Friday, January 24, 2025
Google search engine
Homeಆರೋಗ್ಯಗದಗ : ಜಿಲ್ಲೆಯಾದ್ಯಂತ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನ ಕಾರ್ಯಕ್ರಮ...

ಗದಗ : ಜಿಲ್ಲೆಯಾದ್ಯಂತ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನ ಕಾರ್ಯಕ್ರಮ…

ಗದಗ : ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಗಳ ಪ್ರಯುಕ್ತ ಪ್ರಸ್ತುತ ವರ್ಷ ?ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ “ಅಂದದ ಶೌಚಾಲಯ ಆನಂದದ ಜೀವನ? ಎಂಬ ಘೋಷ ವಾಕ್ಯದೊಂದಿಗೆ ನವೆಂಬರ್ 19 ರಿಂದ ಡಿಸೆಂಬರ್ 10 ರವರೆಗೆ ಜಿಲ್ಲೆಯಾದ್ಯಂತ ವಿಶೇಷ ಆ0ದೋಲನ ನಡೆಯಲಿದೆ.

ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಬಯಲು ಬಹಿರ್ದೇಸೆ ಮುಕ್ತ ಸ್ಥಿತಿಯ ಸ್ಥಾನ ಮಾನವನ್ನು ಉಳಿಸಿಕೊಳ್ಳುವಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ವಿಶೇಷ ಆಂದೋಲನದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾರ್ಯತ್ಮಕವಲ್ಲದ / ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ಮತ್ತು ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ/ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು.

ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ತಿ, ಮರು ಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಸುಂದರೀಕರಣಗೊಳಿಸಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಸಮುದಾಯವನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು.

ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಯನ್ನು ಉತ್ತೇಜನೆ,ವೈಯಕ್ತಿಕ ಗೃಹ ಶೌಚಾಲಯಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುವುದು. ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು ಸಮುದಾಯ ಶೌಚಾಲಯಗಳ ಅಂತಿಮ ಸಮೀಕ್ಷೆ ಮಾಡಿ, ಶೌಚಾಲಯಗಳ ಕಾರ್ಯನಿರ್ವಹಣೆ, ಶೌಚಾಲಯಗಳನ್ನು ಅಂದಗೊಳಿಸಲು ಬಿಡಿಸಿರುವ ಚಿತ್ರಕಲೆ, ಗೋಡೆ ಬರಹ, ಸೌಂದರೀಕರಣ ಹಾಗೂ ಉತ್ತಮ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಮೌಲ್ಯಮಾಪನ ಮಾಡಿ, ಪುರಸ್ಕಾರ/ ನಗದು ಬಹುಮಾನಕ್ಕಾಗಿ ನೀಡಲಾಗುವುದು.

ಅತ್ಯುತ್ತಮ ವೈಯಕ್ತಿಕ ಗೃಹ ಶೌಚಾಲಯ ಸ್ಪರ್ಧೆ

ಅತ್ಯುತ್ತಮವಾಗಿ ನಿರ್ವಹಣೆ ಮಾಡಿ ನಿರಂತರವಾಗಿ ಉಪಯೋಗಿಸುತ್ತಿರುವ ಹಾಗೂ ಉತ್ತಮ ರೀತಿಯಲ್ಲಿ ಬಣ್ಣ ಬಳಿದಿರುವ ಶೌಚಾಲಯಗಳನ್ನು ಗುರುತಿಸಿ ಸಂಬಂಧಿಸಿದ ಫಲಾನುಭವಿಗೆ ಬಹುಮಾನ ನೀಡಿ ಗೌರವಿಸಿವುದು.

ಸಮುದಾಯ ಶೌಚಾಲಯಗಳ ಸೌಂದರ್ಯಿಕರಣ ಸ್ಪರ್ಧೆ

ಸಮುದಾಯ ಶೌಚಾಲಯ ಬಳಕೆ ಮತ್ತು ಶುಚಿತ್ವ ಹಾಗೂ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಮುದಾಯದಲ್ಲಿ ಉತ್ತೇಜನ ನೀಡಲು ಈ ಆಂದೋಲನವನ್ನು ಆಯೋಜಿಸುವುದು.

ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಶೌಚಾಲಯ (ಉತ್ತಮ ಶೌಚಾಲಯ) ಸ್ಪರ್ಧೆ ಮತ್ತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು. ಜಿಲ್ಲೆಗಳಲ್ಲಿರುವ ಕೈಗಾರಿಕೆಗಳು, ಸ್ವಯಂ ಸೇವಾ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಇತರ ಸಾಂಸ್ಥಿಕ ಸಂಸ್ಥೆಗಳನ್ನು ಗುರುತಿಸಿ, ಈ ಆಂದೋಲನದ ಭಾಗವಾಗಿರುವ ಫಲಾನುಭವಿಗಳಿಗೆ ಪುರಸ್ಕಾರ ವಿತರಣೆ, ಶೌಚಾಲಯಗಳ ಸೌಂದರ್ಯಕರಣ ಪುರಸ್ಕಾರ ನೀಡಲಾಗುವುದು.

ನವೆಂಬರ್ 14 ರಿಂದ 18 ರವರೆಗೆ ಜಿಲ್ಲೆಯಲ್ಲಿ ಆಂದೋಲನ ಹಮ್ಮಿಕೊಳ್ಳುವ ಸಂಬಂಧ ಪೂರ್ವಸಿದ್ಧತಾ ಸಭೆಗಳನ್ನು ಆಯೋಜಿಸುವುದು ಮತ್ತು ಕಾರ್ಯತ್ಮಕವಲ್ಲದ ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಲು ಸಮೀಕ್ಷೆ ನಡೆಸುವುದು ತದನಂತರ ಸಮೀಕ್ಷೆ ನಡೆಸುವುದು, ನವೆಂಬರ್ 19, ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸ್ಥಿತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ/ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದು,ವಿಶ್ವ ಶೌಚಾಲಯ ದಿನಾಚರಣೆಗೆ ಚಾಲನೆ ನೀಡಿ ಸ್ವಚ್ಛತಾ ಕಾರ್ಮಿಕ ಸ್ವಚ್ಛತಾಗಾರರ ಅಭಿನಂದನೆ ಮತ್ತು ಅರ್ಹ ಫಲಾನುಭವಿಗಳಿಗೆ Iಊಊಐ ಗಳ ಮಂಜೂರಾತಿ ಪತ್ರಗಳ ವಿತರಣೆ ಮಾಡುವುದು.

ನವೆಂಬರ್ 19 ರಿಂದ ಡಿಸೆಂಬರ್ 5 ರ ವರೆಗೆ ಅಭಿಯಾನದ ಅವಧಿಯಲ್ಲಿ ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ತಿ ಮರು ಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.ವಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಸುಂದರೀಕರಣಗೊಳಿಸಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದು.

ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಯನ್ನು ಉತ್ತೇಜಿಸುವುದು.ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು ಸಮುದಾಯ ಶೌಚಾಲಯಗಳ ಅಂತಿಮ ಸಮೀಕ್ಷೆ ಮಾಡಬೇಕಿದೆ.ಶೌಚಾಲಯಗಳ ಕಾರ್ಯನಿರ್ವಹಣೆ ಶೌಚಾಲಯಗಳನ್ನು ಅಂದಗೊಳಿಸಲು ಬಿಡಿಸಿರುವ ಚಿತ್ರಕಲೆ ಗೋಡೆ ಬರಹ,ಸೌಂದರೀಕರಣ ಹಾಗೂ ಉತ್ತಮ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ಪುರಸ್ಕಾರಕ್ಕಾಗಿ ಶಿಫಾರಸ್ಸು ಮಾಡುವುದು.

ಡಿಸೆಂಬರ್ 10, ರಂದು ಅಭಿಯಾನದ ಸಮಾರೋಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾದ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ ಗಳಿಗೆ ಪುರಸ್ಕಾರ ನಗದು ನೀಡಿ ಗೌರವಿಸಲಾಗುವುದು.

ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಿ , ಅವುಗಳನ್ನು ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸಲಾಗುವುದು. ಅಭಿಯಾನದ ಸಮಾರೋಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾದ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ ಗಳಿಗೆ ಪುರಸ್ಕಾರ ನಗದು ನೀಡಿ ಗೌರವಿಸಲಾಗುವುದು. ಜಿಲ್ಲೆಯಾದ್ಯಂತ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತಂತೆ ವ್ಯಾಪಕ ಜಾಗೃತಿ ಮೂಡಿಸಲಾಗುವುದು

ಭರತ್ ಎಸ್ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್,ಗದಗ ಜಿಲ್ಲೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news