Wednesday, November 6, 2024
Google search engine
Homeಗದಗಗದಗ : ರೈತರ ಜಮೀನಿನಲ್ಲಿ ವಿದ್ಯುತ ಗೋಪುರ ನಿರ್ಮಾಣ :  ರೈತರಿಗೆ ವೈಜ್ಞಾನಿಕ ಪರಿಹಾರ...

ಗದಗ : ರೈತರ ಜಮೀನಿನಲ್ಲಿ ವಿದ್ಯುತ ಗೋಪುರ ನಿರ್ಮಾಣ :  ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ೧೬: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ೨೫೦೦ ಎಮ್. ವಿ. ಎ ೪೦೦/೨೨೦ ಕೆ. ವಿ. ವಿದ್ಯುತ್ ಉಪಕೇಂದ್ರವನ್ನು ನಿರ್ಮಾಣ ಮತ್ತು ಅದಕ್ಕೆ ಸಂಬAಧಿಸಿದ ೪೦೦ ಕೆ. ವಿ. ಮತ್ತು ಕೆ. ವ್ಹಿ. ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣ ಮಾಡುವ ಕಾಮಗಾರಿಯ ವಿಚಾರದಲ್ಲಿ ಭೂ ಪರಿಹಾರ ಬೆಲೆ ನಿಗದಿಪಡಿಸುವಂತೆ ಡಂಬಳ ಗ್ರಾಮದ ರೈತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ರೈತರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತರ ಜಮೀನಿನಲ್ಲಿ ಮಾಡುತ್ತಿರುವ ವಿದ್ಯುತ್ ಗೋಪುರ ನಿರ್ಮಣ ಮಾಡುತ್ತಿದ್ದು, ರೈತರಿಗೆ ಪರಿಹಾರವನ್ನು ಅವೈಜ್ಞಾನಿಕ ಪರಿಹಾರವನ್ನು ಜಿಲ್ಲಾಧಿಕಾರಿಗಳು ರೈತರಿಗೆ ಆದೇಶಿಸಿದ್ದು ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ ಪ್ರತಿಚದರ ಮೀಟರಿಗೆ ೨೫೦೦ ರೂಪಾಯಿ ಮತ್ತು ತಂತಿಗೆ ೨೦ ರೂ ನಂತೆ ಬೆಳೆಹಾನಿ ಮತ್ತು ಇತರ ಹಾನಿ ಆದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದು ಈ ಪರಿಹಾರ ನಮಗೆ ಸಾಲುವುದಿಲ್ಲ. ಕಾರಣ ಮಾನ್ಯರು ಪುನಃ ಪರಿಶೀಲನೆ ಮಾಡಿ ನಮಗೆ ಪ್ರತಿ ಚದರ ಮೀಟರಗೆ ೩೫೦೦ ರೂ ರಂತೆ ಮತ್ತು ತಂತಿ ೫೦ ರೂ ಪ್ರತಿ ಚದರ ಮೀಟರಿಗೆ ಮತ್ತು ಬೆಳೆಹಾನಿ ಪರಿಹಾರ ಹೆಚ್ಚಿಸಿ ಪರಿಹಾರ ನೀಡಬೇಕು. ಸದರಿ ವಿದ್ಯುತ ಗೋಪುರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಪಡಿಸುವುದಿಲ್ಲ ನಮಗೆ ಸಕಾಲಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಹಾಯ್ದು ಹೋಗುವ ತಂತಿ ಕೆಳಗೆ ನಾವು ಎತ್ತರದ ಗಿಡ ಮರಗಳಿವೆ, ರೈತರ ಸಾಗುವಳಿಕೆ, ಕೊಳವೆ ಬಾವಿ, ದನಕರ ಮನುಷ್ಯನಿಗೆ ಅಪಾಯವಿದ್ದು, ಬೇರೆ ಇತರೆ ಕಾಮಗಾರಿ ಮಾಡುವಂತಿಲ್ಲ. ಮುಂದೆ ನಾವು ರೈತರು ಜಮೀನು ಮಾರಾಟ ಮಾಡಿದರೆ ಯಾರು ತೆಗೆದುಕೊಳ್ಳುವುದಿಲ್ಲ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಪುನಃ ಪರಿಶೀಲನೆ ಮಾಡಿ ಹೆಚ್ಚಿನ ಪರಿಹಾರಕ್ಕೆ ಆದೇಶ ಮಾಡಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ರೈತರಾದ ಜಗದೀಶ ಹಳ್ಳಿ, ಚನ್ನಬಸಪ್ಪ ಪಟ್ಟಣಶೆಟ್ಟಿ, ಶಂಕ್ರಯ್ಯ ಬಾಳಿಹಳ್ಳಿಮಠ, ಕುಷಪ್ಪ ಕದಡಿ, ಮುರಳೀಧರ ಹೊಸಮನಿ, ಮುಳ್ಳಪ್ಪ ಹಳ್ಳಾಕಾರ, ದೇವಪ್ಪ ಕೆರಳ್ಳಿ, ಗವಿಸಿದ್ದಪ್ಪ ಪಾರಪ್ಪನವರ, ಗುರಪ್ಪ ಹಟ್ಟಿ, ನಾಗಮ್ಮ ಆದಮ್ಮನವರ, ಅರ್ಜುನಪ್ಪ ಹೊಂಬಳ, ಆರ್. ಅರ್. ಕೊರ್ಲಗಟ್ಟಿ, ಜೆ. ಎಚ್. ಸಣ್ಣಪ್ಯಾಟಿ, ಹುಯಿಲಗೋಳ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಮೂವರು ಮಕ್ಕಳೊಂದಿಗೆ ತುಂಗಾಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ! ಪ್ರಕರಣ : ಒಂದು ಮಗುವಿನ ಶವ ಪತ್ತೆ ! ಗದಗ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ ಗದಗ : ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಗದಗ : ಬೈಕ್‌ ಸ್ಕಿಡ್ : ಬೈಕ್‌ ಸವಾರ ಸ್ಥಳದಲ್ಲೇ ಸಾವು ! ಗದಗ :  ಭೀಕರ ರಸ್ತೆ ಅಪಘಾತ : ಲಾರಿ-ಕಾರಿನ ನಡುವೆ ಅಪಘಾತ ದಂಪತಿ ಸ್ಥಳದಲ್ಲೇ ಸಾವು ! ಗದಗ : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ ! ಗದಗ : ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ /ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ : ವೇಳಾ ಪ... ತಾಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕ್ರಿಯೆ ಗದಗ : ಗಜೇಂದ್ರಗಡ ತಹಶೀಲ್ದಾರಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ : ಜಿಲ್ಲಾಧಿಕಾರಿಗಳಿಗೆ ಮನವಿ ಗದಗ : ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ