Thursday, December 12, 2024
Google search engine
Homeಉದ್ಯೋಗಗದಗ : ಗಜೇಂದ್ರಗಡ ತಹಶೀಲ್ದಾರಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ : ಜಿಲ್ಲಾಧಿಕಾರಿಗಳಿಗೆ ಮನವಿ

ಗದಗ : ಗಜೇಂದ್ರಗಡ ತಹಶೀಲ್ದಾರಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ : ಜಿಲ್ಲಾಧಿಕಾರಿಗಳಿಗೆ ಮನವಿ

ಗದಗ: ಸೋಮವಾರ (ನ.೪) ಗಜೇಂದ್ರಗಡದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ತಾಲ್ಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ ಕಿರಣಕುಮಾರ ಕುಲಕರ್ಣಿ ಅವರನ್ನು ಸಾರ್ವಜನಿಕವಾಗಿಯೇ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆಯನ್ನು ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ವಾಲ್ಮೀಕಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಕ್ಫ್ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಭಾಗವಾಗಿ ಗಜೇಂದ್ರಗಡದಲ್ಲೂ ಪ್ರತಿಭಟನೆ ನಡೆದಿದೆ.

ಆದರೆ, ಪ್ರತಿಭಟನೆ ನಂತರ ಮನವಿ ಸ್ವೀಕರಿಸಲು ಆಗಮಿಸಿದ ತಾಲ್ಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ ಕಿರಣಕುಮಾರ ಕುಲಕರ್ಣಿ ಅವರನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರು ಸಾರ್ವಜನಿಕವಾಗಿಯೇ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಕಂದಾಯ ಇಲಾಖೆಯ ಅಧಿಕಾರಿ/ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ.

ಕಂದಾಯ ಇಲಾಖೆ ನೌಕರರು ನಿತ್ಯ ಸಾರ್ವಜನಿಕರ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಒಂದು ಜವಾಬ್ದಾರಿಯುತ ವ್ಯಕ್ತಿ ಈ ರೀತಿ ನಡೆದುಕೊಂಡಿದ್ದು ದುರ್ದೈವದ ಸಂಗತಿ. ಈ ಘಟನೆಯಿಂದ ಕಂದಾಯ ಇಲಾಖೆ ನೌಕರರಿಗೆ ಒಂದು ರೀತಿಯ ಭಯ ಶುರುವಾಗಿದೆ. 

ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿ/ನೌಕರರಿಗೆ ತೊಂದರೆ ನೀಡಿ, ನಿಷ್ಪಕ್ಷಪಾತವಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಖೇದಕರ. ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಜೊತೆಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ವಿರುದ್ಧ ಸಕಾರದ ನಿಯಮದನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

ಮನವಿಯನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಸ್. ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಫ್. ಎಸ್. ಗೌಡರ, ಉಪಾಧ್ಯಕ್ಷರಾದ ಬಿ. ಎಸ್. ಕನ್ನೂರ, ಎಂ.ಎ. ನದಾಫ, ಖಜಾಂಚಿ ಕೆ. ಎಚ್. ಓಲೇಕಾರ, ಸಲಹಾ ಸಮಿತಿ ಅಧ್ಯಕ್ಷ ಎನ್. ಐ. ದೊಡ್ಡಮನಿ, ರಾಜ್ಯ ಪರಿಷತ್ ಸದಸ್ಯರಾದ ಎಸ್. ಎಸ್. ಕಡಗದ, ಬಿ. ವಿ. ಕಾಸಾರ, ಜಂಟಿ ಕಾರ್ಯದರ್ಶಿ ಎಂ. ವಿ. ಪೊಲೀಸಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಸಿ. ಹೊಸಕೋಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಜಿ. ಬಿ.ಆನಂದಪ್ಪನವರ, ಸಾಂಸ್ಕೃತಿಕ ಕಾರ್ಯದರ್ಶಿ ಜಿ. ಪಿ. ಪಾಟೀಲ, ಕ್ರೀಡಾ ಕಾರ್ಯದರ್ಶಿ ಜೆ. ಎಚ್. ಭಜಂತ್ರಿ, ಆರ್. ವಾಯ್. ವಿಕ್ರಂ, ಸಹ-ಕಾರ್ಯದರ್ಶಿಗಳಾದ ವಿವೇಕ ಎಸ್. ಡಿಸ್ಲೆ, ಶ್ರೀಮತಿ ಎಸ್. ಎ. ಪಾಟೀಲ, ಅರುಣಗೌಡ ಬಿ. ಮಂಟೂರ ಸೇರಿ ಅನೇಕರು ಇದ್ದರು.

ಶಾಸಕ-ಸಚಿವರಾಗಿದ್ದಂಥವರು, ಸಾರ್ವಜನಿಕ ಜೀವನದಲ್ಲಿದ್ದವರು ಅಧಿಕಾರಿಗಳ ಜತೆ ಅದರಲ್ಲೂ ತಾಲ್ಲೂಕು ದಂಡಾಧಿಕಾರಿಗಳ ಜತೆಗೆ ನಡೆದುಕೊಂಡ ರೀತಿ ಖಂಡನೀಯ. ಇಂತಹ ಘಟನೆ ಯಾವುದೇ ಅಧಿಕಾರಿ ಅಥವಾ ನೌಕರರ ಮೇಲೆ ಮರುಕಳಿಸದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ.

-ಡಿ.ಟಿ. ವಾಲ್ಮೀಕಿ, ಜಿಲ್ಲಾಧ್ಯಕ್ಷ, ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ, ಗದಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧೆ ಗದಗ : ಜಿಲ್ಲಾ ಪಂಚಾಯತಿ SDA ಮನೆ, ಮೇಲೆ ಲೋಕಾಯುಕ್ತ ದಾಳಿ ! BREAKING : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಿವಶ ಗದಗ : ಕಾರ್ಮಿಕ ಕಲ್ಯಾಣ ರಥಕ್ಕೆ ಚಾಲನೆ ಗದಗ : ಅವಕಾಶ ವಂಚಿತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಇಲಾಖಾ ಅಧಿಕಾರಿಗಳು ಶ್ರಮಿಸಿ ಗದಗ : ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ : ಇ ಓ ಮಲ್ಲಯ್ಯ ಕೊರವನವರ ಕರೆ ಗದಗ : ಟಿಪ್ಪರ್‌ಗೆ ವಿದ್ಯುತ್‌ ತಂತಿ ತಾಗಿ ಚಾಲಕ ಸ್ಥಳದಲ್ಲೇ ಸಾವು ! ಗದಗ ಡಿ.8 : ಬೀದಿ ನಾಯಿ ದಾಳಿ : ಮೂರು ವರ್ಷದ ಬಾಲಕನಿಗೆ ಗಂಭೀರ ಗಾಯ ! ಗದಗ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನಾಚರಣೆ ಗದಗ : ಲೋಕಾಯುಕ್ತ ಜನ ಸಂಪರ್ಕ ಸಭೆ