ಗದಗ : ಪ್ರಕರಣದ ಆರೋಪಿ ಮಾರುತಿ ಉರ್ಫ ಮಾರುತೆಪ್ಪ ತಂದೆ ಹನಮಂತಪ್ಪ ಶಾ: ಮುಂಡರಗಿ ಮುಂಡರಗಿ ಪೋಲಿಸ ಠಾಣೆಯ ಹದ್ದಿಯ ಪೈಕಿ ಬೀಡನಾಳ ಗ್ರಾಮದಲ್ಲಿ ದಿನಾಂಕ 01-08-2019 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಹಂಡತಿಯ ಮೇಲೆ ಈಗ 3-4 ವರ್ಷಗಳಿಂದಾ ಕುಡಿದು ಬಂದು ಹೆಂಡತಿಯ ಮೇಲೆ ಸಂಶಯ ಪಟ್ಟು, ಅವಳಿಗೆ ದಿನಾಲು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತ ಹಾಗೂ ಅವಾಚ್ಯ ಶಬ್ದಗಳಿಂದ ಬೈದಾಡಿ ಅವಾಮಾನವಡಿಸುತ್ತಾ ಬಂದಿದ್ದು ಹಾಗೂ ಹೆಂಡತಿಗೆ ಬೇರೆ ಗಂಡಸರೊಂದಿಗೆ ಅನೈತಿಕ ಸಂಬಂದ ಇಟ್ಟುಕೊಂಡಿದ್ದಿ ಅಂತಾ ವಿನಾಕಾರಣ ಹೆಂಡತಿಯ ಮೇಲೆ ಸಂಶಯಪಟ್ಟು ಕೊಲೆ ಮಾಡುವ ಉದ್ದೇಶದಿಂದ ಕುದ್ದಿಯನ್ನು ತೆಗೆದುಕೊಂಡು ಸಿಕ್ಕ ಸಿಕ್ಕಲ್ಲಿ ಕಡಿದು ಬಾರಿ ರಕ್ತಗಾಯ ಪಡಿಸಿ ಕೊಲೆಮಾಡಲು ಪ್ರಯತ್ನಿಸಿದ್ದು ಆದ್ದರಿಂದ ಆರೋಪಿತನ ವಿರುದ್ಧ ಶ್ರೀ ಚಂದ್ರಪ್ಪ ಈಟಿ ಪಿ.ಎಸ್.ಐ ಮುಂಡರಗಿ ಬೋಲಿನ ಹೊಣೆ ಇವರು ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ.
ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತನಾದ ಮಾರುತಿ ಉರ್ಫ ಮಾರುತೆಪ್ಪ ತಂದೆ ಹನಮಂತಪ್ಪ ಸಾ:ಬೀಡನಾಳ ತಾ, ಮುಂಡರಗಿ ಇವನಿಗೆ ದಿನಾಂಕ : 17-01-2025 ರಂದು 6 ವರ್ಷ ಶಿಕ್ಷೆ ಮತ್ತು ರೂ 1,000-00 ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಎಂ ಶಿಗ್ಲಿ, ಪ್ರಧಾನ ಸರಕಾರಿ ಅಭಿಯೋಜಕರು, ಗದಗ ಇವರು ವಾದವನ್ನು ಮಂಡಿಸಿರುತ್ತಾರೆ.