ಗದಗ : ಡಿ.8 : ಜಿಲ್ಲೆಯ ಗದಗ ತಾಲೂಕಿನ ಸಮೀಪದ ನಾಗಾವಿ ಕ್ರಾಸ್ ಹತ್ತಿರ ವೈಟ್ ಸಿಮೆಂಟ್ ಮಿಕ್ಸಿಂಗ್ ವಿಲೇವಾರಿ ಮಾಡುವಾಗ ಟಿಪ್ಪರ್‌ಗೆ ವಿದ್ಯುತ್ ತಂತಿ ತಗುಲಿ ಟೀಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಟೀಪರ್ ಚಾಲಕ ಮರಿಯಪ್ಪ ಮುದಕಪ್ಪ ಬೋಳಿ (25)ಎಂದು ಗುರುತಿಸಲಾಗಿದೆ. ಲಿಂಗಧಾಳ ಗ್ರಾಮದ ನಿವಾಸಿ ಎನ್ನಲಾಗಿದೆ.
ನಾಗಾವಿ ಕ್ರಾಸ್ ಹತ್ತಿರ ಖಟವಟೆ ಲೇಔಟ್ ನಲ್ಲಿ ವೈಟ್ ಸಿಮೆಂಟ್ ಮಿಕ್ಸಿಂಗ್ ವಿಲೇವಾರಿ ಮಾಡುತ್ತಿದ್ದ ವೇಳೆ ಲೀಫ್ಟ್ ಎತ್ತಿದಾಗ ವಿದ್ಯುತ್ ತಂತಿ ಟಿಪ್ಪರ್‌ಗೆ ತಾಗಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ .
ಸ್ಥಳಕ್ಕೆ ಗದಗ ಗ್ರಾಮೀಣ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.