Wednesday, March 26, 2025
Google search engine
Homeಉದ್ಯೋಗಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ

ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ

ಗದಗ: ಫೆ.10 : ಸಮಾಜದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ಒಂದು ಅಪರಾಧ. ಇದನ್ನು ಬುಡಸಮೇತ ಕಿತ್ತೋಗೆಯಲು ಎಲ್ಲರು ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಹೇಳಿದರು.

ಗದಗ ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ಜೀತ ಪದ್ಧತಿ ನಿರ್ಮೂಲನ ದಿನಾಚರಣೆ ಪ್ರಯುಕ್ತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮನುಷ್ಯತ್ವವನ್ನು ಎತ್ತಿ ಹಿಡಿಯಬೇಕು, ದಬ್ಬಾಳಿಕೆ ಸತತವಾಗಿ ನಡೆದರೆ ಅದು ಜೀತ ಪದ್ದತಿ ಎಂದು‌ ಹೇಳಿದರು. ಮಾನವೀಯತೆ ಯನ್ನು ನಾವು ನೀವೆಲ್ಲರೂ ಸೇರಿ ಉಳಿಸೋಣ ಅದಕ್ಕೆ ಎಲ್ಲರೂ ಪ್ರತಿಜ್ಞೆ ಮಾಡೋಣ, ಪ್ರತಿಜ್ಞೆಯ ಫಲವನ್ನು ನಾವು ಎಲ್ಲರೂ ಕಾರ್ಯರೂಪಕ್ಕೆ ತರೋಣ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ. ಎಸ್. ಶಿವನಗೌಡರ ಮಾತನಾಡಿ, ಪ್ರತಿವರ್ಷ ನಮ್ಮ ದೇಶದಲ್ಲಿ ಫೆಬ್ರವರಿ 9 ರಂದು ಜೀತ ಪದ್ಧತಿ ದಿನಾಚರಣೆ ಯನ್ನು ‌ಆಚರಿಸುತ್ತಾ ಬಂದಿದ್ದೇವೆ. ಬಹಳ ವರ್ಷಗಳ ಹಿಂದೆ ಜೀತ ಪದ್ಧತಿ ಹೆಚ್ಚು ಆಚರಣೆ ಯಲ್ಲಿ ಇತ್ತು. ಕಠಿಣ ಕಾನೂನು ಜಾರಿಮಾಡಿದ ನಂತರದ ದಿನಗಳಲ್ಲಿ ಇದು ಕ್ರಮೇಣ ‌ಕಡಿಮೆ ಆಗಿದೆ ಎಂದು‌ ಹೇಳಿದರು.

ಜೀತ ಪದ್ದತಿ ಎಂದರೆ ಅಲ್ಪ ಪ್ರಮಾಣದ ಸಾಲ ಪಡೆದು ಹಣವನ್ನು ತೀರಿಸಿಕೊಳ್ಳವುದಕ್ಕೆ ಅವರನ್ನು ಮತ್ತೊಬ್ಬರ ಮನೆಯಲ್ಲಿ ದುಡಿಸಿಕೊಳ್ಳುತ್ತಿದ್ದರು. ಆರಟಿಕಲ್ 21 ರ ಪ್ರಕಾರ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಸಿಕೊಂಡು ಕಡಿಮೆ ಕೊಲಿ ಪಾವತಿಸುವುದು ಮತ್ತು 1975 ಆಬಾಲಿಷನ್ ಆಕ್ಟ ಬಂದಿತು. ಈ ಆಕ್ಟ್ ಬಂದ ನಂತರ ಈ ರೀತಿ ಶಿಕ್ಷಿಸುವಂತೆ ಪ್ರಕ್ರಿಯೆ ಬಂದಿದೆ ಎಂದರು. ಇದರಲ್ಲಿ ಜಿಲ್ಲಾಧಿಕಾರಿಗಳು ದಂಡ ವಿದಿಸುವುದಲ್ಲದೆ ಆಕ್ಟ್ 16 ಪ್ರಕಾರ ಜೈಲು ಶಿಕ್ಷೆಯನ್ನು ವಿಧಿಸಬಹುದು. 13 ಆಕ್ಟ ಪ್ರಕಾರ ವಿಚಾರಣೆ ಇರುತ್ತದೆ ಜಿಲ್ಲಾಮಟ್ಟದ ಸಮೀತಿ, ತಾಲೂಕು ಮಟ್ಟದ ಸಮಿತಿಗಳು ಎಂದು ಹೇಳಿದರು. ಇದರಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸದಸ್ಯರು ಸಾಮಾಜಿಕ ಕಾರ್ಯ ಕರ್ತರು ಮತ್ತು ‌ಮಹಿಳಾ ಮತ್ತು ಮಕ್ಕಳ ‌ಕಲ್ಯಾಣ ಇಲಾಖೆ ಸದಸ್ಯರು ಈ ಸಮಿತಿ ಒಳಗೊಂಡಿರುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ ಪ್ರಾಸ್ತಾವಿಕ ಮಾತನಾಡುತ್ತಾ, ವಿವಿಧ ಶಾಲೆಯ ‌ಮಕ್ಕಳು ಮತ್ತು ಎನ್. ಜಿ. ಒ ದ ಎಲ್ಲ ಸಿಬ್ಬಂದಿಗೆ ಜೀತ ಪದ್ಧತಿ ಕುರಿತು ಉದಾಹರಣೆ ಸಮೇತ ಮಾತನಾಡಿದರು. ಕೃಷಿ , ಕೈಗಾರಿಕೆ ಗಳಲ್ಲಿ ಹೋಟಲಗಲ್ಲಿ ಫ್ಯಾಕ್ಟರಿ ಗಳಲ್ಲಿ ಮುಂತಾದವುಳಲ್ಲಿ ಒತ್ತಾಯ ಪೂರ್ವಕವಾಗಿ ಹೆಚ್ಚಿನ ಸಮಯ ಕೆಲಸವನ್ನು ‌ಮಾಡಿಸಿಕೊಂಡು, ಕಡಿಮೆ ಸಂಬಳ ನೀಡಲಾಗುತ್ತೆ ಮತ್ತು ಬಡತನ, ಜಾತಿ ಪದ್ಧತಿ, ಹಣದ ಆಮಿಷ ಕೊಟ್ಟು ಹಣವನ್ನು ಕೊಟ್ಟು ಮನೆ ಜಮೀನಿನಲ್ಲಿ ಮತ್ತು ದನದ ಕೊಟ್ಟಿಗೆಯಲ್ಲಿ ಹಣ ತೀರಿಸುವರೆಗರ ಜೀತದಾಳು ಮಾಡಿಕೊಳ್ಳುವುದಾಗಿದೆ ಎಂದು ಹೇಳಿದರು.

ಜೀತ ಪದ್ದತಿ ಹೊಗಲಾಡಿಸಲು ಭಾರತದದಲ್ಲಿ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಅಧಿನಿಯಮ, 1976 ಜಾರಿಗೆ ಬಂದಿರುತ್ತದೆ. ಎಲ್ಲರೂ ಈ ಕಾನೂನುಗಳ ಕುರಿತು ಜಾಗೃತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಗರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರವಿ ಗುಂಜಿಕರ್, ಡಿ ವೈ ಎಸ್ ಪಿ ಇನಾಮ್ದಾರ, ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ, ಸ್ಪಂದನಾ ಸ್ವಯಂ ಸೇವಾ ಸಂಸ್ಥೆಯ ಸುಶೀಲಾ, ಐ ಜೆ ಎಂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಅವರು ಸ್ವಾಗತಿಸಿದರು, ಸಿದ್ಧಲಿಂಗೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ