ಗದಗ ೧೯: ಗದಗ-ಬೆಟಗೇರಿ ಅಂಜುಮನ್ ಏ ಇಸ್ಲಾಂ ಕಮೀಟಿ ವಕ್ಫ ಸಂಸ್ಥೆಯ ಕರ್ನಾಟಕ ರಾಜ್ಯ ವಕ್ಫ ನಿಯಮ ೨೦೧೭ ರ ಪ್ರಕಾರ ಬೈಲಾ ಅನುಮೋದನೆಗೊಂಡಿದ್ದು ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಭೆಯಲ್ಲಿ ಸದರಿ ಸಂಸ್ಥೆಗೆ ಚುನಾವಣೆ ಜರುಗಿಸಲು ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಸದರಿ ವಕ್ಫ ಸಂಸ್ಥೆಯ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಜಿ. ಎಂ. ದಂಡಿನರವರು ಪತ್ರಿಕಾ ಪ್ರಕಟಣೆಯ ತಿಳಿಸಿದ್ದಾರೆ.