ಗದಗ : ಗದಗ ಜಿಲ್ಲೆಯ ಗದಗ ಬೆಟಗೇರಿ ಪೋಲೀಸ್ ಠಾಣೆಯ ಗಣೇಶೋತ್ಸವವು ಸಂಭ್ರಮದಿಂದ ನಡೆಯಿತು.
ಬೇಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಪ್ಪ. ಎಂ. ಆರಿ ಹಾಗೂ ಆರ್ ಸಿ ದೊಡ್ಮನಿ ಮತ್ತು ಎ.ಎಸ್.ಐ. ರವರಾದ ಚಿನ್ನಪ್ಪಗೌಡ್ರು, ಸಮ್ಮುಖದಲ್ಲಿ ಪೂಜೆ ಸಲ್ಲಿಸಿದ ನಂತರ
ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಬೆಟಗೇರಿ ಪೊಲೀಸ್ ಠಾಣೆಯಿಂದ ಪ್ರಾರಂಭವಾಗಿ ನರಳೇಕರ್ ಆಸ್ಪತ್ರೆ ಹತ್ತಿರ ಇರುವ ನಗರಸಭೆಯು ನಿರ್ಮಿಸಿರುವ ಸಾರ್ವಜನಿಕ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಟಗೇರಿ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಪ್ರಕಾಶ್ ರಾಥೋಡ್, ಶಿವು ಗುಡಿಮಠ, ಮಲ್ಲಪ್ಪ ಗಡಿಗಿ, ಸೋಮು ಬಳ್ಳಾರಿ, ಮಂಜುನಾಥ್ ಗಾಣಿಗೇರ್, ಶಿವಕುಮಾರ್ ಹಸವಿಮಠ ಹಾಗೂ ಇತರರು ಇದ್ದರು.