ರಾಜ್ಯದ ಐತಿಹಾಸಿಕ ಕ್ಷೇತ್ರವಾಗಿರುವ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಶ್ರೀ ಮಾಲತೇಶ ಸ್ವಾಮಿಯ ದಸರಾ (Dasara) ಮತ್ತು ಕಾರ್ಣಿಕೋತ್ಸವವನ್ನು ಆಯೋಜಿಸಲಾಗಿತ್ತು. ಅಕ್ಟೋಬರ್ 3 ಅಂದರೆ ಗುರುವಾರ ದಸರಾ ಆಚರಣೆಗೆ ಘಟಸ್ಥಾಪನೆ ಮಾಡಲಾಗಿತ್ತು, ಇಂದು (ಅಕ್ಟೋಬರ್ 11) ಮಹಾನವಮಿಯ ದಿನ ಸಂಜೆ 6 ಗಂಟೆಗೆ ಗುರುಗಳ ಆಶೀರ್ವಾದದ ನಂತರ ಕಾರ್ಣಿಕ ಅಜ್ಜನವರಿಂದ ಕಾರ್ಣಿಕೋತ್ಸವ ನಡೆಯಿತು
ಕಾರ್ಣಿಕ ನುಡಿ?
ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ನವರಾತ್ರಿಯಂದು 9 ದಿನ ಉಪವಾಸವಿದ್ದು, ಇಂದು 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದರು. ಈ ಬಾರಿಯ ಕಾರಣಿಕದಲ್ಲಿ “ಆಕಾಶದತ್ತ ಚಿಗುರಿತಲೇ, ಬೇರು ಮುತ್ತಾಯಿತಲೇ ಪರಾಕ” ಎಂದು ಗೊರಗಯ್ಯ ಭವಿಷ್ಯ ನುಡಿದಿದ್ದಾರೆ.
ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಮಾಧ್ಯಮ ಗೊರವಯ್ಯನ ಕಾರ್ಣಿಕ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುದ್ದಾತಲೇ ಪರಾಕ್ ಅಂತ ಕಾರ್ಣೀಕ ಆಗಿದೆ. ‘ಆಕಾಶದತ್ತ ಚಿಗುರಿತಲೆ’ ಎಂದರೆ ಒಳ್ಳೆ ಮಳೆ ಆಗುತ್ತೆ, ‘ಬೇರೆಲ್ಲ ಮುದ್ದಾಯಿತಲೇ’ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ ಅದನ್ನು ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಅಂತಾ ವಿಶ್ಲೇಷಣೆ ಮಾಡಬಹುದು.
ರೈತರಿಗೆ ಒಳ್ಳೆ ಬೆಳೆ ಬರುತ್ತೆ: ಸಂತೋಷ್ ಭಟ್ ಗುರೂಜಿ
ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಹೇಳಿಕೆ
ದೇವರಗುಡ್ಡದ ಮಾಲತೇಶ ದೇವಸ್ಥಾನ ಭಕ್ತರ ಪಾಲಿನ ನೆಚ್ಚಿನ ಧಾರ್ಮಿಕ ಕಾರ್ಯಕ್ರಮವಾಗಿದೆ. ಇಲ್ಲಿ ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ. ಕಾರ್ಣಿಕೋತ್ಸವವನ್ನು ವರ್ಷದ ಭವಿಷ್ಯ ವಾಣಿ ಅಂತಲೇ ಇಲ್ಲಿನ ಜನರು ನಂಬುತ್ತಾರೆ.
ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರಿತಲೇ ಎಂದರೆ, ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ, ಬೇರೆಲ್ಲಾ ಮುದ್ದಾಯಿತಲೇ ಎಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ ಹೇಳಬಹುದು. ಅಂದರೆ ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ಳುತ್ತವೆ.. ಹೀಗೆ ರಾಜಕೀಯವಾಗಿ ವಿಶ್ಲೇಷಣೆ ಮಾಡಬಹುದು ಎಂದರು.