Friday, January 24, 2025
Google search engine
Homeಉದ್ಯೋಗಗದಗ : ಕಾರ್ಮಿಕ ಕಲ್ಯಾಣ ರಥಕ್ಕೆ ಚಾಲನೆ

ಗದಗ : ಕಾರ್ಮಿಕ ಕಲ್ಯಾಣ ರಥಕ್ಕೆ ಚಾಲನೆ

ಗದಗ  ಡಿಸೆಂಬರ್ 9 : ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ ಕಲ್ಯಾಣ ರಥಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕು. ಸುಷ್ಮಾ ಕಾರ್ಮಿಕ ನಿರೀಕ್ಷಕರು ಗದಗ 1 ನೆ ವೃತ್ತ ಗದಗ, ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

 ಕಾರ್ಮಿಕ ಕಲ್ಯಾಣ ರಥವು ಜಿಲ್ಲಾದ್ಯಂತ ಡಿಸೆಂಬರ 9 ರಿಂದ 7 ದಿವಸಗಳ ಕಾಲ ಸಂಚರಿಸಲಿದೆ. ಕಾರ್ಮಿಕ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳು ಹಾಗೂ ಸಂಸ್ಧೆಯ ನೋಂದಣಿ ಹಾಗೂ ಸುಂಕ ಪಾವತಿ ವಿಧಾನ, ಕರ್ನಾಟಕ ರಾಜ್ಯ ಅಸಂಘಟಿದ ಸಮಾಜಿಕ ಭದ್ರತಾ ಮಂಡಳಿಯ ಯೋಜನೆಗಳು, ಬಾಲ ಕಾರ್ಮಿಕ ಹಾಗೂ ಕೀಶೂರ ಕಾರ್ಮಿಕ ಪಧ್ಧತಿ ನಿಷೇಧ ಬಗ್ಗೆ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news