವನ ) , ವೈದ್ಯಕೀಯ / ಎಂಜನಿಯರಿಂಗ್ ಕಾಲೇಜ್ ಹಾಗೂ IAS / KAS ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಮುಖ್ಯಮಂತ್ರಿ ಪರವಾಗಿ ದಿ:12-10-2024 ರಂದು ಮಾನ್ಯ ಶ್ರೀ ಕೋನರಡ್ಡಿ MLA ನವಲಗುಂದ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಶ್ರೀ ಲಕ್ಷಮನ್ ಬಕ್ಕಾಯ, ಸಲೀಂ ಸಂಗನಮಲ್ಲ, S. M. ರೋಣ, N. ನಿಪ್ಪಾಣಿ, H. M. ಕೊಪ್ಪದ, M. M. ಚಾಂದಖಾನವಾರ ಹಾಗೂ ಇತರರು ಉಪಸ್ಥಿತರಿದ್ದರು.  

ವರದಿ – A.A.ಜೋಡಗೇರಿ

ಧಾರವಾಡ ಜಿಲ್ಲಾ ವರದಿಗಾರರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ