ಗದಗ : ಸಿಂಗಟಾಲೂರು ಹನಿ ನೀರಾವರಿ ಯೋಜನೆ : ದ್ವಿಗುಣವಾದ ಮೆಕ್ಸಿಕನ್ ಬೀನ್ಸ್ ಬೆಳೆಯ ಇಳುವರಿ

ಗದಗ ೧೮: ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಡಿಯಲ್ಲಿ ಬರುವ ಸಿಂಗಟಾಲೂರು ಏತವ ಹನಿ ನೀರಾವರಿ ಯೋಜನೆ ಪ್ಯಾಕೇಜ್-III ರ ಫಲಾನುಭವಿ ರೈತರಾದ ಶ್ರೀ. ಹೇಮಣ್ಣ ನೂಕಾಪೂರ ಅವರು ನೆಟಾಫೀಮ್ ಇರೀಗೇಷನ್ ಇಂಡಿಯಾ ಕಂಪನಿ ಸಹಾಯದೊಂದಿಗೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮೇಕ್ಸಿಕನ್ ಬ್ಲಾಕ್ ಬೀನ್ಸ್ ಬೆಳೆಯನ್ನು ಹನಿ ನೀರಾವರಿ ಪದ್ದತಿ ಮೂಲಕತಮ್ಮ ಹೊಲದಲ್ಲಿಒಂದುಎಕರೆಗೆ ೧೦ ಕ್ವಿಂ. ಒಣ ಕಾಳುಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ. ಇತರ ದ್ವಿದಳ ದಾನ್ಯಗಳಾದ ಹೆಸರು ಮತು ್ತತೊಗರಿ ಬೆಳಗಳಿಗೆ ಹೋಲಿಸಿದರೆ ಅವುಗಳ ಸಾಮಾನ್ಯ ಇಳುವರಿಗಿಂತ ಎರಡು ಪಟ್ಟು ಮೆಕ್ಸಿಕನ್ ಬೀನ್ಸ್ ಕಾಳುಗಳನ್ನು ಹನಿ ನೀರಾವರಿ ಪದ್ದತಿಯಲ್ಲಿ ಬೆಳೆಯಬಹುದೆಂದುರೈತರುತಮ್ಮಅಭಿಪ್ರಾಯವನ್ನು ವ್ಯಕ್ತಪಡಿದರು.

ಮೇಕ್ಸಿಕನ್ ಬ್ಲಾಕ್ ಬೀನ್ಸ್ ಇದೊಂದು ಕಡಿಮೆಅವಧಿಯಲ್ಲಿ ಬೆಳೆಯುವ ದ್ವಿದಳ ಧಾನ್ಯವಾಗಿದೆ. ಈ ಧಾನ್ಯವು ಹೇರಳವಾಗಿ ಕಾರ್ಬೋಹೈಡ್ರೆöÊಟ್ಸ, ಪೈಬರ್ ಮತ್ತು ಪ್ರೊಟೀನ್ ಒಳಗೊಂಡಿದೆ. ಇದೊಂದು ನಾರಿನ ಅತ್ಯುತ್ತಮ ಮೂಲವಾಗಿದ್ದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಧಾನ್ಯವನ್ನು ಮೆಕ್ಸಿಕನ್ ಆಹಾರ ಪದ್ದತಿಯ ರೆಸ್ಟೊರೆಂಟ್‌ಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.

ಬೆಳೆಯುವ ವಿಧಾನ:
ಈ ಬೆಳೆಯನ್ನು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದಾಗಿದೆ. ಈ ಬೆಳೆಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಸೂಕ್ತವಾಗಿದೆ. ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿದ ನಂತರ ಬೆಡ್ ಶೆಪರ್ ಸಹಾಯದಿಂದ ೧.೨ ಮೀ. ಅಗಲದ ಏರು ಮಡಿಗಳನ್ನು ನಿರ್ಮಿಸಿಕೊಳ್ಳಬೇಕು ಹೀಗೆ ನಿರ್ಮಿಸಿದ ಪ್ರತಿ ಮಡಿಗಳ ಮೇಲೆ ಒಂದೊAದು ಡ್ರಿಪ್ ಲ್ಯಾಟರಲ್‌ಗಳನ್ನು ಅಳವಡಿಸಿಕೊಂಡು ೬೦ ಸೆ.ಮೀ. ಅಗಲ ಮತ್ತು ೧೦ ಸೆ.ಮೀ. ಅಂತರದಲಿ ್ಲಪ್ರಮಾಣಿಕೃತ ಬೀಜಗಳನ್ನು ಬಿತ್ತನೆ ಮಾಡಬೇಕು. ಪ್ರತಿ ಎಕರೆ ಪ್ರದೇಶಕ್ಕೆ ಸುಮಾರು ೬೦,೦೦೦ ರಿಂದ ೭೦,೦೦೦ ಸಸಿಗಳನ್ನು ಬೆಳೆಸಬೇಕು. ಬೆಳೆಗೆ ಬೇಕಾಗುವ ಪ್ರಮಾಣದಲ್ಲಿ ಹನಿ ನೀರಾವರಿ ಪದ್ದತಿಯ ಮೂಲಕ ನೀರುಕೊಡಬೇಕು, ಪ್ರಮುಖವಾಗಿ ಬೆಳೆಯ ೫೦ ರಿಂದ ೮೦ ದಿನಗಳಲ್ಲಿ ನೀರು ಮತ್ತು ಪೋಷಕಾಂಶಗಳನ್ನು ತಪ್ಪದೆ ಪೂರೈಸಬೇಕು ಏಕೆಂದರೆ ಆ ಸಮಯದಲ್ಲಿ ಬೆಳೆಯು ಹೂ ಮತ್ತು ಕಾಳು ಕಟ್ಟುವ ಹಂತದಲ್ಲಿರುತ್ತದೆ. ಪ್ರತಿ ಎಕರೆ ಪ್ರದೇಶಕ್ಕೆ ೭ ರಿಂದ ೯ ಕ್ವಿಂ. ಒಣಕಾಳುಗಳನ್ನು ಪಡೆಯಬಹುದು ಮತ್ತು ಪ್ರತಿಕ್ವಿಂಟಲ್ ಕಾಳುಗಳನ್ನು ರೂ.೭,೫೦೦/- ವರೆಗೆ ಮಾರಾಟ ಮಾಡಬಹುದಾಗಿದೆ. ಹನಿ ನೀರಾವರಿ ಪದ್ದತಿಯಲ್ಲಿ ಬೆಳೆಗಳನ್ನು ಬೆಳೆಯುದರಿಂದ ಉತ್ಕೃಷ್ಠ ಮತ್ತುಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.
ಮೆಕ್ಸಿಕನ್ ಬೀನ್ಸ್ ಬೆಳೆಯಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸುವದರಿಂದ ಆಗುವ ಪ್ರಯೋಜನಗಳು:ಸಮಾಂತರ ನೀರಿನ ಹಂಚಿಕೆ,ಕಡಿಮೆ ಪ್ರಮಾಣದ ನೀರು ಮತ್ತು ರಸಗೊಬ್ಬರಗಳ ಬಳಕೆ, ಕಳೆ ನಿಯಂತ್ರಣ, ಆಳಿನ ಉಳಿತಾಯ, ಉತ್ಕೃಷ್ಟ ಮತ್ತುಅಧಿಕ ಇಳುವರಿಯನ್ನು ಪಡೆಯಬಹುದೆಂದು ನೆಟಾಫಿಮ್‌ಕಂಪನಿಯ ಬೇಸಾಯತಜ್ಞರು ಶ್ರೀ. ಆನಂದಆಲೂರರವರು ತಿಳಿಸಿದರು.
ಹನಿ ನೀರಾವರಿ ಪದ್ದತಿಯಲ್ಲಿ ಈ ಬೆಳೆಯನ್ನು ಸುಲಭವಾಗಿ ಬೆಳೆಯಬಹುದು ಇದರಿಂದ ಬೆಳೆಯು ಕಡಿಮೆ ಪ್ರಮಾಣದ ನೀರು ಮತು ್ತರಸಗೊಬ್ಬರ ಬಳಸಿಕೊಂಡು ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಮತ್ತು ಅಧಿಕ ಆದಾಯವನ್ನು ಪಡೆಯಬಹುದೆಂದು ಶ್ರೀ. ಗಿರೀಶ ದೇಶಪಾಂಡೆ (ಸಹಾಯಕ ಜನರಲ್ ಮ್ಯಾನೇಜರ್, ನೆಟಾಫಿಮ್)ತಿಳಿಸಿದರು.

Leave a Reply

Your email address will not be published. Required fields are marked *