ಗದಗ : ಧಾರ್ಮಿಕ ಚಿಂತನೆಯಲ್ಲಿ ಸಂಸ್ಕೃತಿ ಅಡಕವಾಗಿದೆ – ಭಾನುದಾಸ ಮೋಡಕ

ಗದಗ ೦೮: ದೇಶದ ಇತಿಹಾಸವನ್ನು ನಾವು ನೋಡುತ್ತ ಹೋದಂತೆಲ್ಲ ಅಲ್ಲಿ ಸಿಗುವುದು ಪುರಾಣ, ಪುಣ್ಯಕಥೆಗಳು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ವಿವಿಧ ಕಥಾ ಪ್ರಸಂಗಗಳ ನಾಟಕಗಳು ನಮ್ಮ ಕಣ್ಣೆದುರಿಗೆ ಗೋಚರಿಸುತ್ತವೆ. ಇಂತಹ ಪರಂಪರೆಯು ಧಾರ್ಮಿಕ ಚಿಂತನೆಯಲ್ಲಿ ಅಡಕವಾಗಿದೆ ಎಂದು ಅಡವಿಸೋಮಾಪೂರ ಗ್ರಾಮದ ಪಾಂಡುರAಗ ಸಂತ ಮಂಡಳಿಯ ಗೌರವ ಅಧ್ಯಕ್ಷರಾದ ಭಾನುದಾಸ ಮೋಡಕರವರು ಮಾತನಾಡಿದರು.  

 ಅವರು ಗದಗ ತಾಲೂಕ ಅಡವಿಸೋಮಾಪೂರ ಗ್ರಾಮದಲ್ಲಿ ಶ್ರೀ ಸಂತ ಮಂಡಳಿ ಟ್ರಸ್ಟ್ ಕಮೀಟಿ ಅಡವಿಸೋಮಾಪೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಪಾಂಡುರAಗ ದೇವಸ್ಥಾನದ ೨೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಮೃದಂಗ ವಾದ್ಯ ನುಡಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

 ವೇದಿಕೆಯ ಮೇಲೆ ಗ್ರಾಮ ಪಂಚಾಯತ ಸದಸ್ಯರುಗಳಾದ ಮಲ್ಲಪ್ಪ ಅಸುಂಡಿ, ರಮೇಶ ಹಂಡಿ, ಬಸಮ್ಮ ಕನ್ಯಾಳ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಾಜೇಸಾಬ ಪೆಂಡಾರಿ, ಗ್ರಾಮದ ಹಿರಿಯರಾದ ಆನಂದಪ್ಪ ಪುರದ, ಗೋಣೆೆಪ್ಪ ದುರ್ಗಣ್ಣವರ, ಮಂಜುನಾಥ ಸೊರಟೂರ ಇನ್ನೂ ಮುಂತಾದವರು ಉಪಸ್ಥಿತರಿದ್ದರು. 

 ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಸಾÀಂಸ್ಕೃತಿಕ ಕಲಾತಂಡವಾದ ಜೇನುಗೂಡು ಜಾನಪದ ಕಲಾತಂಡ ಹುಯಿಲಗೋಳ ಇವರಿಂದ ಜಾನಪದ ಸಂಗೀತ, ಭಾವಗೀತೆ, ಭಕ್ತಿಗೀತೆ ಮತ್ತು ಕನ್ನಡ ನಾಡು, ನುಡಿ, ಗೀತೆಗಳೊಂದಿಗೆ ಹಾಸ್ಯ ಕಾರ್ಯಕ್ರಮ ನೆರೆದಿದ್ದ ಜನರನ್ನು ರಂಜಿಸಿದರು. 

 ಕಾರ್ಯಕ್ರಮವನ್ನು ಮಂಜುನಾಥ ಮಾದರ ಅವರು ಸ್ವಾಗತಿಸಿ ನಿರೂಪಿಸಿದರು. ಕೊನೆಯಲ್ಲಿ ರಾಜು ಪೆಂಡಾರಿಯವರು ವಂದಿಸಿದರು

Leave a Reply

Your email address will not be published. Required fields are marked *