ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ 

ಗದಗ :ಮಾ 25:ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದ್ದು, ಇದರ ಯಶಸ್ಸಿಗೆ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಮಲ್ಲಯ್ಯ ಕೊರವನವರ ಹೇಳಿದರು.

ಗದಗ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಗದಗ ಮತ್ತು ಗದಗ ತಾಲೂಕು ಪಂಚಾಯತ್ ಗದಗ ಹಾಗೂ ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಂಯುಕ್ತ ಆಶ್ರಯದಲ್ಲಿ ಕಾಯಕ ಬಂದು (ಮೇಟ್ಸ್) ತರಬೇತಿಗೆ ಸಸಿಗೆ ನೀರು ಎರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಾ ನರೇಗಾ ಯೋಜನೆಯಡಿ ಗ್ರಾಮೀಣ ಭಾಗವನ್ನು ಅಭಿವೃದ್ಧಿ ಪಡಿಸುವ ಅವಕಾಶ ಕಾಯಕ ಬಂಧುಗಳಿಗೆ ಸಿಕ್ಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಪ್ರಯೋಜನೆ ದೊರಕಿಸಲು ಶ್ರಮವಹಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ನರೇಗಾ ಸಹಾಯಕ ನಿರ್ದೇಶಕ ಶ್ರೀ ಕುಮಾರ್ ಪೂಜಾರ್ ರವರು ಮಾತನಾಡಿ ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಿಂದ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಕೆಲಸ ಸಿಕ್ಕಿದೆ. ಗಂಡು ಹೆಣ್ಣಿಗೂ ಸಮಾನ ಕೂಲಿ ದರ ನಿಗದಿಪಡಿಸಲಾಗಿದೆ. ಹಲವು ಕುಟುಂಬಗಳಿಗೆ ಈ ಕಾಯ್ದೆಯಿಂದ ಸಹಾಯವಾಗಿದೆ ಎಂದರು.

ಜಿಲ್ಲಾ ಐ ಇ ಸಿ ಸಂಯೋಜಕ ಶ್ರೀ ವಿ ಎಸ್ ಸಜ್ಜನ ರವರು ಮಾತನಾಡಿ ಕಾಯಕ ಬಂಧುಗಳ ಜವಾಬ್ದಾರಿ ಮಹತ್ವದಾಗಿದ್ದು,

ನಲವತ್ತು ಕೂಲಿಕಾರರ ಮೇಲೆ ಒಬ್ಬರನ್ನು ಮೇಟಿ ಎಂದು ನೇಮಕ ಮಾಡುವರು. ಉದ್ಯೋಗ ಬೇಡಿಕೆ ಅರ್ಜಿ ಸಂಖ್ಯೆ 6, ಮತ್ತು ಹಾಜರಾತಿ ತೆಗೆದುಕೊಳ್ಳುವ ಬಗೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಐ ಇ ಸಿ ಸಂಯೋಜಕ ವಿರೇಶ್ ಅವರು ಶಿಬಿರಾರ್ಥಿಗಳಿಗೆ ಕಾಯಕ ಬಂಧು ಕಾರ್ಯಗಳು ಮತ್ತು ಜವಾಬ್ದಾರಿ ಕುರಿತು ಹೇಳಿದರು.

ತಾಲೂಕು ಎಮ್ ಐ ಎಸ್ ಸಂಯೋಜಕ ಬಸವರಾಜ್ ಅವರು ಭುವನ್ ಜಿಯೋ ಟ್ಯಾಗ್, ಎನ್ ಎಮ್ ಎಮ್ ಎಸ್ ಮತ್ತು ಇತರೆ ವಿಷಯಗಳ ಕುರಿತು ತರಬೇತಿ ನೀಡಿದರು.

ತಾಲೂಕು ತಾಂತ್ರಿಕ ಸಂಯೋಜಕ ಶ್ರೀ ಪ್ರವೀಣ್ ಅವರು ಕಾಮಗಾರಿ ಆರಂಭದ ಮೊದಲು ಲೈನ್ ಮಾರ್ಕಿಂಗ್ ನೀಡುವದು, ಅಳತೆಗೆ ತಕ್ಕಂತೆ ಕೂಲಿ, ಜಾಬ್ ಕಾರ್ಡ ಅಪ್ಡೇಟ್ ವಿಷಯಗಳ ಕುರಿತು ಮಾಹಿತಿ ನೀಡಿದರು.

ಸದರ ತರಬೇತಿಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯಕ ಬಂಧುಗಳು, ತಾಲೂಕಿನ ಬಿ. ಎಫ್. ಟಿ ಹಾಗೂ ಕಾಯಕ ಮಿತ್ರರು ಹಾಜರಿದ್ದರು.

Leave a Reply

Your email address will not be published. Required fields are marked *