ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ ಉಸಿರು ಇರಲಿಲ್ಲ. ಅಂತಹ ಮಗುವಿಗೆ ಉಸಿರು ನೀಡಿದ ಮುಂಡರಗಿ ತಾಲೂಕ ಆಸ್ಪತ್ರೆಯ ವೈದ್ಯರು
ಮುಂಡರಗಿ ತಾಲೂಕ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ||ಸಾಗರ ಸಂಕನಗೌಡ್ರು ಹಾಗೂ ನರ್ಸಿಂಗ್ ಆಫೀಸರ್ ಶೋಭಾ ಸವಣೂರ ಸತತ ಪರಿಶ್ರಮದಿಂದ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ಜೀವವನ್ನು ಉಳಿಸಿದ ಮುಂಡರಗಿ ತಾಲೂಕ ಆಸ್ಪತ್ರೆ ವೈದ್ಯರು
ಮಗುವಿಗೆ ಜನ್ಮ ನೀಡಿದ ತಾಯಿಯ ಮುಖದಲ್ಲಿ ಹರ್ಷ ವ್ಯಕ್ತಪಡಿಸಿ.ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ತಾಯಿ ಆ ಮಗುವನ್ನು ಡಿಸ್ಟಾರ್ಜ್ ಮಾಡಲಾಯಿತು. ಬಡ ಜನರ ಸೇವೆಗೆ ಸತತವಾಗಿ ಶ್ರಮಿಸುತ್ತಿರುವ ಮುಂಡರಗಿ ತಾಲೂಕ ಆಸ್ಪತ್ರೆಯ ಸಿಬ್ಬಂದಿಯವರಿಗೆ ಎಲ್ಲೆಡೇ ಪ್ರಶಂಸೆ ವ್ಯಕ್ತವಾಗಿದೆ.
ತಾಲೂಕ ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಆಫೀಸರ್ಸ್ ಗೆ NRP ಪ್ರೋಗ್ರಾಮ್ ಮೂಲಕ ಸತತವಾಗಿ 3 ತಿಂಗಳ ಕಾಲ ತರಬೇತಿಯನ್ನು ನೀಡಿ, ಅವರನ್ನು ನವಜಾತ ಶಿಸುಗಳ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ತಯಾರಿ ಮಾಡಿರುವಂತಹ ನಮ್ಮ ಜಿಲ್ಲೆಯ ಖ್ಯಾತ ನವ ಜಾತ ಮಕ್ಕಳ ತಜ್ಞ ಡಾ|| ಶಿವನಗೌಡ ಜೋಳದರಾಶಿ ಗುರುಗಳಿಗೆ ತುಂಬು ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದ್ದಾರೆ
ಮುಂಡರಗಿ ತಾಲೂಕ ಆಸ್ಪತ್ರೆಯ ಆಡಳಿತ ಮಂಡಳಿ