ಗದಗ : ಮೃಗಾಲಯದಲ್ಲಿ ಡಿಸೆಂಬರ-14 2024 ರಂದು ರಾತ್ರಿ 8.45ಕ್ಕೆ 16 ವರ್ಷ 04 ತಿಂಗಳ ವಯಸ್ಸಿನ ಅನಸೂಯಾ ಎಂಬ ಹೆಸರಿನ ಹೆಣ್ಣು ಹುಲಿಯು ನಿಧನವಾಗಿದೆ
ಅನಸೂಯಾ ಹೊಲ್ಡಿಂಗ್ ಕೋಣೆಯಲ್ಲಿ ವೃದ್ದಾಪ್ಯದಿಂದ ಸಾವನ್ನಪ್ಪಿದ್ದು, ಆಕೆಯ ಮರಣದ ನಂತರ ವಿವರವಾದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮತ್ತು ಕೇಂದ್ರಿಯ ಮೃಗಾಲಯ ಪ್ರಾಧಿಕಾರವು ನಿಗಧಿಪಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಹೆಣ್ಣು ಹುಲಿ ಅನಸೂಯಾಳ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ಈ ಸಮಯದಲ್ಲಿ ಗದಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಸಂತೋಷಕುಮಾರ ಕೆಂಚಪ್ಪನವರ ಭಾ.ಅ.ಸೇ, ಗದಗ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಮಹಾಂತೇಶ ಪೊಲೀಸಪಾಟೀಲ, ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ಶಶಿಧರ ಬಳ್ಳಾರಿ. ಮೃಗಾಲಯದ ವಲಯ ಅರಣ್ಯ ಅಧಿಕಾರಿಗಳು/ಕ್ಯೂರೇಟರ್ ಶ್ರೀಮತಿ ಸ್ನೇಹಾ ಕೊಪ್ಪಳ ಅಧ್ಯಕ್ಷರು, ಸದಸ್ಯರು ಹಾಗೂ ಮೃಗಾಲಯದ ಸಿಬ್ಬಂದಿಗಳು ಹಾಜರಿದ್ದರು.