ಕಾವ್ಯಾ ಚೌಡಾಳ ಮುಂಡರಗಿ ತಾಲೂಕಿಗೆ ಪ್ರಥಮ ಸ್ಥಾನ
ಪೇಠಾ-ಆಲೂರ ೧೧: ಸ್ಥಳೀಯ ಶ್ರೀ ಹಾಲೇಶ್ವರ ವಿದ್ಯಾಪೀಠದ ಶ್ರೀ ಹಾಲಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇಕಡಾ ೯೧% ರಷ್ಟು ಆಗಿರುತ್ತದೆ. ಪರೀಕ್ಷೆಗೆ ಕುಳಿತ ೬೫ ವಿದ್ಯಾರ್ಥಿಗಳಲ್ಲಿ ಒಟ್ಟು ೫೯ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ, ಡಿಸ್ಟಿಂಕ್ಷನ್ -೨೩, ಪ್ರಥಮ ದರ್ಜೆ-೩೧, ದ್ವಿತೀಯ ದರ್ಜೆ-೦೨, ತೃತೀಯ ದರ್ಜೆ-೦೩ ಯಲ್ಲಿ ಪಾಸಾಗಿದ್ದಾರೆ. ಒಟ್ಟು -೫೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾವ್ಯ ಚೌಡಾಳ ೫೬೪. /೯೪% ಪ್ರಥಮ, ಲಕ್ಷ್ಮಿ ಬಿಸರಳ್ಳಿ. ೫೫೮. /೯೩% ದ್ವಿತೀಯ, ಅಶ್ವಿನಿ ಬಿಕನಳ್ಳಿ ೫೪೭. / ೯೧% ತೃತೀಯ, ಪುಷ್ಪಾ ಚನ್ನದಾಸರ ೫೪೬/೯೧% ಚತುರ್ಥ ಸ್ಥಾನಗಳನ್ನು ಪಡೆದಿರುತ್ತಾರೆ. ಈ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಹಾಲೇಶ್ವರ ವಿದ್ಯಾ ಪೀಠದ ಅಧ್ಯಕ್ಷರಾದ ಶ್ರೀ ಹಾಲೇಶ್ವರ ಶರಣರು ಶಿವಯೋಗಾಶ್ರಮ, ಪೇಠಾ ಆಲೂರ, ಹಾಗೂ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.