ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ 

ಗದಗ : ಬೆಟಗೇರಿ ಪೋಲೀಸ್ ಠಾಣೆ ಹದ್ದಿಯ ಬೆಟಗೇರಿ ಹೇಲ್ಡ್‌ಕ್ಯಾಂಪ್ ನಗರದಲ್ಲಿ ಸಿಟಿಎಸ್ ನಂ: 4053/1 ರ ಮನೆಯಲ್ಲಿ ಮೃತ ಶ್ರೀಮತಿ ಸರೋಜಾ ಕೋಂ, ತುಳಸಿನಾಥನಾ ಕಬಾಡಿ ಇವಳು ಒಬ್ಬಳೇ ಮನೆಯಲ್ಲಿ ವಾಸ ಇರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಆರೋಪಿತರೆಲ್ಲರೂ ಕೂಡಿಕೊಂಡು ಕೊಲೆ ಮಾಡಿ ದರೋಡೆ ಮಾಡುವ ಉದ್ದೇಶದಿಂದ ಬಾಗಿಲದ ಬಾಜು ಇರುವ ಕಿಡಕಿಯ ಜಾಲರಿಯನ್ನು ಹರಿದು ನೋಡಲು ಯಾರು ಕಾಣದ ಇರುವದರಿಂದ 05ನೇ ಆರೋಪಿತನು ಬಾಗಿಲದ ಬೋಲ್ಡ್‌ನ್ನು ಕಬ್ಬಿಣದ ರಾಡದಿಂದ ಮೀಟಿ ಮುರಿದು 06 ಜನ ಆರೋಪಿತರು ಕೂಡಿ ಮನೆ ಒಳಗೆ ಹೋಗಿ ರೂಮ್ ಲ್ಲಿ ವಯಸ್ಸಾದ ಹೆಣ್ಣು ಮಗಳು ಮಲಗಿಕೊಂಡ ಮೃತಳು ಎಚ್ಚರವಾಗಿ ಚೀರಾಡಲು ಹತ್ತಿದಾಗ 05ನೇ ಆರೋಪಿತನು ಅವಳ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಹಿಡಿದು 01, 02, 04, ಮತ್ತು 06ನೇ ಆರೋಪಿತರು ಕೂಡಿ ಕೈಕಾಲುಗಳನ್ನು ಹಿಡಿದುಕೊಂಡಾಗ 03ನೇ ಆರೋಪಿತನು ಕಟ್ಟಿಗೆಯಿಂದ ಅವಳ ತಲೆಯ ಹಿಂದೆ ಜೋರಿನಿಂದ ಹಿಡೆದು ಭಾರೀ ಗಾಯ ಪಡಿಸಿ ಅವಳಿಗೆ ಮರಣ ಪಡಿಸಿ ರೂಮದಲ್ಲಿದ್ದ ಟ್ರೇಜರಿಯನ್ನು ಅಂಗಾತ ಕೆಡವಿ ಅದರ ಲಾಕ‌ನ್ನು 05ನೇ ಆರೋಪಿತನು ಕಬ್ಬಿಣದ ರಾಡ್‌ದಿಂದ ಮೀಟಿ ಮುರಿದು ಅದರಲ್ಲಿದ್ದ ಒಟ್ಟು 260 ಗ್ರಾಂ ಅಂದಾಜು ಕಿಮ್ಮತ್ತು 9,50,000/- ರೂ ಮಾಲನ್ನು ದರೋಡೆ ಮಾಡಿಕೊಂಡು ಹೋದ ಅಪರಾಧ ಎಸಗಿದ್ದಾರೆಂದು ಆರೋಪಿತರ ವಿರುದ್ಧ ಶ್ರೀ ವೆಂಕಟೇಶ ಕೆ ಯಡಹಳ್ಳಿ, ಸಿ.ಪಿ.ಐ ಬೆಟಗೇರಿ ವೃತ್ತ ಇವರು ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ ಇವರು ನದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತರಾದ 1) ಶಂಕ್ರಪ್ಪ ಶಿವಪ್ಪ ಹರಣಶಿಕಾರಿ 2) ಚಂದ್ರಪ್ಪ ಸೋಮಶೇಖರ ಹರಣಶಿಕಾರಿ 3) ಮಾರುತಿ ಚನ್ನಪ್ಪ ರೋಣ 4) ಮನ್ನಪ್ಪ ಪಮತನಪ್ಪ ರೋಣ 6) ಉಮೇಶ ಅರ್ಜುನ ಹರಣಶಿಕಾರಿ ಇವರಿಗೆ ದಿನಾಂಕ-14-03-2025 ರಂದು ಭಾ.ದಂ.ಸಂ 396, 411 ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 10,000/-ದಂಡ. ಮತ್ತು 7 ನೇ ಆರೋಪಿತನಾದ ಪ್ರಮೋದ ರಾಮಪ್ಪ ಕೊರವರ ಇವನಿಗೆ ಭಾ.ದಂ.ಸಂ 396, 411 ರಡಿ 3 ವರ್ಷ ಶಿಕ್ಷೆ ಹಾಗೂ ರೂ.3000/-ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಎಂ ಶಿಗ್ಗಿ ಸರಕಾರಿ ಅಭಿಯೋಜಕರು, ಗದಗ ಇವರು ಸಾಕ್ಷಿ ವಿಚಾರಣೆ ಮಾಡಿ ವಾದವನ್ನು ಮಂಡಿಸಿದರು.

Leave a Reply

Your email address will not be published. Required fields are marked *