ಗದಗ ಫೆಬ್ರುವರಿ 17: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸಂಕಲ್ಪ ಯೋಜನೆಯಡಿ ಗದಗ ಜಿಲ್ಲೆಯ ರಾಷ್ಟಿçÃಯ ಜೀವನೋಪಾಯಡಿ ಆಯ್ಕೆಯಾದ ವಿವಿಧ ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ 5 ದಿನದ ವಸತಿಯುತ ಉದ್ಯಮಶೀಲತಾ ತರಬೇತಿಯ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಹುಲಕೋಟಿಯ ಕೃûಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಪ್ರಮಾಣ ಪತ್ರ ವಿತರಕರಾಗಿ ಆಗಮಿಸಿದ, ಸಿಡಾಕ್ ಧಾರವಾಡದ ನಿರ್ದೇಶಕರಾದ ಬಸವರಾಜ. ಗೋಟುರ ಭಾಗವಹಿಸಿ, ಈಗಾಗಲೆ ತಾವೆಲ್ಲ ಸ್ವ ಸಹಾಯ ಸಂಘದ ನೇರವಿನಿಂದ ಚಟುವಟಿಕೆಗಳನ್ನು ಮಾಡುತ್ತಿರುತ್ತಿರಿ, ಈ ತರಬೇತಿಯಿಂದ ಅವುಗಳನ್ನು ವಾಣಿಜ್ಯ ಚಟುವಟಿಕೆಗಳನ್ನಾಗಿಸಿ, ಉದ್ಯಮಿಯಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಕೃಷಿ ವಿಜ್ಞಾನ ಕೇಂದ್ರದ ಅಡ್ವೆöÊಜರ್, ಡಾ. ಏಲ್. ಜಿ. ಹಿರೇಗೌಡರ ಅವರು ಮಾತನಾಡುತ್ತ, ಸಿಡಾಕ್ ಸಂಸ್ಥೆ ಮೊದಲಿನಿಂದಲೂ ಒಳ್ಳೆಯ ತರಬೇತಿ ನಿಡುತ್ತಾ ಬರುತ್ತಿದೆ. ಮುಂದೆ ನಮ್ಮ ಕೆ.ವಿ.ಕೆ ಸಂಸ್ಥೆಯಿAದ ಲೆಬಲಿಂಗ್, ಪ್ಯಾಕೆಜಿಂಗ್, ಮಾರುಕಟ್ಟೆ ಹೀಗೆ ಇನ್ನಿತರ ಸಹಾಯ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ, ಸತತ ಪ್ರಯತ್ನದಿಂದ ತಾವೆಲ್ಲರೂ ಉದ್ಯಮಿಗಳಾಗಿ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ, ಡೇ-ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಅಮರೇಶ. ಆರ್. ಅವರು ಯಶಸ್ವಿ ತರಬೇತಿ ಮಾಡಿದ್ದಕ್ಕಾಗಿ, ಸಿಡಾಕ್ ಸಂಸ್ಥೆಯನ್ನು ಅಭಿನಂಧಿಸಿದರು. ಈ ತರಬೇತಿ ಮುಗಿದ ನಂತರ ಒಂದು ಒಳ್ಳೆಯ ಉದ್ಯಮವನ್ನು ಆಯ್ಕೆ ಮಾಡಿ, ಉದ್ಯಮವನ್ನು ಪ್ರಾರಂಭಿಸಬೇಕೆAದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಡಾಕ್, ಧಾರವಾಡದ ಜಂಟಿ ನಿರ್ದೇಶಕರಾದ ಚಂದ್ರಶೇಖರ. ಎಚ್. ಅಂಗಡಿಯವರು ಮಾತನಾಡಿ ಈ ತರಬೇತಿ ಯಶಸ್ವಿಯಾಗಲು ಸಂಘದ ಮಹಿಳಾ ಸದಸ್ಯರ ಆಸಕ್ತಿ ಹಾಗೂ ಜಿಲ್ಲೆಯ ಸಿ.ಆರ್.ಪಿ. ಅವರ ಶ್ರಮ ಇದೆ, ಜೊತೆಗೆ ಕೆ.ವಿ.ಕೆ ಯಲ್ಲಿ ಕಲಿಕಾ ವಾತವರಣ ಇದೆ. ತಾವೆಲ್ಲರೂ ಈ ತರಬೇತಿಯಿಂದ ಮುಂದೆ ಮಹಿಳಾ ಉದ್ಯಮಿಗಳಾಗಿ ಉದ್ಯೋಗ ನೀಡಬೇಕೆಂದು ಹೇಳಿದರು.
ತರಬೇತಿ ಕೊನೆಯ ದಿನದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೂಪಾ. ಶಿರಿಯಪ್ಪಗೌಡರ ಹಾಗೂ ಪ್ರವೀಣ. ಅಂಗಡಿ ಅವರು ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಮುಳಗುಂದ, ತರಬೇತುದಾರರು ಸಿಡಾಕ್, ನಿರೂಪಿಸಿದರು. ವಿಜಯಲಕ್ಷಿ÷್ಮÃ. ನೆಲ್ಲೂರ ತರಬೇತುದಾರರು, ಸಿಡಾಕ್ ಇವರು ವಂದಿಸಿದರು.