ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ.
ತ್ರಿವಿಕ್ರಮ್ ಮತ್ತು ರಜತ್ ಅವರಿಗೆ ಟಕ್ಕರ್ ಕೊಟ್ಟು ಈ ಸೀಸನ್ ವಿನ್ನರ್ ಆಗಿದ್ದಾರೆ.
ಟ್ರೋಫಿ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಕೂಡ ಗೆದ್ದಿದ್ದಾರೆ. ಇನ್ನು ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ. ರಜತ್ ಕಿಶನ್ ಅವರು ಎರಡನೇ ರನ್ನರ್ ಅಪ್ ಆದರು. ಜೊತೆಗೆ 10 ಲಕ್ಷ ರೂ ನಗದು ಬಹುಮಾನ ಗೆದ್ದರು.
ವೈಲ್ಡ್ ಕಾರ್ಡ್ ಮೂಲಕ ದೊತ್ಮನೆಗೆ ಬಂದು ಫಿನಾಲೆಯಲ್ಲಿ 2 ಮತ್ತು ಮೂರನೇ ಸ್ಥಾನ ಪಡೆದು ಹನುಮ ಮತ್ತು ರಜತ್ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೆ ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ಯಾವೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ದರು.
ಉಗ್ರಂ ಮಂಜು, ರಜತ್, ತ್ರಿವಿಕ್ರಮ್ ಅವರಿಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟಸ್ಟ್‌ಗಳಲ್ಲಿ ಹನುಮಂತ ಠಕ್ಕರ್ ಕೊಟ್ಟಿದ್ದರು. ಜೊತೆಗೆ ಧನ್‌ರಾಜ್ ಅವರೊಂದಿಗಿನ ಸ್ನೇಹ ಕೂಡ ತುಂಬಾ ಹೈಲೆಟ್ಸ್ ಆಗಿತ್ತು. ಬಿಗ್‌ಬಾಸ್ ಪಿನಾಲೆಗೆ ಒಟ್ಟು 6 ಮಂದಿ ಸೆಲೆಕ್ಟ್ ಆಗಿದ್ದರು. ಅದರಂತೆ ಕ್ರಮವಾಗಿ ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷತಾ, ರಜತ್ ಮತ್ತು ತ್ರಿವಿಕ್ರಮ್ ಕಪ್ ಗೆಲ್ಲುವ ರೇಸ್ ನಿಂದ ಹೊರಬಿದ್ದರು.