ಗದಗ : ಗದಗ ಬೆಟಗೇರಿ ನಗರಸಭೆ 21 ನೇ ವಾರ್ಡ್‌ನ ಯಲಿಗಾರ ಪ್ಲಾಟ್ ಅವ್ಯವಸ್ಥೆಯ ಅಗರವಾಗಿದ್ದು, ಸರಿಯಾಗಿ ಅಭಿವೃದ್ಧಿಯಾಗಿಲ್ಲ ಶೋಚನೀಯ ಅವಸ್ಥೆಯಲ್ಲಿ ಇಲ್ಲಿನ ನಿವಾಸಿಗಳು ನಿತ್ಯ ಅನುಭವಿಸುವಂತಾಗಿದೆ.
ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ 21 ಯಲಿಗಾರ ಪ್ಲಾಟ್ ನಲ್ಲಿ ಮಳೆ ನೀರು ಚರಂಡಿ ನೀರು ನಿಂತು ಗಬ್ಬು ವಾಸನೆಗೆ ರೋಗಗಳು ಬರುವ ಲಕ್ಷಣ ಕಾಡುತ್ತಿದೆ.
ಮಳೆ ಹಾಗೂ ಚರಂಡಿ ನೀರು ನಿಂತು ಕೆರೆಯಾಗಿ ನಿರ್ಮಾಣವಾದರು ತಿರುಗಿ ನೋಡದ ಜನಪ್ರತಿನಿಧಿಗಳು ಹಾಗೂ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು, ನೀರು ಮಲ್ಲಿನವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಚಿಕ್ಕ ಚಿಕ್ಕ ಮಕ್ಕಳ ಆಟ ಆಡುತ್ತಾ ಆ ಕಡೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಇದೆ.
ಹಾಗೂ ಅಕ್ಕ ಪಕ್ಕದ ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ ಈ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗ್ಗೆ ಹರಿಸಬೇಕಿದೆ ಇಲ್ಲವಾದಲ್ಲಿ ನಗರಸಭೆಗೆ ಬೀಗ ಜಡಿದು ಪ್ರತಿಭಟನೆ ಮುಂದಾಗುತ್ತೆವೇ ಎಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದರು.
ಈ ಬಗ್ಗೆ ಹಲವು ಬಾರಿ ನಗರಸಭೆಗೆ ದೂರು ನೀಡಿದರೂ ಯಾವ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ ಎಂದು 21 ನೇ ವಾರ್ಡ್ ನಿವಾಸಿಗಳು ಆಕ್ರೋಶವನ್ನು ಹೊರಹಾಕಿದರು.
ಈಗಲಾದರೂ ಗದಗ ಬೆಟಗೇರಿ ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕು.