ಗದಗ : ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ತೌಸಿಫ ಢಾಲಾಯತ ಇವರನ್ನು ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ ಅವರು ಶಿಫಾರಸ್ಸಿನ ಮೇರೆಗೆ ಗದಗ್ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ಎಚ್ ಅಬ್ಬಿಗೇರಿ ಅವರು ಆಯ್ಕೆ ಮಾಡಿ ಆದೇಶಿಸಿದ್ದಾರೆ.
ಸದರಿಯವರು ಬರುವ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಕಾರ್ಮಿಕ ಘಟಕವನ್ನು ಸಂಘಟನೆಗೊಳಿಸಬೇಕೆಂದು ಮತ್ತು ಭಾಷೆ, ನೆಲ, ಜಲ, ಧಕ್ಕೆಯಾದಾಗ ಹೋರಾಟಕ್ಕೆ ಮತ್ತು ಅನ್ಯಾಯದ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.