15.7 C
New York
Friday, May 9, 2025

Buy now

spot_img

ಗದಗ : ವಿಶ್ವ ಚೇತನ ಸ್ವಾಮಿ ವಿವೇಕಾನಂದರ ಮಿಂಚಿನಂತ ನುಡಿಗಳು ಯುವಕರಗೆ ದಾರಿದೀಪವಾಗಲಿ: ಸಚಿವ ಎಚ್ ಕೆ ಪಾಟಲ

ಗದಗ  ಸಪ್ಟೆಂಬರ್11: ಸ್ವಾಮಿ ವಿವೇಕಾನಂದ ಅವರ ಕಂಚಿನ ಪುತ್ಥಳಿ ನೋಡಿದಾಕ್ಷಣ ಅವರ ಸಂದೇಶ ಹಾಗೂ ಮಿಚಿನಂತೆ ಹೊರಹುಮ್ಮುವ ಅವರ ನುಡಿಗಳು ಯುವಕರಿಗೆ ದಾರಿದೀಪವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟಲ ಅವರು ಹೇಳಿದರು.

ನಗರದ ಆರ್.ಡಿ.ಪಿ.ಆರ್.ವಿಶ್ವವಿದ್ಯಾಲಯದಲ್ಲಿ ಬುಧವಾರ ವಿಶ್ವ ಚೇತನ ಸ್ವಾಮಿ ವಿವೇಕಾನಂದ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಇದೇ ತಾರಿಕೀನಂದು ಸ್ವಾಮಿ ವಿವೇಕಾನಂದ ಅವರು ಚಿಕಾಗೋ ದಲ್ಲಿ ಭಾಷಣ ಮಾಡಿ ಸಹೋದರ ಮತ್ತು ಸಹೋದರಿಯರೇ ಎಂಬ ಅವರ ಎರಡು ಪದಗಳು ಜಗತ್ತಿನ ಆಕರ್ಷಿಸಿದ್ದರು ಹಾಗಾಗಿ ಅದೇ ದಿನದಂದೇ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯದಲ್ಲಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣಗೊಂಡಿರುವುದು ಯೋಗಾಯೋಗವಾಗಿದೆ ಇದು ಎಲ್ಲರ ಸೌಭಾಗ್ಯ ಮತ್ತು ಅಭಿವೃದ್ಧಿಯ ಶುಭ ಚಿಹ್ನೆಯಾಗಿದೆ ಎಂದು ಆಶಯದಾಯಕ ನುಡಿಗಳನ್ನು ನುಡಿದರು.

ನಿರ್ಭಾಯನಂದ ಅವರ ಪ್ರೇರಣೆ ಮತ್ತು ಶಕ್ತಿ ಪಡೆದು ಅಂದಿನ ಕುಲಪತಿ ಪ್ರೋ. ವಿಷ್ಣುಕಾಂತ ಚಟಪಲ್ಲಿ, ಸಹೋದರ ಮಾಜಿ ಶಾಸಕ ಡಿ. ಆರ್. ಪಾಟೀಲ ಅವರ ಸತತ ಪ್ರಯತ್ನವು ಇದಕ್ಕೆ ಸಾಕ್ಷಿಯಾಗಿದೆ, ಪುತ್ಥಳಿ ನೋಡಿದಾಕ್ಷಣ ವಿವೇಕಾನಂದರು ನೀಡಿರುವ ಸಂದೇಶಗಳು ನೆನಪಾಗುತ್ತವೆ. ಅದರಿಂದ ಸಹಜವಾಗಿ ಪ್ರೇರಣೆ ಬರುತ್ತದೆ. ಗದಗದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸ್ಥಳವಾದ ವೀರನಾರಾಯಣ ದೇವಸ್ಥಾನ ನೋಡಲು ಬಂದವರು ವಿಶ್ವವಿದ್ಯಾಲಯದ ಸಬರಮತಿ ಆಶ್ರಮಕ್ಕೆ ಬೇಟಿ ನೀಡುತ್ತಿದ್ದಾರೆ ಗಾಂಧೀ ದರ್ಶನ ಮುಗಿಸಿ ಗ್ರಾಮೀಣ ಕಲೆಯ ನೋಡಿಕೊಂಡು ಹೋರಬಂದಾಗ ಬದುಕಿನಲ್ಲಿ ಬದಲಾವಣೆಯ ಗಾಳಿ ಬಿಸಿದಂತಾಗುತ್ತದೆ. ಹಾಗೇಯೇ ವಿಶ್ವ ಚೇತನ ಸ್ವಾಮಿ ವಿವೇಕಾನಂದ ಅವರ ಪುತ್ಥಳಿ ನೋಡಿ ಅದರ ಹತ್ತಿರಕ್ಕೆ ಹೋದಾಗ ಎಲ್ಲರಿಗೂ ತನಿಂದತಾನೇ ಪ್ರೇರಣೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ವಿವೇಕಾನಂದರ ಮಿಂಚಿನಂತೆ ಹೊರಹೊಮ್ಮುವ ದಿಟ್ಟ ಮಾತುಗಳನ್ನು ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ಯುವಜನರು ಪದೇ ಪದೇ ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಶ್ರಮಪಟ್ಟು ಸೇವೆಮಾಡಿ ತ್ಯಾಗ ಮನೋಭಾವ ಹೊಂದಿ ಗ್ರಾಮದ ಪ್ರತಿ ಮನೆ ಮನೆಗೂ ಅವರ ಸಂದೇಶಗಳನ್ನು ತಲುಪಿಸಿ ಗ್ರಾಮಗಳ ಉದ್ಧಾರಕ್ಕೆ ಸಹಾಯವಾಗುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಕರ್ನಾಟಕ ವಿಧಾನ ಪರಿಷತ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ, ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮಯ ಮತ್ತು ಗರ್ವದ ಸಂಗತಿ ಈ ಮೂಲಕ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ವಿಶಾಲ ಜಿಲ್ಲೆಗಳನ್ನು ವಿಂಗಡಿಸಿ ಹೊಸ ಜಿಲ್ಲೆಗಳನ್ನು ಮಾಡಿದರ ಪೈಕಿ ಗದಗ ಜಿಲ್ಲೆಯೂ ಅತ್ಯಂತ ಪ್ರಗತಿಪರ ಮತ್ತು ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದೆ ಅಂತಹ ಜಿಲ್ಲೆಯಲ್ಲಿ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತಿ ಸಚಿವ ಎಚ್ ಕೆ ಪಾಟೀಲ ಅವರಿಗೆ ಸಲ್ಲುತ್ತದೆ. ಅಂತಹ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಂಡಿರುವ ಸ್ವಾಮಿ ವಿವೇಕಾನಂದರ ಮೂರ್ತಿ ಸ್ಪೂರ್ತಿಯಿಂದ ಎಲ್ಲಾ ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ತಂದೆ ತಾಯಿ ಗುರುಗಳ ಪ್ರೀತಿ ವಿಶ್ವಾಸ ಗಳಿಸಬೇಕು, ಶಿಕ್ಷಣ ವ್ಯವಸ್ಥೆ ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗಿದೆ ಬಸವಣ್ಣ,ಗಾಂಧೀಜಿಯಂತ ಮಹನೀಯರ ಜೊತೆಗೆ ಹೋರಾಟಗಾರರ ಆಶಯ ಮಾರ್ಗದರ್ಶನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ವಿಶ್ವ ವಿದ್ಯಾಲಯ ಸಬರಮತಿ ಆಶ್ರಮ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆ ಹೊಂದಿ ಆಕರ್ಷಕ ಪ್ರೇಕ್ಷಣೀಯ ಸ್ಥಳವಾಗಿದೆ ಎಂದು ನುಡಿದರು.

ಆರ್ ಡಿ ಪಿ ಆರ್ ಸಚಿವ ಪ್ರೀಯಾಂಕ ಖರ್ಗೆ ಅವರು ವಿಡಿಯೋ ಸಂದೇಶ ಮೂಲಕ ಮಾತನಾಡಿ, 1893 ರಂದು ಸ್ವಾಮಿ ವಿವೇಕಾನಂದರು ದೇಶದ ಸಂಸ್ಕೃತಿ ಧರ್ಮವನ್ನು ಮತ್ತು ಆಧ್ಯಾತ್ಮವನ್ನು ವಿಶ್ವಕ್ಕೆ ಪ್ರಚುರಪಡಿಸಿದ್ದಾರೆ ,ಅವರ ಪ್ರೇರಣೆಯ ನುಡಿ ಸಂದೇಶ ತತ್ವ ಸಿದ್ದಾಂತವು ಇಂದಿನ ಯುವಕರಿಗೆ ದಾರಿ ದೀಪವಾಗಿದೆ ಹಾಗಾಗಿ ಇಂದು ಆರ್ ಡಿ ಪಿ ಆರ್ ವಿಶ್ವವಿದ್ಯಾಲಯದಲ್ಲಿ ಆಣವರಣ ಗೊಂಡಿರುವ ವಿಶ್ವ ಚೇತನ ಸ್ವಾಮಿ ವಿವೇಕಾನಂದ ಕಂಚಿನ ಪುತ್ಥಳಿ ಎಲ್ಲರಿಗೂ ನವ ಉತ್ಸಾಹವನ್ನು ತುಂಬಲಿ ಎಂದು ಸಂದೇಶ ನೀಡಿದರು.

ವಿಶ್ವ ವಿದ್ಯಾಲಯದ ಪ್ರಭಾರಿ ಕುಲಪತಿ ಸುರೇಶ ನಾಡಗೌಡರ ಅವರು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಭಾಷಣ ನೀಡಿ ದೇಶದ ಗೌರವವನ್ನು ಹೆಚ್ಚಿಸಿ ಎಲ್ಲರಿಗೂ ಆದರ್ಶರಾಗಿದ್ದಾರೆ ಈಗಾಗಲೇ ವಿಶ್ವ ವಿದ್ಯಾಲಯದಲ್ಲಿ ಸಬರಮತಿ ಆಶ್ರಮ ನಿರ್ಮಿಸಿ ಗಾಂಧಿಯವರ ಆಶಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ನೀಡುಲಾಗುತ್ತಿದ್ದು ಅದರ ಜೊತೆಗೆ ಸ್ವಾಮಿ ವಿವೇಕಾನಂದ ಅವರ ಜೀವಿತಾವಧಿ ಪ್ರತಿ ಬಿಂಬಿಸುವ 39.5ಅಡಿಯ ಕಂಚಿನ ಪುತ್ಥಳಿ ಸ್ಥಾಪಸಿ ಅವರ ಸದೇಶಗಳನ್ನು ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ ಎಂದು ಹೇಳಿದರು.

ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಆಧಾರ ರಹಿತ ವಿಚಾರವನ್ನು ಮಾಡುತ್ತಾರೆ ಆದರೆ ಸ್ವಾಮಿ ವಿವೇಕಾನಂದರು ಯಾವುದೇ ದೇವರು ಅಥವಾ ಧರ್ಮವನ್ನು ನಂಬುವುದಿಲ್ಲ ಅವರ ಉದ್ದೇಶವೂ ಒಬ್ಬ ಸಾಮಾನ್ಯ ವ್ಯಕ್ತಿ ಯನ್ನು ಅಸಮಾನ್ಯ ವ್ಯಕ್ತಿಯನ್ನಾಗಿಸುವುದು ಮತ್ತು ಆತನಲ್ಲಿರುವ ಅನಂತ ಶಕ್ತಿಯನ್ನು ತಿಳಿಸಿಕೊಟ್ಟು ಸಾಧನೆಮಾಡುವ ಕಾರ್ಯಮಾಡಿಸುವುದಾಗಿದೆ ಎಂದರು.

ಪಾಶ್ಚಾತ್ಯ ದೇಶಗಳು ನಮ್ಮ ದೇಶದಲ್ಲಿದಲ್ಲಿದ್ದ ಅನೇಕ ಪದ್ಧತಿಯನ್ನು, ಆವಿಷ್ಕಾರಗಳನ್ನು ಇಂದು ಅಳವಡಿಸಿಕೊಳ್ಳುತ್ತಿದ್ದಾರೆ ಆದರೆ ನಮ್ಮ ದೇಶದ ವಿಶೇಷ ಜ್ಞಾನದ ಅರಿವು ಸ್ವತಃ ಭಾರತೀಯರಿಗೆ ಇಲ್ಲದಂತಾಗಿದ್ದು ವಿಷಾದನೀಯ, ಅಂತಹ ವಿಶೇಷ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದ ಒಬ್ಬರಾಗಿದ್ದಾರೆ ಯಾರು ತಮ್ಮ ಜೀವನದಲ್ಲಿ ಪ್ರಕೃತಿಯ ಸಹಜ ವಿಕಾಸ ಹೊರತು ಪಡಿಸಿ ವೇಗವಾಗಿ ವಿಕಾಸ ಹೊಂದಬೇಕು ಎಂದು ಆಲೋಚನೆ ಮಾಡುತ್ತಾರೊ ಅವರೆಲ್ಲರಿಗು ಸ್ವಾಮಿ ವಿವೇಕಾನಂದ ಅನಿವಾರ್ಯ ಎಂದು ವಿವರಿಸಿದರು.

ಇಂದಿನ ಶಿಕ್ಷಣದ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ವಿಷಯವನ್ನು ತುಂಬುವ ಕಾರ್ಯವಾಗುತ್ತಿದೆ,‌ಅದು ಬದಲಾವಣೆಗೊಂಡು ವಿದ್ಯಾರ್ಥಿಗೆ ತನ್ನ ದೇಶದ ಮೇಲೆ ಅಪಾರ ಅಭಿಮಾನ ಮೂಡಿ ಮನುಷ್ಯನ ಮನಸ್ಸು ಜಾಗೃತಗೊಂಡು ಯಾವುದೇ ಹುದ್ದೆಗೆ ಅಥವಾ ತನ್ನ ಮುಂದಿನ ಭವಿಷ್ಯಕ್ಕೆ ಭಯಪಟ್ಟು ಅಳದೇ ತನ್ನ ಆತ್ಮಸ್ಥೈರ್ಯ ದಿಂದ ತನ್ನನ್ನು ನಿರ್ಗತಿಕ ಸ್ಥಿತಿಯಿಂದ ಉತ್ತುಂಗ ಸ್ಥಿತಿಗೆ ತಲುಪುವ ಕಾರ್ಯವಾಗಬೇಕು.

ವಿಶ್ವವಿದ್ಯಾಲಯದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆ ನೋಡಿ ಹೊಸ ಸಾಮರ್ಥ್ಯ ಸದ್ಗುಣ ಭರವಸೆ ಜಗತ್ತನ್ನೇ ಗೆಲ್ಲುತ್ತೆನೆ ಎಂಬ ಚಲ ಮೂಡಿ ಇಂದಿನಿಂದ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚರಿತ್ರೆ ಪ್ರಾರಂಭವಾಗಬೇಕು ಎಂದು ವಿಶ್ವಾಸದ ಮಾತುಗಳನ್ನು ನುಡಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಗ್ರಾಮೋದಯ ಎಂಬ ತ್ರೈಮಾಸಿಕ ಪತ್ರಿಕೆಯನ್ನುವ ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯ ಪೊಸ್ಟರ್ ಅನ್ನು ಬಿಡುಗಡೆ ಗೊಳಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪ್ರೋ. ಬಿ. ತಿಮ್ಮೇಗೌಡ, ಅನಸವ್ವ ಸುರೇಶ್ ಪವಾರ, ಅನಸೂಯಾ ಬಾಳಪ್ಪ ಇದ್ದರು.

ಕಾರ್ಯಕ್ರಮವನ್ನು ಪ್ರಕಾಶ ಮಾಚೇನಹಳ್ಳಿ ನಿರೂಪಿಸಿದರು , ಪ್ರಶಾಂತ ಜೆ ಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ