15.7 C
New York
Friday, May 9, 2025

Buy now

spot_img

ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫

ಗದಗ : ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಧ್ಯಕ್ಷರು ಸಾಯಿರಾಮ ಸಮಿತಿ ಗಜೇಂದ್ರಗಡ. ಡಾ. ರಾಮಶಾಸ್ತಿçà ಎಸ್. ಜೀರೆ, ಅವರು ಪದವಿ ಪ್ರಧಾನ ಸಮಾರಂಭದ ಕುರಿತು ಮಾತನಾಡುತ್ತ ನಾನು ಪ್ರಪ್ರಥಮವಾಗಿ ಪಿರಾಮಿಡ್ ಮಾದರಿಯ ತರಗತಿಗಳನ್ನು ನೋಡಿದ್ದು ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಶಾಲೆಯಲ್ಲಿ. ಪಿರಾಮಿಡ್ ಅಂದ್ರೆ ಪೀವರ್ ವಾಸ್ತು ಶಾಸ್ತçದ ಎಜ್ಯುಕೇಶನ್ ಕೊಡುವುದು. ಅಭ್ಯಾಸದಲ್ಲಿ ಹಿಂದುಳಿದ ಮಗುವಿಗೂ ಸಹ ಇಲ್ಲಿ ತಂದು ಬಿಟ್ಟರೆ ಮುಂದುವರಿದು ಬುದ್ಧಿವಂತರಾಗುತ್ತಾರೆ ಅಂತಹ ವಾಸ್ತು ಶಿಲ್ಪವನ್ನು ಹೊಂದಿದ ಪಿರಾಮಿಡ್ ತರಗತಿಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ವೈದ್ಯರು, ಎಂಜಿನಿಯರುಗಳು, ಐ.ಎ.ಎಸ್., ಕೆ.ಎ.ಎಸ್. ಹೊಂದಿ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದರು. 

ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಗದುಗಿನ ಉದ್ಯಮಿ ಶ್ರೀ ವಿಜಯಕುಮಾರ ಮಾಳೇಕೊಪ್ಪಮಠ, ನಿವೃತ್ತ ಅಭಿವೃದ್ಧಿ ಅಧಿಕಾರಿ, ನ್ಯಾಷನಲ್ ಇನ್ಸೂರೆನ್ಸ್ ಗದಗ ಅವರು ಸಮಾರಂಭದ ಕುರಿತು ಮಾತನಾಡುತ್ತ ನಾವು ಓದಿ ಬೆಳೆದು ಬಂದ ರೀತಿಗೂ ಈಗಿನ ಮಕ್ಕಳ ಓದಿನ ರೀತಿ ನೋಡಿದಾಗ ಈಗಿನ ಮಕ್ಕಳು ಬಹಳ ಅದೃಷ್ಟವಂತರು. ಇಂತದೊAದು ಅತ್ಯುನ್ನತವಾದ ಶಾಲೆ ನಮ್ಮ ಗದಗನಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಈಗಿನ್ನು ನಾಲ್ಕೆöÊದು ವರ್ಷದ ಮಕ್ಕಳು ಎಷ್ಟು ಧೈರ್ಯದಿಂದ ವೇದಿಕೆಯ ಮೇಲೆ ನಿಂತು ನಿರರ್ಗಳವಾಗಿ ಮಾತನಾಡುತ್ತಾರೆ. ಈ ವಯಸ್ಸಿನಲ್ಲಿ ನಾವಿನ್ನೂ ಶಾಲೆಯ ಮೆಟ್ಟಿಲನ್ನು ಹತ್ತಿರಲಿಲ್ಲ. ಆಗಿನ ಜನರೇಷನ್‌ಗೂ ಈಗಿನದಕ್ಕೂ ಹೋಲಿಕೆ ಮಾಡಿದಾಗ ಇದು ಮುಂದುವರೆದ ಯುಗ ಎಂದು ಗೊತ್ತಾಗುತ್ತದೆ. ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ ಪ್ರಯೊಗಗಳ ಮೂಲಕ ವೈಜ್ಞಾನಿಕ ಸಂಗತಿಗಳನ್ನು ತಿಳಿಸಲಾಗುತ್ತದೆ ಹಾಗಾಗಿ ಮಕ್ಕಳು ಚಿಕ್ಕವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶ ಪ್ರೇಮ ಹೊಂದುವ ಸಮರ್ಪಣಾಭಾವದ ಗುಣಗಳನ್ನು ಕಲಿಸಬೇಕು ಎಂದರು.  

ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪದವಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರಾಮಶಾಸ್ತಿç ಜೀರೆ ಅವರ ಕುರಿತು ಮಾತನಾಡುತ್ತ ಅವರು ಶ್ರೇಷ್ಠ ವೈದ್ಯರಾಗಿದ್ದು ತಮ್ಮ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕೆಯ ಸ್ವಭಾವದವರು, ದೀನ ದಲಿತ, ಬಡವರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ವೈದ್ಯಕೀಯ ಶಿಕ್ಷಣಾರ್ಥಿಗಳ ಅನುಕೂಲಕ್ಕಾಗಿ ಗಜೇಂದ್ರಗಡದಲ್ಲಿ ನರ್ಸಿಂಗ್ ಕಾಲೇಜು, ಮತ್ತು ಅರೆ ವೈದ್ಯಕಿಯ ಕಾಲೇಜು ತೆರೆದು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ನೀಡುತ್ತಿದ್ದಾರೆ. 

ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ವಿಜಯಕುಮಾರ ಮಾಳೆಕೊಪ್ಪಮಠ ಅವರು ಉದ್ಯಮಿಯಾಗಿದ್ದು, ಶಿಕ್ಷಣದ ಕುರಿತು ಅಪಾರ ಆಸಕ್ತಿಯುಳ್ಳವರಾಗಿದ್ದಾರೆ. ಶ್ರೀಯುತರು ವಿ. ಆರ್. ಎಲ್. ಸಂಸ್ಥಾಪಕರಾದ ಶ್ರೀ ವಿಜಯ ಸಂಕೇಶ್ವರ ಅವರ ಬಾಲ್ಯ ಸ್ನೇಹಿತರಾಗಿದ್ದಾರೆ. ಶ್ರೀ ವಿಜಯ ಸಂಕೇಶ್ವರರು ಯಾವಾಗ ಗದಗಗೆ ಬಂದರು ಮೊದಲು ಬೇಟಿ ನಿಡುವುದು ಶ್ರಿ ವಿಜಯಕುಮಾರ ಮಾಳೆಕೊಪ್ಪಮಠರವರನ್ನು. ಶಿಕ್ಷಣ ಗುಣಮಟ್ಟದ ಕುರಿತು ನನ್ನ ಕೆಲ ಸ್ನೇಹಿತರು ಮಾತನಾಡುತ್ತ ಫಿನ್‌ಲ್ಯಾಂಡ ದೇಶದ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆಯೆಂದು ತಿಳಿಸಿದ್ದರು. ಆದರೆ ಶ್ರೀ ವಿಜಯಕುಮಾರ ಮಾಳೇಕೊಪ್ಪಮಠ ಅವರು ಫಿನ್‌ಲ್ಯಾಂಡಗಿAತ ನೆದರ್‌ಲ್ಯಾಂಡ ದೇಶದ ಶಿಕ್ಷಣ ಪದ್ಧತಿ ಜಗತ್ತಿನಲಿಯೇ ಅತ್ಯುತ್ತಮವಾಗಿದೆ ಎಂದು ತಿಳಿಸಿದರು ಹಾಗೂ ನಾವು ಯಾವುದೇ ವ್ಯಕ್ತಿಯನ್ನಾಗಲಿ ಕೇವಲವಾಗಿ ನೋಡಬಾರದೆಂದರು. ಪ್ರತೀಯೊಬ್ಬ್ಬರಲ್ಲಿಯೂ ಏನಾದರೊಂದು ವಿಶಿಷ್ಠ ಕಲೆ ಮತ್ತು ಬುದ್ಧಿವಂತಿಕೆ ಇದ್ದೆ ಇರುತ್ತದೆ. ಈರ್ವರೂ ಅತಿಥಿ ಮಹೋದಯರಿಗೆ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಪರವಾಗಿ ಸನ್ಮಾನದೊಂದಿಗೆ ಗೌರವಿಸಲಾಯಿತು. 

ಪಾಲಕರು ತಮ್ಮ ಮಕ್ಕಳ ಕಲಿಕೆಯ ಪ್ರಗತಿಯ ಕುರಿತಾದ ರಿಕಾರ್ಡಿಂಗ್ ಅನಿಸಿಕೆಗಳನ್ನು ಎಲ್. ಇ. ಡಿ. ಸ್ಕಿçÃನ್‌ನಲ್ಲಿ ಹಂಚಿಕೊಳ್ಳಲಾಯಿತು ತದ ನಂತರ ಪದವಿ ಸಮಾರಂಭ ನೆರವೇರಿತು.

ಪದವಿ ಸಮಾರಂಭದ ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯರಾದ ಶ್ರೀ ಆರ್. ಜಿ. ಚಿಕ್ಕಮಠ, ಮಾರುತಿ ಬುಕ್ ಸ್ಟಾಲ್ ಮಾಲೀಕರಾದ ಶ್ರೀ ಸುರೇಶ ಅಂಗಡಿ, ವಿನಯ್ ಚಿಕ್ಕಟ್ಟಿ ಐ. ಸಿ. ಎಸ್. ಇ. ಶಾಲೆಯ ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಶಾಲೆಯ ಉಪ ಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ಹಿರಿಯ ಉಪನ್ಯಾಸಕರಾದ ಶ್ರೀ ಅನಿಲ ನಾಯಕ್ ಅವರು ಉಪಸ್ಥಿತರಿದ್ದರು. 

ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸರಳ ಸುಲಲಿತವಾಗಿ ವ್ಯಕ್ತಪಡಿಸಿದರು. ಬುದ್ಧಿಮಟ್ಟದ ಸ್ಪರ್ಧೆ ಹಾಗೂ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ಮತ್ತು ಪಾಲಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೂ ಸಹ ಬಹುಮಾನಗಳನ್ನು ಗಣ್ಯಮಾನ್ಯರು ಪ್ರಧಾನ ಮಾಡಿದರು. 

ಲಿಟಲ್ ಮಿಲೇನಿಯಂ ಪ್ರಿ-ಸ್ಕೂಲ ವಿದ್ಯಾರ್ಥಿಗಳು ಪ್ರಾರ್ಥನಾಗೀತೆ ಹೇಳುವುದರೊಂದಿಗೆ ಕಾರ್ಯಕ್ರಮ ಆರಂಭಗೊAಡು ವೇದಿಕೆಯಲ್ಲಿರುವ ಅತಿಥಿ ಮಹೋದಯರನ್ನು ಆಡಳಿತಾಧಿಕಾರಿಗಳಾದ ಶ್ರೀಮತಿ ಕಲಾವತಿ ಕೆಂಚರಾಹುತ ಸ್ವಾಗತಿಸಿದರು. ಗಣ್ಯಮಾನ್ಯರೆಲ್ಲರೂ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಅತಿಥಿಗಳ ಸಂಕ್ಷಿಪ್ತ ಪರಿಚಯವನ್ನು ಆಡಳಿತಾಧಿಕಾರಿಗಳಾದ ಶ್ರೀಮತಿ ಕಲಾವತಿ ಕೆಂಚರಾಹುತ ಮತ್ತು ಉಪ ಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಕೌಸರಬಾನು ಮತ್ತು ಶ್ರೀಮತಿ ಅಕ್ಷತಾ ಖೋಡೆ ನಿರೂಪಿಸಿದರೆ ಕನ್ನಡ ಉಪನ್ಯಾಸಕರಾದ ಶ್ರೀ ಶ್ರೀಶೈಲ ಬಡಿಗೇರ ವಂದಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ