ಗದಗ ನ.3: ಭಿಷ್ಮ ಕೆರೆಯಿಂದ ನಗರದ ಸೌಂದರ್ಯ ಜೊತೆಗೆ ನಗರದ ಅಂರ್ತಜಲ ಹೆಚ್ಚಾಗಿ ಜನರಿಗೆ ನೆಮ್ಮದಿಯನ್ನು ತಂದಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಹೇಳಿದರು.
ನಗರದ ಭಿಷ್ಮ ಕೆರೆಯ ದಂಡೆಯ ಮೇಲೆ ಜಿಲ್ಲಾಡಳಿತ, ನಗರ ಸಭೆ ಸಂಯುಕ್ತ ಆಶ್ರಯದಲ್ಲಿ ರವಿವಾರ ಏರ್ಪಡಿಸಿದ ಭಿಷ್ಮ ಕೆರೆಯ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಭಿಷ್ಮ ಕೆರೆಯ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಸರ್ವಧರ್ಮದ ಪೂಜ್ಯರು ಪಾಲ್ಗೊಂಡಿದ್ದರಿಂದ ಪೂಜೆಯ ವಿಶೇಷತೆ ಹೆಚ್ಚಾಗಿದೆ. ಗದಗಿನ ಅಂತರ್ಜಲವನ್ನು ಹೆಚ್ಚಿಸಿರುವಂತ ಜಲ ಸಂಗ್ರಾಹ ಎಲ್ಲರಿಗೂ ಸಮಾಧಾನ ನೆಮ್ಮದಿ ಮತ್ತು ಅನುಕೂಲವನ್ನು ಒದಗಿಸಿದೆ ಎಂದರು.
70 ಕಿಲೋ ಮೀಟರ್ ದೂರದ ತುಂಗಭದ್ರ ನದಿಯಿಂದ ನೀರನ್ನು ತಂದು ಭಿಷ್ಮ ಕೆರೆಯನ್ನು ತುಂಬಿಸಿ ಈ ಪ್ರದೇಶದ ಜನರಿಗೆ ಅನುಕೂಲಕ್ಕಾಗಿ ನಿರ್ಮಿಸಿದ ಕೆರೆಯೂ ಇಂದು ತುಂಬಿದಕ್ಕೆ ಬಾಗಿನ ಅರ್ಪಿಸಿದ್ದೆವೆ. ಹೀಗೆಯೇ ಸದಾಕಾಲ ಭಿಷ್ಮ ಕೆರೆ ತುಂಬಿ ನಗರದ ಜನರಿಗೆ ಆರ್ಶಿವಾದ ನೀಡಲಿ ಎಂದು ಪಾರ್ಥಿಸಿದರು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪುತ್ಥಳಿ ಉಪಸ್ಥಿತಿ ಮೂಲಕ ಈ ಭಿಷ್ಮ ಕೆರೆಯು ಸೌಂದರ್ಯ ದಿಂದ, ಆಧ್ಯಾತ್ಮ ದಿಂದ, ಮನಶಾಂತಿ ದೃಷ್ಟಿ ಯಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ನುಡಿದರು.
ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಜಿಗಳು ಸಾನಿಧ್ಯ ವಹಿಸಿ ಮಾತನಾಡಿ, ನೀರು ಮನುಷ್ಯನಿಗೆ ಅತ್ಯಂತ ಮುಖ್ಯವಾಗಿರುವಂತದ್ದು, ಪಂಚಭೂತಗಳಾದ ಅಗ್ನಿ, ಭೂಮಿ, ವಾಯು, ಆಕಾಶ, ನೀರಿನಿಂದ ಮಾನವ ಶರೀರ ನಿರ್ಮಿತವಾಗಿದ್ದನ್ನು ನಮ್ಮ ಹಿರಿಯರು ಗಮನಿಸಿ ಪಂಚಭೂತಗಳಿಗೆ ಪ್ರಾರಭದಿಂದಲೂ ಗೌರವವನ್ನು ನೀಡಿದ್ದಾರೆ. ನೀರು ಅತ್ಯಂತ ಪವಿತ್ರವಾದದ್ದು, ಭೀಷ್ಮ ಕೆರೆಯು ಗದಗ ನಗರದ ಜನರ ನೀರಿನ ದಾಹವನ್ನು ತಣಿಸಿರುವಂತ ಜೀವನಾಡಿಯಾಗಿದೆ ಎಂದರು
ದೂರದ ತುಂಗಭಂದ್ರ ನದಿಯಿಂದ ಭಿಷ್ಮ ಕೆರೆಗೆ ನೀರನ್ನು ತಂದು ಮಹತ್ವಪೂರ್ಣ ಸಾಧನೆ ಮಾಡಿ ಈ ಪ್ರದೇಶದ ಜನರಿಗೆ ಅನುಕೂಲ ಮಾಡಿರುವ ಸಚಿವ ಎಚ್. ಕೆ. ಪಾಟೀಲ ಅವರು ಅಭೀನವ ಭಗೀರಥ ಎಂದರು. ಭಿಷ್ಮ ಕೆರೆಯಿಂದ ಅಂರ್ತಜಲ ಸಮೃದ್ಧಿ ಆಗುವುದರ ಜೊತೆಗೆ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಿದ್ದು ವಿಶೇಷ, ಭಿಷ್ಮ ಕೆರೆಗೆ ಪ್ರತಿ ದಿನಾಲೂ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಭವ್ಯ ಬಸವೇಶ್ವರ ಮೂರ್ತಿ ನೋಡಿ ಕಣ್ಣತುಂಬಿಕೊಂಡು, ಭಿಷ್ಮ ಕೆರೆಯಲ್ಲಿರು ಬೋಟಿಂಗ್ ಮೂಲಕ ಜಲವಿಹಾರ ಮಾಡಿ ಆಂದಸಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಗುರುಗಳು, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ,ಕೆಡಿಪಿ ಸದಸ್ಯ ಡಿ ಆರ್ ಪಾಟೀಲ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ,ಬಿ,ಅಸೂಟಿ, ತಾಲ್ಲೂಕ ಅಧ್ಯಕ್ಷ ಅಶೋಕ ಮಂದಾಲಿ, ಎಸ್ ಎನ್ ಬಳ್ಳಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್ ನೇಮಗೌಡ ಸೇರಿದಂತೆ ಹಲವರು ಹಾಜರಿದ್ದರು. ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೊತದಾರ ಕಾರ್ಯಕ್ರಮ ನಿರ್ವಹಿಸಿದರು.