ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿನ ಬಡ್ಡಿ ದಂಧೆಕೋರರ ಮೇಲೆ ಗದಗ ಪೊಲೀಸರು ಬಡ್ಡಿದಂಧೆಕೋರನ ಖಜಾನೆ ಭೇದಿಸಿದ್ದಾರೆ.
ಆರೋಪಿ ಯಲ್ಲಪ್ಪ ಮಿಸ್ಕಿನ್, ಸೇರಿದಂತೆ ಐದು ಜನರನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನ ಬಯಲಿಗೆಳೆದಿದ್ದಾರೆ.
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್, ಮನೆಯಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ. ಈ ಕುರಿತು ಗದಗ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ನಡೆಸಿ, ಮಾಹಿತಿ ನೀಡಿದರು ಗದಗ ಎಸ್ಪಿ ಬಿ.ಎಸ್ ನೇಮಗೌಡ ಅವರು, ಒಟ್ಟು 4 ಕೋಟಿ 90 ಲಕ್ಷದ, 98 ಸಾವಿರ ರೂ ಗಳನ್ನು ಜಪ್ತಿ ಮಾಡಲಾಗಿದೆ. ಎಂದರು.
ಪ್ರಕರಣದ ಮುಖ್ಯ ಆರೋಪಿ ಯಲ್ಲಪ್ಪ ಮಿಸ್ಕಿನ್, ಸೇರಿದಂತೆ ಐದು ಜನರನ್ನ ವಶಕ್ಕೆ ಪಡೆಯಲಾಗಿದೆ, ಅವರಿಂದ 992 ಗ್ರಾಂ ಚಿನ್ನ,650 ಬಾಂಡ್, 04 ಬ್ಯಾಂಕ್ ಎಟಿಎಂ, 09 ಬ್ಯಾಂಕ್ ಪಾಸ್ ಬುಕ್,02 ಎಲ್ ಐ ಸಿ, ಬಾಂಡ್ ಹಾಗೂ ಅಕ್ರಮವಾಗಿ ಸಂಗ್ರಹಣೆ ಮಾಡಿದ 65 ಲೀಟರ್ ಮದ್ಯದ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಎರಡು ದಿನಗಳಿಂದ 13 ಕಡೆ ದಾಳಿ ನಡೆಸಿದ್ದ ಪೊಲೀಸರು ಅಪಾರ ಪ್ರಮಾಣದ ಅಸ್ತಿ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.