Thursday, September 19, 2024
Google search engine
Homeಗದಗಗದಗ : ಜಯ ಕರ್ನಾಟಕ ಗದಗ ಜಿಲ್ಲಾ ಘಟಕದ ವತಿಯಿಂದ ಡಾ. ಎಚ್. ಕೆ. ಪಾಟೀಲರಿಗೆ ಮತ್ತು...

ಗದಗ : ಜಯ ಕರ್ನಾಟಕ ಗದಗ ಜಿಲ್ಲಾ ಘಟಕದ ವತಿಯಿಂದ ಡಾ. ಎಚ್. ಕೆ. ಪಾಟೀಲರಿಗೆ ಮತ್ತು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ೧೬: ಗದಗ ಬೆಟಿಗೇರಿ ಅವಳಿ ನಗರದ ಹೃದಯ ಭಾಗಲದಲ್ಲಿರುವ ನಗರಸಭೆ ಮಾಲಿಕತ್ವದ ೫೪ ವಕಾರ ಸಾಲುಗಳನ್ನು ಕಾನೂನುಬಾಹಿರವಾಗಿ ದೀರ್ಘ ಅವಧಿಯವರೆಗೆ ನಗರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಖಾಸಗಿ ವ್ಯಕ್ತಿಗಳು ಸುಳ್ಳು ಠರಾವು ಸೃಷ್ಠಿಸಿ ಒಪ್ಪಂದ ಮಾಡಿಕೊಂಡಿದ್ದಾರೆ. ೨೦೨೩ರ ಅಕ್ಟೋಬರ್ ೨೫ರಿಂದ ೨೦೨೪ ರ ಜುಲೈ ೨೨ರ ನಡುವಿನ ಅವಧಿಯಲ್ಲಿ ನಗರಸಭೆಯ ಮಾಲೀಕತ್ವದ ಸಾವಿರಾರು ಕೋಟಿ ಮೌಲ್ಯದ ೫೪ ವಕಾರು ಸಾಲುಗಳನ್ನು ಕಾನೂನುಬಾಹಿರವಾಗಿ ದೀರ್ಘಾವಧಿಗೆ ಒಪ್ಪಂದ ಮಾಡಿಕೊಂಡಿದ್ದೆವೆ ಎಂದು ಸೃಷ್ಟಿಸಿದ್ದಾರೆ. ೨೦೨೪ರ ಫೆಬ್ರುವರಿ ೯ ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ ೨೦೨೪ ರ ಜುಲೈ ೨೨ರಂದು ವಾಕಾರ ಸಾಲಿನ ಎಲ್ಲಾ ಅನುಭೋದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡು ಅಧಿಕಾರಿಗಳ ನಕಲಿ ಸಹಿಯನ್ನು ಮಾಡಿ ಗದಗ ಬೆಟಿಗೇರಿ ನಗರಸಭೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ.

ಮೊದಲೆ ಗದಗ-ಬೆಟಿಗೇರಿಯ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಕಾರಣ ಕೇಳಿದರೆ ನಗರಸಭೆಗೆ ಆದಾಯ ಕಡಿಮೆ ಇದೆ ಎಂದು ಹೇಳುತ್ತಾರೆ. ಬಹುಕೋಟಿ ಮೌಲ್ಯದ ವಕಾರ ಸಾಲನ್ನಲ್ಲಿ ಹಲವಾರು ಮಳಿಗೆಗಳು, ಆಸ್ಪತ್ರೆಗಳು, ಮಾರುಕಟ್ಟೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರೆ ಅದರಿಂದ ಲಕ್ಷಾಂತರ ರೂಪಾಯಿ ಆದಾಯ ನಗರಸಭೆಗೆ ಹರಿದು ಬರುತ್ತದೆ ಅದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅವಳಿ ನಗರದಲ್ಲಿ ಮಾಡಬಹುದಾಗಿದೆ.

ಈ ತರಹ ಸುಳ್ಳು ಠರಾವು ಸೃಷ್ಟಿಸಿದ್ದು ನೋಡಿದ್ದರೆ, ನಾವು ತಮಗೆ ಮನವಿ ಮಾಡುತ್ತೇವೆ ಇಷ್ಟು ದಿನಗಳ ಕಾಲ ಮಾಡಿರುವಂತ ಎಲ್ಲ ಠರಾವುನ್ನು ಬಹಿರಂಗ ಮಾಡಬೇಕು ಮತ್ತೆ ಈಗಾಗಲೇ ಈ ಸುಳ್ಳು ಠರಾವುನ್ನು ಕೋರ್ಟಿಗೆ ಸಲ್ಲಿಸಿದ್ದ ಕಾರಣಕ್ಕಾಗಿ ಇದನ್ನ ಒಬ್ಬ ನ್ಯಾಯಾಧೀಶರಿಂದ ಸಮಗ್ರ ತನಿಖೆ ಮಾಡಿಸಬೇಕು ಅವಳಿ ನಗರದ ಜನರಿಗೆ ನ್ಯಾಯ ಕೊಡಿಸಬೇಕು ಸರ್ಕಾರಕ್ಕೆ ಮೋಸವಾಗುವುದನ್ನ ತಡೆಗಟ್ಟಬೇಕೆಂದು ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ ಚಂದ್ರಕಾಂತ ಚವ್ಹಾಣ ರಾಜ್ಯ ಪ್ರಧಾನ ಕಾರ್ಯದರ್ಶಿ, ಭಾಷಾಸಾಬ ಮಲ್ಲಸಮುದ್ರ, ರಫೀಕ ತೋರಗಲ್ಲ, ರಮೇಶ ರಾಠೋಡ, ನಾಗರಾಜ ಕ್ಷತ್ರಿಯ, ಚಂದ್ರು ಖಾನಾಪೂರ, ಇಮಾಮ ಮಜ್ಜೂರ, ಮಂಜು ಕುರಬರ, ಹನಮಂತಗೌಡ ಪಾಟೀಲ, ದಾದು ಮುಂಡರಗಿ, ಸಾದಿಕ್ ನರಗುಂದ, ಮೇಘರಾಜ ಮೇಲ್ಮನಿ, ಹನಮಂತ ಹುಲಿಕಟ್ಟಿ, ರಫೀಕ ಟಪಾಲವಾಲೆ, ಕಾರ್ತಿಕ, ಕುಮಾರ ತಳವಾರ, ಸುನೀಲ ಪೂಜಾರ, ಅಕ್ಬರ, ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು